ಮಕ್ಕಳಲ್ಲಿ ಮಾನವೀಯ ಮೌಲ್ಯ ಬೆಳೆಸಿ: ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ

KannadaprabhaNewsNetwork |  
Published : Jun 21, 2025, 12:49 AM IST
20ಕೆಎಂಎನ್ ಡಿ11 | Kannada Prabha

ಸಾರಾಂಶ

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಬೇಬಿಗ್ರಾಮದಲ್ಲಿ ಡಿಎಂಎಸ್ ಜ್ಞಾನಕುಟೀರ ಶಾಲೆಯನ್ನು ಆರಂಭಿಸಲಾಗಿದೆ. ಈ ಭಾಗದ ಮಕ್ಕಳು ಓದಲು ದೂರದ ಊರುಗಳಿಗೆ ಹೋಗಲಾರದೆ ಶಾಲೆಯನ್ನು ಬಿಡುತ್ತಿದ್ದರು. ಹಾಗಾಗಿ ಮಕ್ಕಳ ಅನುಕೂಲಕ್ಕಾಗಿ ಶಾಲೆ ಆರಂಭಿಸಲಾಗಿದೆ. ಮಕ್ಕಳು ಇದರ ಸೌಲಭ್ಯ ಪಡೆದುಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪೋಷಕರು ಧರ್ಮ, ಸಂಸ್ಕೃತಿಯನ್ನು ಉಳಿಸಿ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದು ಶ್ರೀದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತಶಿವಯೋಗಿ ಸ್ವಾಮೀಜಿ ಹೇಳಿದರು.ತಾಲೂಕಿನ ಬೇಬಿಗ್ರಾಮದ ಶ್ರೀದುರ್ದಂಡೇಶ್ವರ ಮಠದ ಶ್ರೀಮರೀದೇವರಸ್ವಾಮೀಜಿಗಳ ಗದ್ದುಗೆ ಆವರಣದಲ್ಲಿ ಡಿಎಂಎಸ್ ಜ್ಞಾನಕುಟೀರ ಶಾಲೆ ವಿದ್ಯಾರ್ಥಿಗಳಿಗೆ ನಡೆದ ಅಕ್ಷರಾಭ್ಯಾಸ ಮಾಡಿಸಿದ ಬಳಿಕ ಮಾತನಾಡಿ, ಮಕ್ಕಳು ದೇಶದ ಆಸ್ತಿ. ನಮ್ಮ ಸಂಸ್ಕೃತಿ, ಸಂಸ್ಕಾರ, ಧರ್ಮವನ್ನು ಕಾಪಾಡಿ ಉಳಿಸಿ ಬೆಳೆಸುವಂತಹ ಉತ್ತಮ ಪ್ರಜೆಗಳಾಗಿ ಮೂಡಿಬರುವಂತೆ ಮಾಡಬೇಕು ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಬೇಬಿಗ್ರಾಮದಲ್ಲಿ ಡಿಎಂಎಸ್ ಜ್ಞಾನಕುಟೀರ ಶಾಲೆಯನ್ನು ಆರಂಭಿಸಲಾಗಿದೆ. ಈ ಭಾಗದ ಮಕ್ಕಳು ಓದಲು ದೂರದ ಊರುಗಳಿಗೆ ಹೋಗಲಾರದೆ ಶಾಲೆಯನ್ನು ಬಿಡುತ್ತಿದ್ದರು. ಹಾಗಾಗಿ ಮಕ್ಕಳ ಅನುಕೂಲಕ್ಕಾಗಿ ಶಾಲೆ ಆರಂಭಿಸಲಾಗಿದೆ. ಮಕ್ಕಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಠದ ಹಿರಿಯ ಶ್ರೀಗಳಾದ ಮರೀದೇವರು ಅವರು 113 ವರ್ಷಗಳ ಕಾಲ ಬದುಕಿ ನಂತರ ಲಿಂಗೈಕ್ಯರಾಗಿದ್ದಾರೆ. ಇವರು ನುಡಿದಂತಹ ಮಾತುಗಳು ಸತ್ಯವಾಗಿದ್ದವು. ಅಂತಹ ಪುಣ್ಯಾತ್ಮರು ಲಿಂಗೈಕ್ಯರಾದ ಸ್ಥಳದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಿರುವುದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗುತ್ತದೆ. ಜತೆಗೆ ನವರಾತ್ರಿ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಬೀಜಾಕ್ಷರ ಮಂತ್ರಗಳನ್ನು ಸಹ ಹೇಳಿಕೊಡಲಾಗುವುದು ಎಂದರು.

ಈ ವೇಳೆ ಸಂಸ್ಥೆ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಶಾಲಾ ಕಾರ್ಯ ನಿರ್ದೇಶಕಿ ಸುಮಸುಜಯ್, ಮುಖ್ಯಶಿಕ್ಷಕ ಕೆ.ಜೆ.ಮಂಜು, ಗ್ರಾಪಂ ಸದಸ್ಯ ಸಿದ್ದರಾಜು ಸೇರಿದಂತೆ ಶಿಕ್ಷಕರು, ಉಪನ್ಯಾಸಕರು, ಸಿಬ್ಬಂದಿ ಹಾಜರಿದ್ದರು.

ಪ್ರೀಕೆಜಿ, ಎಲ್‌ಕೆಜಿ ಮಕ್ಕಳಿಗೆ ಅಕ್ಷರ ಅಭ್ಯಾಸ

ಪಾಂಡವಪುರ:

ಪಟ್ಟಣದ ವಿಜಯ ಸಿಬಿಎಸ್‌ಇ ಶಾಲೆಯ ಪ್ರೀಕೆಜಿ ಹಾಗೂ ಎಲ್‌ಕೆಜಿ ಮಕ್ಕಳಿಗೆ ಅಕ್ಷರ ಅಭ್ಯಾಸದ ಮೂಲಕ ಮಕ್ಕಳಲ್ಲಿ ಶಿಕ್ಷಣದ ಉತ್ಸಾಹವನ್ನು ಮೂಡಿಸಿತು.

ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಆಯೋಜಿಸಿದ್ದ ಅಕ್ಷರಾಭ್ಯಾಸಕ್ಕೆ ಪೋಷಕರು ಹಾಗೂ ಪುಟ್ಟ ಮಕ್ಕಳು ಸಾಂಪ್ರದಾಯಿಕ ಉಡುಗೆಗಳೊಂದಿಗೆ ಆಗಮಿಸಿದ್ದರು. ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಪ್ರಾರಂಭಿಸಿ ಸರಸ್ವತಿ ಪೂಜೆ ನೆರವೇರಿಸಿದರು.

ಮಕ್ಕಳಿಗೆ ಅಕ್ಕಿಯ ಮೇಲೆ ’ಓಂ’ ಮತ್ತು ’ಅ’ ಅಕ್ಷರಗಳನ್ನು ಬರೆಸಿದರು. ಈ ವೇಳೆ ಸಂಸ್ಥೆ ಕಾರ್ಯದರ್ಶಿ ಕೆ.ವಿ ಬಸವರಾಜು, ಸಹ ಕಾರ್ಯದರ್ಶಿ ಗೋಪಾಲಸ್ವಾಮಿ, ನಿರ್ದೇಶಕ ಸೋಮೇಗೌಡ, ಶಾಲೆ ಪ್ರಾಂಶುಪಾಲರಾದ ಭೀಮೇಶ್‌ಬಾಬು ಸೇರಿದಂತೆ ಶಿಕ್ಷಕ ವೃಂದ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ