ಶಿವಮೊಗ್ಗ: ನಮ್ಮಲ್ಲಿ ಜನಸಂಖ್ಯೆ ಇದೆ. ಆದರೆ, ಸಂಘಟನೆಯ ಕೊರತೆ ಇದೆ. ಸಹಕಾರ ಸಂಘಗಳು ಬೆಳೆಯ ಬೇಕಾದರೆ ಷೇರುದಾರರ ಸಂಖ್ಯೆ ಹೆಚ್ಚಾಗಬೇಕು ಎಂದು ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಆರ್.ಅವಿನ್ ಹೇಳಿದರು. ಬಾಪೂಜಿ ನಗರದಲ್ಲಿರುವ ಗಂಗಾಮತ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಗಂಗಾಪರಮೇಶ್ವರಿ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕರು ಪಡೆದ ಸಾಲವನ್ನು ತಪ್ಪದೇ ಮರುಪಾವತಿ ಮಾಡಬೇಕು. ಸಂಘ ಅತಿ ಬೇಗನೆ ಬ್ಯಾಂಕಾಗಿ ಪರಿವರ್ತನೆ ಆಗಲಿ ಎಂದು ಆಶಿಸಿದರು.ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಎಂ.ರಾಮಚಂದ್ರಪ್ಪ ಮಾತನಾಡಿ, ಯಾವುದೇ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಮುನ್ನಡೆಗೆ ಬರಬೇಕು ಎಂದರೆ ಎಲ್ಲರ ಸಹಕಾರ, ಸದಸ್ಯರ ಪಾತ್ರ ದೊಡ್ಡದಿದೆ. ಎಲ್ಲರೂ ಸಂಘಟಿತರಾಗಬೇಕು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಘ ತಲುಪಬೇಕು, ಸದ್ಯಸರು ಸಂಘವನ್ನು ಬಳಸಿಕೊಳ್ಳಬೇಕು ಎಂದರು.
ಚಿಕ್ಕಮಗಳೂರು ನಗರಸಭೆ ಎಂಜಿನಿಯರ್ ಎಂ.ವಿ.ಲೋಕೇಶ್ ಮಾತನಾಡಿ, ಸಂಘ ಬೆಳೆಯಲು ಎಲ್ಲರ ಸಹಕಾರ ಬೇಕು ಎಂದರು.ಗಂಗಾಮತ ಸಮಾಜದ ಉಪಾಧ್ಯಕ್ಷ ಎಸ್.ಬಿ.ಆಶೋಕ್ ಕುಮಾರ್ ಮಾತನಾಡಿ, ಗಾಂಧಿ ಬಸಪ್ಪನವರು ಒಳ್ಳೆಯ ಉದ್ದೇಶದಿಂದ ಈ ಸಂಘ ಸ್ಥಾಪನೆ ಮಾಡಿದರು. ಇಲ್ಲಿ ಸಾಲ ಪಡೆದವರು ತಪ್ಪದೆ ಮರುಪಾವತಿ ಮಾಡಬೇಕು. ವಸೂಲಾತಿಗೆ ಬಿಗಿ ಕ್ರಮ ಅನುಸರಿಸಬೇಕು ಎಂದು ಹೇಳಿದರು.ಇದೇ ವೇಳೆ ಆರುಂಡಿ ಶ್ರೀನಿವಾಸ್, ಎಸ್.ಸಿ.ವಿಶ್ವನಾಥ, ಜೆ.ವಿಶ್ವನಾಥ್ ಅವರುಗಳನ್ನು ಸನ್ಮಾನಿಸಲಾಯಿತು.ಸಂಘದ ಅಧ್ಯಕ್ಷ ಎ.ಹಾಲೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಗಂಗಾಮತ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಕೆಂಚಪ್ಪ, ಮಹಿಳಾ ಸಂಘದ ಅಧ್ಯಕ್ಷೆ ರೂಪ ಹೇಮಂತ ಕುಮಾರ್, ನಿರ್ದೇಶಕರಾದ ಪಿ.ನಾಗೇಶ್ (ಬಾಬು), ಟಿ.ಎಸ್.ಮಂಜುನಾಥ್, ಮಂಜುಳಾ ಸುಲ್ತಾನ್ ರಂಗನಾಥ್ ಪಿಳ್ಳೆಂಗೆರೆ, ರಾಜೇಶ್, ಶ್ರೀನಿವಾಸ್ ಕೂಡಲಿ, ಜಗನ್ನಾಥ.ಎಚ್.ಎಂ, ಕಾರ್ಯದರ್ಶಿ ಹರೀಶ್, ಹನುಮೇಶ್ ಸೇರಿದಂತೆ ಹಲವರಿದ್ದರು. ಲೆಕ್ಕ ಪರಿಶೋಧಕ ಜನಾರ್ದನ್.ಆರ್ ಲೆಕ್ಕ ಪತ್ರ ಮಂಡಿಸಿದರು.ಸಮೃದ್ಧಿ ಪ್ರಾರ್ಥಿಸಿದರು. ಸಂಘದ ಉಪಾದ್ಯಕ್ಷ ಜಿ.ಶೇಖರಪ್ಪ ಸಂಘ ಬೆಳೆದು ಬಂದ ದಾರಿ ಬಗ್ಗೆ ತಿಳಿಸಿದರು. ಎಸ್‌ಬಿಐ ಬ್ಯಾಂಕ್ ಅಧಿಕಾರಿಗಳು ವ್ಯವಹಾರದ ಬಗ್ಗೆ ಮಾಹಿತಿ ನೀಡಿದರು.