ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಓಂಕಾರಪ್ಪ ನೇತೃತ್ವ
ಆಡಳಿತ ಕಚೇರಿಯಲ್ಲಿ ಭ್ರಷ್ಟಾಚಾರ ಎಲ್ಲೆಮೀರಿದೆ. ಸಂವಿಧಾನದ ಆಶಯ ಹಾಗೂ ಸರ್ಕಾರಿ ಸುತ್ತೋಲೆ ಪಾಲಿಸದೇ ರಾಜಕಾರಣಿಗಳ ಹಾಗೂ ಬಲಾಡ್ಯರ ಪ್ರಭಾವಕ್ಕೆ ಮಣಿದು ಸಾರ್ವಜನಿಕರ ಕರ್ತವ್ಯದಿಂದ ವಿಮುಖರಾಗುತ್ತಿರುವುದನ್ನು ವಿರೋಧಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ನಿಕಟಪೂರ್ವ ರಾಜ್ಯಾಧ್ಯಕ್ಷ ಓಂಕಾರಪ್ಪ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರುಗಳದ್ದೇ ಕಾರುಬಾರು ಆಗಿದೆ. ಅವರ ವರದಿಯನ್ನೇ ಶಾಸನ ಎಂದು ಹಿರಿಯ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ. ಅದರಲ್ಲೂ ದಲಿತ ಬಡವರು ಉಳುಮೆ ಮಾಡುತ್ತಿರುವ ಜಮೀನುಗಳನ್ನೆಲ್ಲಾ ಕಬಳಿಸುತ್ತಿದ್ದಾರೆ. ಸರ್ಕಾರಿ ಗೋಮಾಳಗಳಲ್ಲಿ ಖಾಸಗಿ ವ್ಯಕ್ತಿಗಳು ಬಡಾವಣೆ ಮಾಡಿ ರಿಯಲ್ ಎಸ್ಟೇಟ್ ದಂಧೆ, ಹಲವರು ಸರ್ಕಾರಿ ಜಾಗಗಳಲ್ಲಿ ಖಾಸಗಿ ಶಾಲೆ ನಡೆಯುತ್ತಿದೆ. ಎಕರೆ ಗಟ್ಟಲೆ ಗ್ರಾಮಠಾಣಾ ಭೂಮಿ ಒತ್ತುವರಿ ಮಾಡಿ ಕೋಟಿಗಟ್ಟಲೆ ಬಂಗಲೆ ಕಟ್ಟಿದ್ದಾರೆ ಮತ್ತೆ ಕೆಲವರು ಅಡಕೆ ತೋಟಗಳನ್ನು ನಿರ್ಮಾಣ ಮಾಡಿದ್ದಾರೆ. ಇದೆಲ್ಲವೂ ಗೊತ್ತಿ ದ್ದರೂ ಕಣ್ಣು, ಕಿವಿ ಇಲ್ಲದವರಂತೆನಟಿಸಿ ಸರ್ಕಾರಿ ಭೂಮಿಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಉಳಿಸಿಕೊಡುವಲ್ಲಿ ಆಡಳಿತಾಧಿಕಾರಿಗಳು ವಿಫಲರಾಗಿದ್ದಾರೆ ಇದನ್ನು ಖಂಡಿಸಿ ಇಂದಿನಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ ಎಂದು ಓಂಕಾರಪ್ಪ ತಿಳಿಸಿದ್ದಾರೆ.ಜಿಲ್ಲಾಧಿಕಾರಿ, ಜಿಲ್ಲಾಉಸ್ತುವಾರಿ ಸಚಿವರು ಮತ್ತು ಅರಣ್ಯ ಇಲಾಖೆ ಸಿಸಿಎಫ್ ಮತ್ತು ಡಿಎಫ್ ಒ ಧರಣಿ ಸ್ಥಳಕ್ಕೆ ಆಗಮಿಸುವಂತೆ ಒತ್ತಾಯಿಸಿದ್ದಾರೆ.
ತರೀಕೆರೆಯಲ್ಲಿ ಓಂಕಾರಪ್ಪ. ಎಂ. ನಿಕಟಪೂರ್ವ ರಾಜ್ಯಾಧ್ಯಕ್ಷರು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ ನಮ್ಮ ಹೋರಾಟ ವೇದಿಕೆಯಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗಿದೆ.