ಮಾಲ್ದಾರೆ : ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

KannadaprabhaNewsNetwork |  
Published : Dec 09, 2025, 02:00 AM IST
ಮಡಿಕೇರಿ  | Kannada Prabha

ಸಾರಾಂಶ

ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಎ.ಎಸ್‌. ಪೊನ್ನಣ್ಣ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಪ್ರಯುಕ್ತ ಭೇಟಿ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಸಿದ್ದಾಪುರ ಗ್ರಾಮದ ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ರವರು ವಿವಿಧ ಅಭಿವೃದ್ಧಿ ಕಾರ್ಯಕ್ರಮ ಪ್ರಯುಕ್ತ ಭೇಟಿ ನೀಡಿದರು. ಬಾಡಗ ಬಾಣಂಗಾಲ ಮಠಕ್ಕೆ, ₹ 20 ಲಕ್ಷ ಅನುದಾನದಲ್ಲಿ, ವಿದ್ಯುತ್ ಸಂಪರ್ಕ ಕಲ್ಪಿಸುವ ನೂತನ ವಿದ್ಯುತ್ ಮಾರ್ಗವನ್ನು ಉದ್ಘಾಟಿಸಿ ಶುಭ ಕೋರಿದ ಶಾಸಕರು, ಈ ವ್ಯಾಪ್ತಿಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ "ಲೈನ್ ಮ್ಯಾನ್ ಪರಶುರಾಮ್ " ಅವರನ್ನು ಗೌರವಿಸಲಾಯಿತು. ಬಳಿಕ ಭಜಗೊಳ್ಳಿ ಮಸೀದಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದರು.

ಇದೇ ಸಂದರ್ಭದಲ್ಲಿ ಬಾಣಂಗಲದಲ್ಲಿರುವ ಸೇತುವೆಯ ವೀಕ್ಷಣೆ ನೆರವೇರಿಸಿದ ಶಾಸಕರು ಸೇತುವೆಯ ಬಗ್ಗೆ ಮಾಹಿತಿಯನ್ನು ಪಡೆದು ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು. ನಂತರ ದಿಡ್ಡಳ್ಳಿಯ ತಟ್ಟಳ್ಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿದ ಪೊನ್ನಣ್ಣ, ಮಕ್ಕಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢರಾಗಲು ಪ್ರಾರಂಭಿಕ ಹಂತ ಅಂಗನವಾಡಿ ಕೇಂದ್ರಗಳು ಎಂದು ಅಂಗನವಾಡಿ ಕೇಂದ್ರಗಳ ಮಹತ್ವದ ಬಗ್ಗೆ ತಿಳಿ ಹೇಳಿದ ಶಾಸಕರು ಮಕ್ಕಳ ಭವಿಷ್ಯಕ್ಕೆ ಉತ್ತಮವಾದ ವಿದ್ಯಾಭ್ಯಾಸ ಒದಗಿಸಲು ಅಂಗನವಾಡಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕಿವಿ ಮಾತು ಹೇಳಿದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಈ ಅಂಗನವಾಡಿ ಕಟ್ಟಡಕ್ಕೆ ₹ 10 ಲಕ್ಷಗಳ ಅನುದಾನ ಒದಗಿಸಲಾಗಿತ್ತು. ಬಳಿಕ ಮೈಲಾಪುರದಲ್ಲಿ, ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ರಸ್ತೆಯ ಉನ್ನತೀಕರಣ ಮಾಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಸದರಿ ರಸ್ತೆಯ ಅಭಿವೃದ್ಧಿಗೆಂದು ಶಾಸಕರು ಸಮಗ್ರ ಗಿರಿಜನ ಕಲ್ಯಾಣ ಯೋಜನೆಯಡಿ ₹ 28 ಲಕ್ಷಗಳನ್ನು ಒದಗಿಸಿದ್ದರು. ಇದೆ ಸಂದರ್ಭದಲ್ಲಿ ಸಿದ್ದಪಾಜಿ ದೇವಸ್ಥಾನ ಅಭಿವೃದ್ಧಿಗೆ ಭೂಮಿ ಪೂಜೆ ನೆರೆವೇರಿಸಲಾಯಿತು.

ಈ ಸಂದರ್ಭ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇಣುಕಾ ಬೊಳ್ಳಪ್ಪ ಹೊಸಮಾನಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಜೋನ್ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕೆಡಿಪಿ ಸದಸ್ಯರಾದ ರಫೀಕ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ಪ್ರಮುಖರಾದ ಅಪ್ರು ರವೀಂದ್ರ, ಮಲ್ದಾರೆ ಪಂಚಾಯಿತಿ ಅಧ್ಯಕ್ಷೆ ಮಾಲತಿ, ವಲಯ ಅಧ್ಯಕ್ಷರಾದ ಸಜಿ ಥಾಮಸ್, ಸಿದ್ದಾಪುರ ವಲಯ ಅಧ್ಯಕ್ಷ ಪ್ರತೀಶ್, ಪಂಚಾಯತ್ ಸದಸ್ಯರಾದ ಮಹಮ್ಮದ್ ಆಲಿ, ಮೊಯಿದೀನ್, ಮನೋಹರ್, ಹೇಮಚಂದ್ರ, ರಫೀಕ್, ರಶೀದ್, ಅಬುಬುಕರ್, ಗಾಫುರ್, ಜಫರ್, ಅಶ್ರಫ್, ಹನೀಫ್, ಇಸ್ಮಾಯಿಲ್, ಅನಿಲ್, ಚೆಕು, ಚಿನ್ನಮ್ಮ, ಗಣೇಶ್, ಶಂಕರ, ನರೇಂದ್ರ ಕಾಮತ್, ಕುಂಡಚ್ಚಿರ ಮಂಜು ದೇವಯ್ಯ, ಶಬೀರ್, ಮಂಜುನಾಥ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಹಾಗೂ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಮಠದಲ್ಲಿ ನೂತನ ವಿದ್ಯುತ್ ಮಾರ್ಗ ಉದ್ಘಾಟನೆ, ದಿಡ್ಡಳ್ಳಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಹಾಗೂ ಮೈಲಾಪುರದಲ್ಲಿ ಕಾಂಕ್ರಿಟ್ ರಸ್ತೆ ಉದ್ಘಾಟನೆ ಮಾಡಲಾಗಿದ್ದು, ಸಿದ್ದಪ್ಪಾಜಿ ದೇವಾಲಯ ಅಭಿವೃದ್ಧಿಗಾಗಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಾರ್ವಜನಿಕರ ಅನುಕೂಲತೆಗಾಗಿ ಇವೆಲ್ಲ ಕಾರ್ಯಗಳನ್ನು ಮಾಡಲಾಗಿದೆ.

ಎ ಎಸ್ ಪೊನ್ನಣ್ಣ, ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಕಾಂಗ್ರೆಸ್‌-ಬಿಜೆಪಿ ಜಿದ್ದಾಜಿದ್ದಿನ ಹೋರಾಟ
ಜಿಲ್ಲಾಡಳಿತದಿಂದ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ