ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಶೀತ ವಾತಾವರಣದಿಂದಾಗಿ ಚಳಿಯ ತೀವ್ರತೆ ಇನ್ನೂ ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಈಗಿನ ಪರಿಸ್ಥಿತಿ ೨೦೦೧ ರಂತೆಯೇ ಹೋಲುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
ಹಿರಿಯರಲ್ಲಿ ಆರೋಗ್ಯ ಸಂಕಷ್ಟವಯಸ್ಕರಲ್ಲಿ ಸೈನಸ್ ನೋವು, ಕಫ ಸಮಸ್ಯೆ, ರಕ್ತದ ಒತ್ತಡದ ವ್ಯತ್ಯಾಸ, ಹಾಗೂ ಮಧುಮೇಹ ಹೃದಯರೋಗಿಗಳು ಹೆಚ್ಚಾಗಿ ಎಚ್ಚರಿಕೆ ವಹಿಸುವುದು ಅಗತ್ಯ. ಹಿರಿಯರಿಗೆ ಚಳಿ ಸಮಯದಲ್ಲಿ ಹೆಚ್ಚು ಅಪಾಯಕಾರಿಯಾಗಿದ್ದು ಜೋಮು ಹಿಡಿಯುವುದು, ಮೂಳೆ ನೋವು, ಎದೆಬಿಗಿತ ಮತ್ತು ಉಸಿರಾಟದ ತೊಂದರೆಗಳು ಹೆಚ್ಚಾಗುತ್ತಿವೆ. ಅದರಲ್ಲು ಮುಂಜಾನೆ ೨ ರಿಂದ ೫ ಗಂಟೆ ಸಮಯ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ತಾಪಮಾನ ತೀವ್ರವಾಗಿ ಕುಸಿಯುವುದರಿಂದ ಹೃದಯಾಘಾತ ಪ್ರಕರಣಗಳ ಸಾಧ್ಯತೆಯೂ ಹೆಚ್ಚು ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಚಳಿಯಿಂದ ಮನೆರಹಿತರು ಶೀತ ಗಾಳಿಯ ನೇರ ಪರಿಣಾಮಕ್ಕೆ ತುತ್ತಾಗುತ್ತಿದ್ದಾರೆ. ದೇಹದ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಇಳಿಯುವ ಹೈಪೋಥರ್ಮಿಯಾ ಪ್ರಕರಣಗಳು ಹೆಚ್ಚಾಗುವ ಭೀತಿ ಇದೆ. ಹಳೆಯ ಕಾಯಿಲೆಗಳ ತೀವ್ರಗತಿ, ಉಸಿರಾಟದ ತೊಂದರೆ ಮತ್ತು ರಾತ್ರಿ ತಂಗಲು ಸ್ಥಳದ ಕೊರತೆ ಮನೆರಹಿತರಿಗೆ ದೊಡ್ಡ ಸಂಕಷ್ಟವಾಗಿದೆ. ಇವರಿಗೆ ಜಿಲ್ಲಾಡಳಿತ ಮತ್ತು ನಗರಸಭೆಗಳು ಬ್ಲ್ಯಾಂಕೆಟ್, ತಾತ್ಕಾಲಿಕ ವಸತಿ ಕಲ್ಪಿಸಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ತೋಟಗಾರಿಕೆ ಬೆಳೆಗೆ ರೋಗಬಾಧೆತಾಪಮಾನ ಕುಸಿತ ಮತ್ತು ಹೆಚ್ಚಿದ ತೇವಾಂಶದಿಂದ ದಾನ್ಯ, ಬೀಜ, ತರಕಾರಿ ಬೆಳೆಗಳಲ್ಲಿ ಬೆಳವಣಿಗೆ ನಿಧಾನವಾಗಿದೆ. ಟೊಮೆಟೋ, ಬೀನ್ಸ್, ಬದನೇಕಾಯಿ, ಹೂಬೆಳೆಗಳಲ್ಲಿ ಪದೇ ಪದೇ ಕೀಟ ರೋಗಗಳು ಕಾಣಿಸಿಕೊಳ್ಳುತ್ತಿವೆ. ಬ್ಲೈಟ್, ಮಿಲ್ಡ್ಯೂ, ವಿಲ್ಟ್, ಎಲೆಕಲೆ ರೋಗಗಳು ತರಕಾರಿ ಬೆಳೆಗಳಿಗೆ ತೀವ್ರ ಹಾನಿ ಉಂಟುಮಾಡುತ್ತಿವೆ. ಬೆಳೆ ಬೆಳವಣಿಗೆ ನಿಧಾನಗೊಳ್ಳುವುದರಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆ ಕುಗ್ಗಿ ಬೆಲೆ ಏರಿಕೆ ಸಂಭವಿಸುವ ಸಾಧ್ಯತೆಯು ಇದೆ.ಚಳಿಯಿಂದ ದನ, ಮೇಕೆ-ಕುರಿಗಳಲ್ಲಿ ಹಾಲು ಉತ್ಪಾದನೆ, ಮಾಂಸ ಶೇಖರಣೆ ಕುಂದಿದ್ದು, ಹೊಸದಾಗಿ ಜನಿಸಿದ ಕರು ಮೇಕೆ ಕುರಿಗಳಿಗೆ ತೀವ್ರ ಚಳಿಯ ಅಪಾಯ ಹೆಚ್ಚಾಗಿದೆ. ಕೋಳಿ ಸಾಕಾಣಿಕೆಯಲ್ಲೂ ರೋಗಗಳ ಬೀದಿ ಹೆಚ್ಚಾಗಿದೆ, ರೇಷ್ಮೆ ಉತ್ಪಾದನೆಯಲ್ಲೂ ತೀವ್ರ ಪರಿಣಾಮ ಬೀರುವ ಸಾದ್ಯತೆ ಇದೆ. ಬೆಳೆ ರಕ್ಷಣೆಗಾಗಿ ರೈತರು ಹೆಚ್ಚಿನ ನಿಘಾ ವಹಿಸಿ ಸೂಕ್ತ ಸಲಹೆ ಪಡೆದು ಚಿಕಿತ್ಸೆ ಒದಗಿಸಬೇಕಾಗಿದೆ.ಚಳಿ ಮುಂದುವರಿಕೆ ಸಾಧ್ಯತೆಜನವರಿ ಫೆಬ್ರವರಿಯಲ್ಲಿ ರಾತ್ರಿ, ಮುಂಜಾನೆ ಚಳಿ ಮುಂದುವರಿಯಲಿದ್ದು, ಸಮತಟದ ಕಡಿಮೆ ಒತ್ತಡದ ವಲಯ ಕುಗ್ಗಿದಂತೆ ತಾಪಮಾನ ನಿಧಾನವಾಗಿ ಏರಿಕೆಯಾಗಲಿದೆ. ಮಾರ್ಚ್ ವೇಳೆಗೆ ಸಾಮಾನ್ಯ ಬೇಸಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಚಳಿಯ ಈ ಅವಧಿಯಲ್ಲಿ ಆರೋಗ್ಯ ಜಾಗೃತಿ, ಮನೆರಹಿತರಿಗೆ ಆಶ್ರಯದ ವ್ಯವಸ್ಥೆ ಮತ್ತು ರೈತರಿಗೆ ತಾಂತ್ರಿಕ ಆರ್ಥಿಕ ಬೆಂಬಲ ಅತ್ಯಂತ ಅಗತ್ಯ. ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ ಆರೋಗ್ಯ ಮತ್ತು ಕೃಷಿ ಎರಡೂ ಕ್ಷೇತ್ರಗಳಲ್ಲಿ ನಷ್ಟ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಜ್ಞರು ಅಭಿಪ್ರಾಯವಾಗಿದೆ.