ದಾಬಸ್‍ಪೇಟೆ: ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕೃಷಿ ಸಖಿ ಹಾಗೂ ಮತ್ತು ಪಶು ಸಖಿಯರ ಗೌರವಧನ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಶಾಸಕ ಶ್ರೀನಿವಾಸ್ ಹೇಳಿದರು
ದಾಬಸ್‍ಪೇಟೆ: ಗ್ರಾಪಂ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಕೃಷಿ ಸಖಿ ಹಾಗೂ ಮತ್ತು ಪಶು ಸಖಿಯರ ಗೌರವಧನ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ ಶಾಸಕ ಶ್ರೀನಿವಾಸ್ ಹೇಳಿದರು.
ಗೃಹಕಚೇರಿಯಲ್ಲಿ ಕೃಷಿಸಖಿ ಮತ್ತು ಪಶುಸಖಿಯರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕೃಷಿಸಖಿ ಮತ್ತು ಪಶುಸಖಿಯರು ಕೃಷಿ ಇಲಾಖೆ, ಪಶುಸಂಗೋಪನಾ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ಹಾಗೂ ರೈತರಿಗೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಿ, ರೈತರಿಗೆ ಯೋಜನೆಗಳ ಅರಿವು ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಈ ಹಿಂದೆ ಕೃಷಿ ಮತ್ತು ಪಶುಸಖಿಯರಿಗೆ ಸಂಜೀವಿನಿ ಒಕ್ಕೂಟದಿಂದ 3750 ರು.ಗಳ ಗೌರವ ಧನ ನೀಡುತ್ತಿದ್ದರು. ನಂತರ 4500 ರು. ನೀಡುತ್ತಿದ್ದಾರೆ. ಇಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅವರಿಗೆ ನೀಡುತ್ತಿರುವ ಗೌರವ ಧನ 10,000 ರು.ಗಳಿಗೆ ಹೆಚ್ಚಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ತಾಲೂಕಿನ ಕೃಷಿಸಖಿ ಮತ್ತು ಪಶುಸಖಿಯರು ಮನವಿ ಮಾಡಿದ್ದು, ಖಂಡಿತವಾಗಿಯೂ ಚರ್ಚಿಸುತ್ತೇನೆ ಎಂದು ಶ್ರೀನಿವಾಸ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೃಷಿಸಖಿ ಮತ್ತು ಪಶುಸಖಿಯರಾ ಅನಿತಾ, ಸಾವಿತ್ರಮ್ಮ, ವಿದ್ಯಾ, ಆಶಾ, ಗಂಗಮ್ಮ, ಲಕ್ಷ್ಮೀದೇವಿ, ರೇಣುಕಾ, ನಾಗರತ್ನ, ಜಯಮ್ಮ ಇತರರಿದ್ದರು.
ಪೋಟೋ 2 :
ನೆಲಮಂಗಲದ ಗೃಹಕಚೇರಿಯಲ್ಲಿ ಕೃಷಿಸಖಿ ಮತ್ತು ಪಶುಸಖಿಯರು ಗೌರವ ಧನ ಹೆಚ್ಚಳ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸುವಂತೆ ಶಾಸಕ ಶ್ರೀನಿವಾಸ್‌ಗೆ ಮನವಿ ಪತ್ರ ಸಲ್ಲಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.