ಹಳಿಯಾಳ: ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ನಿರುದ್ಯೋಗ ಹೆಚ್ಚಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಇನ್ನೊಂದೆಡೆ ಮಾನವನ ಗೌರವ ಕುಸಿದಿದೆ. ಮಾನವ ಜೀವಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಆರೋಪಿಸಿದರು.
ಭಾನುವಾರ ಪಟ್ಟಣದಲ್ಲಿ ಲೋಕಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಯು ಬಡವರಿಗೆ, ಮಹಿಳೆಯರಿಗೆ, ಕಾರ್ಮಿಕರಿಗೆ, ಅಲ್ಪಸಂಖ್ಯಾತರು, ದಲಿತರಿಗೆ ಏನು ಮಾಡಿದೆ? ಇದನ್ನು ಜನರು ಪ್ರಶ್ನಿಸಬೇಕು ಎಂದರು.ರಾಜ್ಯದಲ್ಲಿ ಬರಗಾಲ ಬಿದ್ದಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಪ್ರಧಾನ ಮಂತ್ರಿಗಳನ್ನು ಭೇಟಿಯಾದರೂ ಈ ವರೆಗೆ ಕೇಂದ್ರ ಸರ್ಕಾರವು ಬರ ಪರಿಹಾರಕ್ಕಾಗಿ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಲಿಲ್ಲ. ಇಂತಹ ಜನವಿರೋಧಿ ಸರ್ಕಾರ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಉತ್ತರ ಕನ್ನಡ ಕ್ಷೇತ್ರಕ್ಕೆ ಕಾಂಗ್ರೆಸ್ ಎರಡನೇ ಬಾರಿಗೆ ಮಹಿಳೆಯರಿಗೆ ಟಿಕೆಟ್ ನೀಡಿದೆ. ಮೊದಲ ಬಾರಿಗೆ ಆಳ್ವ ಈಗ ಡಾ. ಅಂಜಲಿ ನಿಂಬಾಳ್ಕ ಅವರಿಗೆ ಕೊಟ್ಟಿದೆ. ಡಾ. ಅಂಜಲಿ ಒಳ್ಳೆಯ ಅಭ್ಯರ್ಥಿ. ಆಡಳಿತದ ಅಪಾರ ಅನುಭವ ಇದೆ. ಸಂಸದರಾದಲ್ಲಿ ಕ್ಷೇತ್ರದ ಪರವಾಗಿ ಸಂಸತ್‌ನಲ್ಲಿ ಧ್ವನಿಯೆತ್ತಲಿದ್ದಾರೆ ಎಂದರು.ಸಭೆಯಲ್ಲಿ ಬೆಳವಟಗಿ ಗ್ರಾಮದ ಹಲವು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಿದರು. ಕೆಪಿಸಿಸಿ ಸದಸ್ಯ ಸುಭಾಸ ಕೊರ್ವಕರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲಾ ಬೃಗಾಂಜಾ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಉಮೇಶ ಬೊಳಶೆಟ್ಟಿ, ಮಾರುತಿ ಕಲಬಾವಿ ಹಾಗೂ ಇತರರು ಇದ್ದರು.
ಗ್ಯಾರಂಟಿಗಳೇ ಶ್ರೀರಕ್ಷೆಹಳೆ ದಾಂಡೇಲಿಯ ಗಾಂಧಿ ಚೌಕ ಬಳಿ ಭಾನುವಾರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ದೇಶಪಾಂಡೆ, ಇಂದು ಸಂವಿಧಾನ ಇರುವ ಕಾರಣ ಚುನಾವಣೆ ನಡೆಯುತ್ತಿವೆ. ಇಲ್ಲವಾದರೆ ಮೋದಿ ದರ್ಬಾರ್‌ನಲ್ಲಿ ಚುನಾವಣೆ ನಡೆಯುತ್ತಿತ್ತು. ಮೋದಿಯವರ ಸರ್ವಾಧಿಕಾರಿ ನೀತಿಯನ್ನು ಅಂಬೇಡ್ಕರರ ಸಂವಿಧಾನ ಕಟ್ಟಿಹಾಕಿದೆ ಎಂದರು.ಈ ಸಂದರ್ಭದಲ್ಲಿ ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಮಾಜಿ ಅಧ್ಯಕ್ಷ ವಿ.ಆರ್. ಹೆಗಡೆ, ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಕ್ಬಾಲ ಶೇಖ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ರೇಣುಕಾ ಬಂದಮ್ಮ, ಪ್ರಕ್ಷದ ಪ್ರಮುಖರಾದ ಸಪುರಾ ಯರಗಟ್ಟಿ, ಶಿಲ್ಪಾ ಖೋಡೆ, ವೆಂಕಟರಮಣಮ್ಮ ಮೈತಕುರಿ, ಅನಿಲ ರಾಯಕರ, ಕೀರ್ತಿ ಗಾಂವಕರ, ಅನಿಲ ದಂಡಗಲ, ಉಸ್ಮಾನ ವಾಹಬ ಮುಂತಾದವರು ಉಪಸ್ಥಿತರಿದ್ದರು.