ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ ೧೯೦೫ರಲ್ಲಿ ಸಿದ್ದನಗೌಡ ಪಾಟೀಲ್ ಸ್ಥಾಪಿಸಿದ್ದು, ಇದು ಹೆಮ್ಮರವಾಗಿ ಬೆಳೆದಿದೆ. ರಾಜ್ಯವು ಸಹಕಾರ ಕ್ಷೇತ್ರದಲ್ಲಿ ೩ನೇ ಸ್ಥಾನದಲ್ಲಿದೆ. ೪೬ ಸಾವಿರ ವಿವಿಧೋದ್ದೇಶ ಸಹಕಾರ ಸಂಘಗಳಿದ್ದು, ೨.೫ ಕೋಟಿ ಜನರು ಸದಸ್ಯರಿದ್ದಾರೆ.
ಕುಕನೂರು: ಸಹಕಾರ ಸಂಸ್ಥೆ ಹಾಗೂ ರಾಜಕೀಯದಲ್ಲಿ ವಂಶ ಪರಂಪರೆ ಆಡಳಿತ ಹೆಚ್ಚಾಗುತ್ತಿದ್ದು, ಇದಕ್ಕೆ ಸರ್ಕಾರದಲ್ಲಿ ಕಾನೂನು ರೂಪಿಸುವುದು ಅಗತ್ಯವಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಭಾನಾಪುರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮಾಡಲು ಮುಂದಾಗಿದೆ. ಅಲ್ಲದೇ ಸರ್ಕಾರ ಮಾಡದ ಕೆಲಸವನ್ನು ಸಹಕಾರ ಸಂಘದಿಂದ ಕಾರ್ಯ ನಡೆಯುತ್ತವೆ. ರೈತರಿಗೆ ₹೫ ಲಕ್ಷ ವರೆಗೂ ಬಡ್ಡಿ ರಹಿತ ಸಾಲ ಸೌಲಭ್ಯ ದೊರೆಯುತ್ತದೆ. ಗದಗ ಜಿಲ್ಲೆಯ ಕನಗಿನಹಾಳ ಗ್ರಾಮದಲ್ಲಿ ೧೯೦೫ರಲ್ಲಿ ಸಿದ್ದನಗೌಡ ಪಾಟೀಲ್ ಸ್ಥಾಪಿಸಿದ್ದು, ಇದು ಹೆಮ್ಮರವಾಗಿ ಬೆಳೆದಿದೆ. ರಾಜ್ಯವು ಸಹಕಾರ ಕ್ಷೇತ್ರದಲ್ಲಿ ೩ನೇ ಸ್ಥಾನದಲ್ಲಿದೆ. ೪೬ ಸಾವಿರ ವಿವಿಧೋದ್ದೇಶ ಸಹಕಾರ ಸಂಘಗಳಿದ್ದು, ೨.೫ ಕೋಟಿ ಜನರು ಸದಸ್ಯರಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ ೩೩ ಸಹಕಾರಿ ಸಂಘಗಳಿದ್ದು, ಇನ್ನು ಪ್ರಸಕ್ತ ವರ್ಷದಲ್ಲಿ ೮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ರಚನೆ ಮಾಡಲಾಗುವುದು. ಯಲಬುರ್ಗಾ ಪಿಎಲ್‌ಡಿ ಬ್ಯಾಂಕ್ ಸುಧಾರಣೆ ಹೆಚ್ಚು ಸಹಕಾರ ನೀಡಲಾಗುವುದು. ಸಹಕಾರ ಕ್ಷೇತ್ರದ ಬಗ್ಗೆ ಹೆಚ್ಚು ಗಮನ ಹರಿಸಿಲ್ಲ. ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಪ್ರಗತಿಗೆ ಹೆಚ್ಚು ಒತ್ತು ನೀಡಿ, ಈ ಕ್ಷೇತ್ರದ ಪ್ರಗತಿಯತ್ತ ತೆಗೆದುಕೊಂಡು ಹೋಗಲಾಗುವುದು ಎಂದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕ ದಸ್ತಗಿರಿ ಅಲಿ, ಸಹಾಯಕ ಉಪನಿಬಂಧಕ ಅಧಿಕಾರಿ ಪ್ರಕಾಶ ಸಜ್ಜನ್, ಸಹಕಾರ ಸಂಘದ ಮುಖ್ಯ ಪ್ರಬಂಧಕ ಬಸವರಾಜ ಮಠದ, ತಳಕಲ್ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡರ ಮೇಟಿಗೌಡರ, ಗ್ರಾಪಂ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರಾ ಬಂಗೇರ, ಸದಸ್ಯರಾದ ನೀಲಕಂಠಯ್ಯ ಸಸಿಮಠ, ರೇಣುಕಾ ತಳವಾರ, ದೇವೇಂದ್ರಪ್ಪ ಕಮ್ಮಾರ, ಭೀಮಯ್ಯ ಸಸಿ, ಮೈಲಾರಗೌಡ, ಪ್ರಮುಖರಾದ ಕೃಷ್ಣ ಇಟ್ಟಂಗಿ, ಹನುಮೇಶ್ ಕಡೆಮನಿ, ಅಶೋಕ ತೋಟದ, ನಿಂಗನಗೌಡ ಡಂಬಳ, ಭೀಮಣ್ಣ ಕುಂಡಿ, ಸಂಕ್ರಪ್ಪ ಜಗ್ಲಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.