ಚೆಕ್‌ಡ್ಯಾಂಗಳಿಂದ ಅಂತರ್ಜಲಮಟ್ಟ ಹೆಚ್ಚಳ: ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Jan 24, 2025, 12:46 AM IST
೨೨ವೈಎಲ್‌ಬಿ೧:ಯಲಬುರ್ಗಾ ತಾಲೂಕಿನ ಬಳೂಟಗಿ ಗ್ರಾಮದ ಹಳ್ಳಕ್ಕೆ ೧.೮೦ ಕೋಟಿ ರೂ ವೆಚ್ಚದಲ್ಲಿ ಮಂಜೂರಾದ ಬ್ರೀಡ್ಜ ಕಂ/ ಚೆಕಡ್ಯಾಂ ನಿರ್ಮಾಣ ಕಾಮಗಾರಿಗೆ ಬುಧವಾರ  ಶಾಸಕ ಬಸವರಾಜ ರಾಯರಡ್ಡಿ ಭೂಮಿಪೂಜೆ ನೇರವೇರಿಸಿ ಮಾತನಾಡಿದರು. | Kannada Prabha

ಸಾರಾಂಶ

ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಜತೆಗೆ ಜಾನುವಾರುಗಳಿಗೆ ನೀರು ಕುಡಿಸಲು ಹೆಚ್ಚು ಉಪಯುಕ್ತವಾಗಲಿವೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಚೆಕ್ ಡ್ಯಾಂಗಳನ್ನು ನಿರ್ಮಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಜತೆಗೆ ಜಾನುವಾರುಗಳಿಗೆ ನೀರು ಕುಡಿಸಲು ಹೆಚ್ಚು ಉಪಯುಕ್ತವಾಗಲಿವೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಬಳೂಟಗಿ ಗ್ರಾಮದ ಹಳ್ಳಕ್ಕೆ ₹೧.೮೦ ಕೋಟಿ ವೆಚ್ಚದಲ್ಲಿ ಮಂಜೂರಾದ ಬ್ರಿಡ್ಜ್‌ ಕಂ/ ಚೆಕ್‌ಡ್ಯಾಂ ನಿರ್ಮಾಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಯಾವ ಕಾರಣಕ್ಕೂ ಕಳೆಪೆ ಕಾಮಗಾರಿಯಾಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು. ಮಳೆಗಾಲದಲ್ಲಿ ಈ ಗ್ರಾಮದ ಹಳ್ಳದ ನೀರು ತುಂಬಿಕೊಂಡು ಜನರ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಇದರಿಂದ ಜನರು ಸಾಕಷ್ಟು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದರೂ ಒಮ್ಮೊಮ್ಮೆ ಇಡೀ ರಾತ್ರಿಯಿಡಿ ಮಳೆ ನಿಂತರೂ ಹಳ್ಳದ ನೀರು ಸರಾಗವಾಗಿ ಹರಿದು ಹೋಗದೆ ಸಂಕಷ್ಟ ಅನುಭವಿಸುತ್ತಿದ್ದರೂ ಹೀಗಾಗಿ ಬ್ರಿಡ್ಜ್‌ ಮಾಡಬೇಕೆಂಬುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಇವತ್ತು ಅದನ್ನು ನಿರ್ಮಿಸಲು ಕಾಲ ಕೂಡಿಬಂದಿದೆ ಎಂದು ಹೇಳಿದರು.

ಬಳೂಟಗಿ ಗ್ರಾಮದ ಪಕ್ಕದಲ್ಲೇ ಹೆದ್ದಾರಿ ರಸ್ತೆ ಬಂದಿರುವುದರಿಂದ ಈ ಗ್ರಾಮಕ್ಕೆ ರಿಂಗ್ ರೋಡ್‌ ಮೂಲಕ ಹೆದ್ದಾರಿ ರಸ್ತೆಯನ್ನಾಗಿ ಮಾಡಿಕೊಡುತ್ತೇನೆ. ಹಳ್ಳದ ನೀರು ವ್ಯರ್ಥವಾಗಿ ಹರಿದು ಹೋಗದಂತೆ ಚೆಕ್‌ಡ್ಯಾಂ ನಿರ್ಮಾಣದಿಂದ ನೀರು ಸಂಗ್ರಹವಾಗಿ ಅಂರ್ತಜಲ ಹೆಚ್ಚಳವಾಗುವ ಜೊತೆಗೆ ಜಾನುವಾರುಗಳಿಗೆ ನೀರು ಕುಡಿಸಲು ಹೆಚ್ಚು ಅನುಕೂಲವಾಗುತ್ತದೆ ಎಂದರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಾದ ಪ್ರಕಾಶ ಪಾಟೀಲ, ಜಗನ್ನಾಥ ಜ್ಯೋತಿಕೊಂಡ, ಶ್ರೀಧರ ತಳವಾರ, ಪಿಡಿಒ ಫಯಾಜ್, ಜಯಶ್ರೀ ಹಿರೇಮಠ ಹಾಗೂ ಕಾಂಗ್ರೆಸ್ ಮುಖಂಡರಾದ ವೀರನಗೌಡ ಬಳೂಟಗಿ, ಸಂಗಣ್ಣ ಟೆಂಗಿನಕಾಯಿ, ಶಾಂತಮ್ಮ ಪುರ್ತಿಗೇರಿ, ಅಂದಾನಗೌಡ ಪೋಲಿಸ್‌ಪಾಟೀಲ, ಸುಧೀರ ಕೊರ್ಲಳ್ಳಿ, ಆನಂದ ಉಳ್ಳಾಗಡ್ಡಿ, ಡಾ. ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಶರಣಗೌಡ ಪಾಟೀಲ, ನಿಂಗಪ್ಪ ಕಮತರ, ನಾಗಪ್ಪ ವಡ್ಡರ್, ಹನುಮಂತ ಭಜೇಂತ್ರಿ, ಹುಲಗಪ್ಪ ಬಂಡಿವಡ್ಡರ್, ಅಲ್ಲಾಸಾಬ ಕಟ್ಟಮನಿ, ಹಂಪಯ್ಯ ಹಿರೇಮಠ, ಶರಣಗೌಡ ಓಜನಹಳ್ಳಿ ಯಮನೂರಪ್ಪ ಬೇವಿನಗಿಡದ ಸೇರಿದಂತೆ ಗ್ರಾಪಂ ಉಪಾಧ್ಯಕ್ಷರು, ಸರ್ವ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ