ಬೀರೂರು: ಸಮೀಪದ ಹಿರೇನಲ್ಲೂರು ಹೋಬಳಿಯ ಕೇದಿಗೆರೆ ಗ್ರಾಮದ ರೈತ ಸಾಲಬಾಧೆ ತಾಳಲಾರದೆ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಆದಿಕರ್ನಾಟಕ ಜನಾಂಗಕ್ಕೆ ಸೇರಿದ ಮಂಜುನಾಥ( 38) ಮೃತ ದುರ್ದೈವಿ. ಮಂಜುನಾಥ ತನ್ನ ತಂದೆಗೆ ಸೇರಿದ 2ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಈತ ಇತ್ತೀಚೆಗೆ ಸೂರ್ಯಕಾಂತಿ, ನೆಲಗಡಲೆ, ಈರುಳ್ಳಿ ಬೆಳೆಯಲು ವಿವಿಧ ಬ್ಯಾಂಕ್ ಹಾಗೂ ಫೈನಾನ್ಸ್ ಮತ್ತಿತರ ಕಡೆಗಳಲ್ಲಿ ಸುಮಾರು 5 ಲಕ್ಷ ರು.ಗೂ ಹೆಚ್ಚು ಸಾಲ ಮಾಡಿಕೊಂಡಿದ್ದ. ಬೆಳೆ ಸರಿಯಾಗಿ ಬರದ ಕಾರಣ ಮನನೊಂದು ಸಾಲ ತೀರಿಸಲಾಗದೆ ಅವರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .ಮೃತನ ಪತ್ನಿ ರೇಣುಕಮ್ಮ ನೀಡಿದ ದೂರಿನ ಆಧಾರದಲ್ಲಿ ಯಗಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಶವಪರೀಕ್ಷೆ ನಡೆಸಲಿದ್ದಾರೆ. ಮಂಜುನಾಥ(38)