ಭವಿಷ್ಯದ ಪ್ರಜೆಗಳಾದ ಯುವಪೀಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ತ್ಯಾಗ, ಬಲಿದಾನಗಳನ್ನು ಸ್ಮರಿಸುತ್ತಾ ದೇಶಪ್ರೇಮ, ಆತ್ಮಗೌರವವನ್ನು ಬೆಳಸಿಕೊಂಡು ಸೋದರರಂತೆ ಬಾಳಿ ಮನುಕುಲಕ್ಕೆ ಮಾನವೀಯತೆಯ ಸಂದೇಶವನ್ನು ಸಾರಬೇಕೆಂದು ನಗರದ ಕಲ್ಪತರು ವಿದ್ಯಾ ಸಂಸ್ಥೆಯ ಪಿ.ಕೆ. ಅಧ್ಯಕ್ಷ ತಿಪ್ಪೇರುದ್ರಪ್ಪ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ಭವಿಷ್ಯದ ಪ್ರಜೆಗಳಾದ ಯುವಪೀಳಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ನಾಯಕರ ತ್ಯಾಗ, ಬಲಿದಾನಗಳನ್ನು ಸ್ಮರಿಸುತ್ತಾ ದೇಶಪ್ರೇಮ, ಆತ್ಮಗೌರವವನ್ನು ಬೆಳಸಿಕೊಂಡು ಸೋದರರಂತೆ ಬಾಳಿ ಮನುಕುಲಕ್ಕೆ ಮಾನವೀಯತೆಯ ಸಂದೇಶವನ್ನು ಸಾರಬೇಕೆಂದು ನಗರದ ಕಲ್ಪತರು ವಿದ್ಯಾ ಸಂಸ್ಥೆಯ ಪಿ.ಕೆ. ಅಧ್ಯಕ್ಷ ತಿಪ್ಪೇರುದ್ರಪ್ಪ ತಿಳಿಸಿದರು. ನಗರದ ಕಲ್ಪತರು ವಿದ್ಯಾ ಸಂಸ್ಥೆಯ ವತಿಯಿಂದ ಕಲ್ಪತರು ಕಾಲೇಜು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದಬ್ಬಾಳಿಕೆಯಿಂದ ಬಿಡುಗಡೆ ಬಯಸಿ ಸ್ವತಂತ್ರ್ಯ ಜೀವಿಗಳಾಗಿ ಬದುಕುವ ಕನಸನ್ನು ಹೊತ್ತ ಭಗತ್‌ಸಿಂಗ್, ಸರ್ದಾರ್ ವಲ್ಲಬಾಬಾಯಿ ಪಟೇಲ್, ಮಹಾತ್ಮಗಾಂಧಿ, ಸುಭಾಷ್‌ಚಂದ್ರ ಬೋಸ್, ಕಿತ್ತೂರುರಾಣಿ ಚನ್ನಮ್ಮ ಮುಂತಾದ ಮಹನೀಯರ ನೇತೃತ್ವದಲ್ಲಿ ಸಾವಿರಾರು ಜನರು ತಮ್ಮ ಪ್ರಾಣ ಬಲಿದಾನವನ್ನು ಮುಡುಪಾಗಿಟ್ಟು ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದ್ದು ಈ ಸ್ವಾತಂತ್ಯವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರದ್ದಾಗಿದೆ ಎಂದರು. ಈ ಸಂದರ್ಭದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಸಂಸ್ಥೆಯ ವಿದ್ಯಾರ್ಥಿಯಾಗಿದ್ದ ಕರ್ನಲ್ ವೆಂಕಟೇಶ್ ನಾಯ್ಡುರವರನ್ನು ಸನ್ಮಾನಿಸಿದರು. ಕಲ್ಪತರು ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿನಿ ಲೇಖನ ಅವರನ್ನು 2024-25ನೇ ವರ್ಷದ ಇಂಡಿಯಾ ಬುಕ್‌ಆಫ್ ರೆಕಾರ್ಡ್ ಸಾಧನೆ ಮಾಡಿರುವುದನ್ನ ಸ್ಮರಿಸಿ ಸನ್ಮಾನ ಹಾಗೂ ಶೈಕ್ಷಣಿಕ ಮತ್ತು ಕ್ರೀಡಾವಲಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರುಗಳಾದ ಟಿ.ಎಸ್.ಬಸವರಾಜು, ಬಿ.ಎಸ್. ನಟರಾಜ್, ಜಿ.ಪಿದೀಪಕ್, ಬಿ.ಎಸ್. ಉಮೇಶ್, ಕಾರ್ಯದರ್ಶಿಗಳಾದ ಎಂ.ಆರ್. ಸಂಗಮೇಶ್, ಹೆಚ್.ಜಿ ಸುಧಾಕರ್, ಟಿ.ಎಸ್. ಉಮಾಶಂಕರ್, ಟಿ.ಯು. ಜಗದೀಶಮೂರ್ತಿ, ಖಜಾಂಚಿ ಟಿ.ಎಸ್. ಶಿವಪ್ರಸಾದ್ ಸೇರಿದಂತೆ ಮತ್ತು ಸದಸ್ಯರುಗಳು, ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು. ಪೋಷಕರು ಭಾಗವಹಿಸಿದ್ದರು. ನಂತರ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.