ಹುಬ್ಬಳ್ಳಿ:
ಇಲ್ಲಿಯ ಎಪಿಎಂಸಿ ಬಳಿಯ ಹು-ಧಾ ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಬುಧವಾರದಿಂದ ಮೂರು ದಿನ ನಡೆಯಲಿರುವ ವಾಲ್ವ ಎಕ್ಸ್- 2026 ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಉದ್ಯಮ ರಂಗದಲ್ಲಿ ಗುಣಮಟ್ಟದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ಜತೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಇಟ್ಟುಕೊಳ್ಳಬೇಕು. ಉತ್ಪಾದನೆಗೆ ನಿಖರ ಹಾಗೂ ಸರಳೀಕೃತ ವಿಧಾನ ಬಳಸಬೇಕು. ಕೇವಲ ಬೇಡಿಕೆ ಬಂದಷ್ಟೇ ಉತ್ಪಾದನೆ ಮಾಡುವ ಬದಲು ದೊಡ್ಡ ಮಟ್ಟದಲ್ಲಿ ತಯಾರಿಸಿ ಸ್ಟಾಕ್ ಇಟ್ಟುಕೊಂಡರೆ ವೆಚ್ಚ ತಾನಾಗಿಯೇ ಕಡಿಮೆಯಾಗುತ್ತದೆ. ಇದಕ್ಕಾಗಿ ದಿನದ 24 ಗಂಟೆ, ವಾರದ ಎಲ್ಲ ದಿನಗಳು ಯಂತ್ರಗಳು ರನ್ ಆಗುತ್ತಿರಬೇಕು. ಆಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.ನಿರಾಣಿ ಗ್ರುಪ್ನ ಸಂಗಮೇಶ ನಿರಾಣಿ ಮಾತನಾಡಿ, ಹುಬ್ಬಳ್ಳಿಯು ವಾಲ್ವ ಹಾಗೂ ಪಂಪ್ ಉತ್ಪಾದನೆಗೆ ಹೆಸರು ಪಡೆದಿದೆ. ಜಗತ್ತಿನ ಹಲವು ದೇಶಗಳಿಗೆ ಶ್ರೇಷ್ಠ ಎಂಜಿನಿಯರ್ಗಳು ಇಲ್ಲಿಂದಲೇ ಹೋಗಿದ್ದಾರೆ. ಅವರೆಲ್ಲ ಇಲ್ಲಿಯೇ ಉದ್ಯಮ ಆರಂಭಿಸಿದ್ದರೆ ಹುಬ್ಬಳ್ಳಿ ಐಟಿ-ಸಿಟಿ ಆಗುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ, ದ್ವಿತೀಯ ಸ್ತರದ ನಗರಗಳತ್ತ ಉದ್ಯಮಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಹುಬ್ಬಳ್ಳಿ ದೊಡ್ಡ ಕೈಗಾರಿಕಾ ನಗರಿಯಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೈಕ್ರೋಫಿನಿಷ್ ವಾಲ್ವ ಕಂಪನಿಯ ಸಂಸ್ಥಾಪಕ ತಿಲಕ ವಿಕಂಶಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಲಕ ವಿಕಂಶಿ, 2ನೇ ವಾಲ್ವ ಎಕ್ಸ್ ಪ್ರದರ್ಶನ ಇದಾಗಿದ್ದು, ಬಹಳಷ್ಟು ಸುಧಾರಣೆಗಳು ಆಗಿವೆ. ಅಂತಾರಾಷ್ಟ್ರೀಯ ಕಂಪನಿಗಳು ಸಹ ಭಾಗಿಯಾಗಿರುವುದು ಖುಷಿಯ ಸಂಗತಿ ಎಂದರು.
ಸಂಟನೆಯ ಶಿವಾನಂದ ಆವಟಿ, ಎಂಎಸ್ಎಂಇ ಜಂಟಿ ನಿರ್ದೇಶಕ ಶಶಿಕುಮಾರ ಎಂ. ಮಾತನಾಡಿದರು. ಮಹದೇವ ಕರಮರಿ, ನಾಗರಾಜ ದಿವಟೆ, ಅನಿಶ ಅಹ್ಮದ, ಮಹಾಂತೇಶ ದಳವಾಯಿ, ಮಹೇಂದ್ರ ವಿಕಂಶಿ, ವಿ.ಜಿ. ಚಿಲ್ಲಾಳ, ಸಂಗಮೇಶ ದೇಸಾಯಿ ಸೇರಿದಂತೆ ಹಲವರಿದ್ದರು.