ಪೌರ ವೃಂದದ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ

KannadaprabhaNewsNetwork |  
Published : May 28, 2025, 12:09 AM ISTUpdated : May 28, 2025, 12:10 AM IST
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಆಗಮಿಸಿ ಮನವಿ ಸ್ವೀಕರಿಸಿದರು.  | Kannada Prabha

ಸಾರಾಂಶ

ಪೌರ ವೃಂದದ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಗದಗ-ಬೆಟಗೇರಿ ನಗರಸಭೆಯ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದರು.

ಗದಗ:ಪೌರ ವೃಂದದ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಗದಗ-ಬೆಟಗೇರಿ ನಗರಸಭೆಯ ಪೌರ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದರು.

ರಾಜ್ಯ ಸರ್ಕಾರ ಪೌರ ವೃಂದದ ನೌಕರರ ಪ್ರಮುಖ ಬೇಡಿಕೆಗಳಾದ ಪೌರ ನೌಕರರನ್ನು ಸರ್ಕಾರಿ ನೌಕರರಂದು ಘೋಷಿಸುವುದು ಹಾಗೂ ಕೆ.ಜಿ.ಆಯ್.ಡಿ ಜಿ.ಪಿ.ಎಫ್, ಜ್ಯೋತಿ ಸಂಜೀವಿನಿ, ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯವನ್ನು ಪೌರ ನೌಕರರಿಗೂ ಜಾರಿ ಮಾಡುವುದು ಹಾಗೂ ಸುಮಾರು 25-30 ವರ್ಷಗಳಿಂದ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್‌, ಘನತಾಜ್ಯ ವಾಹನ ಚಾಲಕರು, ಕ್ಲೀನರ್ಸ್‌, ಸೂಪರವೈಸರ್, ನೀರು ಸರಬರಾಜು ಸಿಬ್ಬಂದಿಗಳು. ಕಂಪ್ಯೂಟರ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್, ಇನ್ನಿತರೆ ಗುತ್ತಿಗೆ/ಹೊರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನೇರಪಾವತಿ ವೇತನ ಮಾಡುವುದು, ಕಾಯಂ ಮಾಡುವುದು ಸೇರಿದಂತೆ ಹೊಸದಾಗಿ ಸನ್ 2022-23ನೇ ಸಾಲಿನಲ್ಲಿ ಪೌರಕಾರ್ಮಿಕರ ವಿಷೇಶ ನೇವಕಾತಿಯಡಿ ಪೌರಕಾರ್ಮಿಕರು ನೇಮಕಾತಿ ಹೊಂದಿದ್ದು ಸದರಿ ನೌಕರರಿಗೆ ಮಾನ್ಯ ಘನ ಸರ್ಕಾರವು ನಗರ ಸ್ಥಳೀಯ ಸಂಸ್ಥೆ ಸ್ಥಳೀಯ ನಿಧಿಯಿಂದ ವೇತನ ಪಡೆಯಲು ಆದೇಶಿಸಿಲಾಗಿದ್ದನ್ನು ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಡಿ ವೇತನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಿದರು.

ಈ ಮುಷ್ಕರದಲ್ಲಿ ಶಾಖಾ ಅಧ್ಯಕ್ಷ ಚಂದ್ರಶೇಖರ ಹಾದಿಮನಿ, ಉಪಾಧ್ಯಕ್ಷ ಪಂಚಾಕ್ಷರಿ ದೊಡ್ಡಮನಿ, ಆಂಜನೇಯ ಬಳ್ಳಾರಿ, ಆಂಜನೇಯ ಪೂಜಾರ, ನಾಗೇಶ ಗೂರಣ್ಣವರ, ಪರಶುರಾಮ ಎಫ್. ಶೇರಖಾನೆ, ಕೆಂಚಪ್ಪ ಪೂಜಾರ, ಸಣ್ಣಪ್ಪ ಬೋಳಮ್ಮನವರ, ಎಮ್.ಎಮ್.ಮಕಾನದಾರ, ಹೇಮೇಶ ಯಟ್ಟಿ, ನಾಗರಾಜ ಬಳ್ಳಾರಿ, ವಿಠ್ಠಲ ಪರಾಪೂರ, ಅರವಿಂದ ಕುರ್ತಕೋಟಿ, ಶೇಖಪ್ಪ ತಮ್ಮಣ್ಣವರ, ಶಿವು ಜಂಬಲದಿನ್ನಿ, ಕೆಂಚಪ್ಪ ಪೂಜಾರ, ಸಣ್ಣಪ್ಪ ಬೋಳಮ್ಮನವರ, ಹನಮಂತ ಡಿ, ಮಲ್ಲಿಕ ಸಂಗಾಪೂರ, ಮುತ್ತು ಯಲ್ಲಾಕ್ಕನವರ, ಸಣ್ಣರಾಮಪ್ಪ ಬಳ್ಳಾರಿ, ನಾರಾಯಣ ಬಳ್ಳಾರಿ, ಆಂಜನಯ್ಯ ಪೂಜಾರ, ಮಂಜು ನರಗುಂದ, ಮುತ್ತು ಚಲವಾದಿ, ಮಂಜು ಚಲವಾದಿ, ಶಿವಲಿಂಗಪ್ಪ ಸೋಂಪೂರ, ಮಂಜು ಯಲ್ಲಪಲ್ಲೆ, ಸಂಗವ್ವ ಸೋಂಪೂರ ಸೇರಿದಂತೆ ಗದಗ-ಬೆಟಗೇರಿ ನಗರಸಭೆ ಹೊರಗುತ್ತಿಗೆ ಪೌರಕಾರ್ಮಿಕರು, ನೌಕರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು