ಮಕ್ಕಳಲ್ಲಿ ಸಂಸ್ಕಾರ ಮತ್ತು ದೇಶಭಕ್ತಿ ತುಂಬಿ

KannadaprabhaNewsNetwork |  
Published : Jan 08, 2024, 01:45 AM IST
ಫೋಟೋ : ೭ಕೆಎಂಟಿ_ಜೆಎಎನ್_ಕೆಪಿ1: ಸಂತೇಗುಳಿ ಪ್ರೌಢಶಾಲೆಯ ಸಭಾಭವನದಲ್ಲಿ ಬಾಲಮೇಳವನ್ನು ಎಂ.ಜಿ.ಭಟ್ ಉದ್ಘಾಟಿಸಿದರು. ಶೈಲಾ ನಾಯ್ಕ, ವಿನಾಯಕ ಭಟ್, ಉದಯ ಭಟ್, ಜಮಾಲ್ ಸಾಬ್, ಮಾದೇವಿ ಮುಕ್ರಿ, ಭಾರತೀ ಮುಕ್ರಿ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ದೇಶಭಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ ತಮ್ಮ ಮಕ್ಕಳನ್ನು ದೇಶದ ಅತ್ಯುತ್ತಮ ನಾಗರಿಕರನ್ನಾಗಿ ಸಿದ್ಧಪಡಿಸಬೇಕು

ಕುಮಟಾ: ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮತ್ತು ದೇಶಭಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ ತಮ್ಮ ಮಕ್ಕಳನ್ನು ದೇಶದ ಅತ್ಯುತ್ತಮ ನಾಗರಿಕರನ್ನಾಗಿ ಸಿದ್ಧಪಡಿಸಬೇಕು ಎಂದು ಪ್ರೊ. ಎಂ.ಜಿ. ಭಟ್ ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಆಶ್ರಯದಲ್ಲಿ ಸಂತೇಗುಳಿಯ ಪ್ರೌಢಶಾಲೆಯ ಸಭಾಭವನದಲ್ಲಿ ಸಂತೇಗುಳಿ, ಸೊಪ್ಪಿನಹೊಸಳ್ಳಿ, ಮೂರೂರು ಹಾಗೂ ಕಲ್ಲಬ್ಬೆ ಪಂಚಾಯಿತಿ ವತಿಯಿಂದ ಬಾಲಮೇಳ ಉದ್ಘಾಟಿಸಿ ಮಾತನಾಡಿದರು.

ಸೊಪ್ಪಿನಹೊಸಳ್ಳಿ ಪಂಚಾಯಿತಿ ಅಧ್ಯಕ್ಷೆ ಶೈಲಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾದ ಸಂತೇಗುಳಿ ಪಂಚಾಯಿತಿ ಮಾಜಿ ಅಧ್ಯಕ್ಷ ವಿನಾಯಕ ಭಟ್, ಜನಪರ ಹೊರಾಟ ವೇದಿಕೆ ಉಪಾಧ್ಯಕ್ಷ ಉದಯ ಭಟ್, ವಿವಿಧ ಪಂಚಾಯಿತಿ ಸದಸ್ಯರಾದ ಜಮಾಲ್ ಸಾಬ್, ಮಾದೇವಿ ಮುಕ್ರಿ, ಭಾರತೀ ಮುಕ್ರಿ, ಮೇಲ್ವಿಚಾರಕರಾದ ಇಂದಿರಾ ಹರಿಕಾಂತ, ಭಾರತಿ ಪಟಗಾರ ಇದ್ದರು.

ಬಂಗಣೆ ಅಂಗನವಾಡಿ ಕಾರ್ಯಕರ್ತೆ ಯಮುನಾ ಅವರೊಂದಿಗೆ ಅಂಗನವಾಡಿ ಮಕ್ಕಳಾದ ವಿನುತಾ, ಚಿರನ್ವಿ, ಭೂಮಿಕಾ, ಕಾಂಚನ, ಧನ್ಯಶ್ರೀ ಸ್ವಾಗತ ಗೀತೆ ಹಾಡಿದರು. ಪದ್ಮಾವತಿ ನಾಯ್ಕ ಸ್ವಾಗತಿಸಿದರು. ಇಂದಿರಾ ಹರಿಕಾಂತ ಪ್ರಾಸ್ತಾವಿಕ ಮಾತನಾಡಿದರು. ಮೂರೂರು ಅಂಗನವಾಡಿ ಕಾರ್ಯಕರ್ತೆ ಗುಲಾಬಿ ಕೋಡಿಯಾ ನಿರೂಪಿಸಿದರು, ಸೀಮಾ ಭಟ್ ವಂದನಾರ್ಪಣೆಗೈದರು.

ಸಂತೆಗುಳಿ ಗ್ರಾಪಂ ಅಧ್ಯಕ್ಷ ಮಹೇಶ ನಾಯ್ಕ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಿದರು. ರವಿ ನಾಯ್ಕ, ಅಸ್ಲಂ ಸಾಬ್‌, ಯಜತ್ ಸಾಬ್‌, ಗುರುಪ್ರಸಾದ ನಾಯ್ಕ, ಪರಮೇಶ್ವರ ನಾಯ್ಕ, ವಿಶ್ವನಾಥ ನಾಯ್ಕ, ಅಂಗನವಾಡಿ ಕಾರ್ಯಕರ್ತೆಯರಾದ ವಿಮಲಾ ನಾಯ್ಕ, ಸುಗುಣ ಮಡಿವಾಳ, ಸುಧಾ ಹೆಗಡೆ, ಕಲ್ಪನಾ ಶೆಟ್ಟಿ, ಸರೋಜ ನಾಯ್ಕ, ಶೈಲಾ ಶೆಟ್ಟಿ, ರತ್ನಾ ನಾಯ್ಕ, ಶಾಂತಿ ಗೌಡ, ಸಾವಿತ್ರಿ ಗೌಡ, ರೇವತಿ ನಾಯ್ಕ, ಕಲಾವತಿ ಮರಾಠಿ, ತಾರಾ ನಾಯ್ಕ, ಸವಿತಾ ನಾಯ್ಕ, ಪ್ರೇಮ ನಾಯ್ಕ, ಲೀಲಾವತಿ ನಾಯ್ಕ, ಕುಸುಮಾ ನಾಯ್ಕ, ದಾಕ್ಷಾಯಿಣಿ ನಾಯ್ಕ, ಸುಮನಾ ನಾಯ್ಕ, ಸುಮನಾ ಭಂಡಾರಿ, ಮಾದೇವಿ ಗೌಡ, ಹೇಮಾ ಗೌಡ, ಉಷಾ ನಾಯ್ಕ, ಸಾವಿತ್ರಿ ಗೌಡ, ಗೀತಾ ಗೌಡ ಇನ್ನಿತರರು ಇದ್ದರು. ಅಂಗನವಾಡಿ ಮಕ್ಕಳಿಂದ, ಛದ್ಮವೇಷ, ಅಭಿನಯ ಗೀತೆ, ಗಾಯನ, ವಿವಿಧ ಆಟೋಟ ಮನೋರಂಜನೆ ಕಾರ್ಯಕ್ರಮ ರಂಜಿಸಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ