ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಮೂಡಲಮೋಳೆ ಗ್ರಾಮದಲ್ಲಿ ಶ್ರೀಗಣಪತಿ ದೇವಸ್ಥಾನ ಉದ್ಘಾಟನೆ, ಅಂಕ ಪ್ರತಿಷ್ಠಾಪನೆ ಮತ್ತು ಶ್ರೀ ಭಗೀರಥ ಮಹರ್ಷಿ ಪುತ್ಥಳಿ ಅನಾವರಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಹರ್ಷಿ ಭಗೀರಥ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದ ಸಮಾರಂಭದಲ್ಲಿ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ 30 ಲಕ್ಷಕ್ಕೂ ಹೆಚ್ಚಿನ ಸಂಖ್ಯೆ ಹೊಂದಿರುವ ಉಪ್ಪಾರ ಸಮುದಾಯ ಇಡೀ ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂದು ಹೇಳುತ್ತಾರೆ. ಬಹುದೊಡ್ಡ ಸಂಖ್ಯೆಯಲ್ಲಿರುವ ನಮ್ಮ ಸಮುದಾಯವು ಎಲ್ಲ ಕಡೆ ಒಂದುಗೂಡಬೇಕು. ಸಮಾಜದ ಅಭಿವೃದ್ಧಿ ಕಡೆ ಚಿಂತನೆ ಮಾಡಬೇಕಿದೆ ಎಂದರು.ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಸಮಾಜದ ಪ್ರಗತಿಗಾಗಿ ಹೇಳಲಾಗಿದೆ. ಅವರನ್ನು ನಾಲ್ಕು ಬಾರಿ ಆಯ್ಕೆಮಾಡಿ ಉಪ್ಪಾರ ಸಮುದಾಯಕ್ಕೆ ಗೌರವ ತಂದುಕೊಟ್ಟಿದ್ದೀರಿ. ಅವರು ಈ ಭಾಗ, ನಾಡಿನ ಅಭಿವೃದ್ಧಿ ಮಾಡಲಿ, ಉಪ್ಪಾರ ಸಮಾಜವನ್ನು ಮೀಸಲಾತಿ. ಪಟ್ಟಿಗೆ ಸೇರಿಸಬೇಕು ಎಂಬುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಸುಮರು 3.5 ವರ್ಷಗಳಿಂದ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿಗಳಿಗೆ, ಮಾಜಿ ಮುಖ್ಯಮಂತ್ರಿಗಳಲ್ಲಿ ಅನೇಕ ಬಾರಿ ಒತ್ತಡ ಮಾಡಿದ್ದೇವೆ. ಅವರು ಸದ್ಯದಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳುತಿದ್ದಾರೆ. ಅದನ್ನು ಅದಷ್ಟು ಬೇಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ನಮ್ಮ ಸಮಾಜವನ್ನು ಮೀಸಲಾತಿಪಟ್ಟಿಗೆ ಸೇರಿಸಿ. ಈ ಸಮಾಜ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಅಯ್ಯನ ಸರಗೂರು ಮಠದ ಶ್ರೀ ಮಹಾದೇವಸ್ವಾಮಿಜೀಗಳು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಶ್, ಮುಖಂಡರಾದ ಕೂಡ್ಲೂರು ಹನುಮಂತಶೆಟ್ಟಿ, ಮರಿಸ್ವಾಮಿ ರಾಜ್ಯ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ರಾಮಚಂದ್ರ, ತಾಲೂಕು ಕೆಡಿಪಿ ಸದಸ್ಯ ಶ್ರೀನಿವಾಸ, ಬಾಗಳಿ ರೇವಣ್ಣ ಮಾದೇಶ್ ಉಪ್ಪಾರ, ಯಜಮಾನರಾದ ಮಹದೇವಶೆಟ್ಟಿ, ನಂಜುಂಡಶೆಟ್ಟಿ, ನಂಜಪ್ಪ, ಮಹದೇವಶೆಟ್ಟಿ, ಗ್ರಾಪಂ ಮಾಜಿ ಸದಸ್ಯ ಎಂ.ಕೆ.ಚಂದ್ರು, ಮುಖಂಡರಾದ ಮಯೂರ, ಮಹದೇವ, ಮಂಟೇಸ್ವಾಮಿ, ಕುಮಚಹಳ್ಳಿ ಮಹೇಶ್, ಕುಮಾರಸ್ವಾಮಿ, ರವಿ ತಗಡೂರು, ಎಂ.ಸಿ.ಮಹೇಶ್, ಮಹೇಶ್ ಗಟ್ಟಿ, ಕೆಂಪರಾಜು, ಶಿವು ಅಂಗಡಿ ಗ್ರಾಮಸ್ಥರು ಭಾಗವಹಿಸಿದ್ದರು.