ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದಲ್ಲಿ ಶುಕ್ರವಾರ ವಿವಿಧಡೆ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿವಿಧ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳಲ್ಲಿ ಧ್ವಜರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು.ವಿನೋಬನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದ ಮುಂಭಾಗ ಶುಕ್ರವಾರ ಧ್ವಜಾರೋಹಣ ನೆರವೇರಿಸಲಾಯಿತು. ಈ ಸಂದರ್ಭ ಮಾತನಾಡಿ, ನರೇಂದ್ರ ಮೋದಿ ದೇಶದಲ್ಲೇ ಅತ್ಯಧಿಕ ಭಾರಿ ಪ್ರಧಾನಮಂತ್ರಿಯಾಗಿ ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣಧ್ವಜ ಹಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಬೂತ್ ಅಧ್ಯಕ್ಷ ಹರ್ಷಾ, ವಾರ್ಡ್ ಅಧ್ಯಕ್ಷ ವೆಂಕಟೇಶ್ ಗೌಡ, ಕಾರ್ಯದರ್ಶಿಗಳಾದ ಮಾಲತೇಶ್, ಮಂಜುನಾಥ್, ಪಾಲಿಕೆಯ ಮಾಜಿ ಸದಸ್ಯರಾದ ವಿಶ್ವನಾಥ್, ಪ್ರಮುಖರಾದ ರವೀಂದ್ರ , ಮಂಗಳಾ ನಾಗೇಂದ್ರ ಸೇರಿದಂತೆ ಬಿಎಸ್‌ವೈ ಕುಟುಂಬ ಸದಸ್ಯರು ಇದ್ದರು.ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಧನಂಜಯ ಸರ್ಜಿ, ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ಎಸ್. ದತ್ತಾತ್ರಿ, ಹಿರಿಯ ಎಸ್.ರುದ್ರೇಗೌಡ, ಕೆ.ಜಿ.ಕುಮಾರಸ್ವಾಮಿ, ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪಟೇಲ್, ಎಸ್.ಎಸ್.ಜ್ಯೋತಿ ಪ್ರಕಾಶ್ ಮತ್ತಿತರೆ ಪ್ರಮುಖರು, ಕಾರ್ಯಕರ್ತರು ಇದ್ದರು.
ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ಮಲೆನಾಡ ಸಿರಿ ಕಚೇರಿ, ಗೋಪಾಳ ಬ್ರಾಹ್ಮಣ ಸಂಘದ ಅಧ್ಯಕ್ಷ ಸುರೇಶ್, ಉಮರಾಣಿ, ಗೋಪಾಳದ ಚಂದನವನ ಆರೋಗ್ಯ ಪಾರ್ಕ್‌ನ ಗೌರವ ಅಧ್ಯಕ್ಷ ಕಲಗೋಡು ರತ್ನಾಕರ್, ಅಧ್ಯಕ್ಷ ಜಯರಾಮಗೌಡ್ರು, ಕಾರ್ಯದರ್ಶಿ ಗುರುರಾಜ್, ಕ್ರೀಡಾ ವಿಭಾಗದ ಅಧ್ಯಕ್ಷ ಜಿ.ಎಸ್. ಶಿವಕುಮಾರ್, ಪ್ರಮುಖರಾದ ದೇವರಾಜ್, ಪ್ರಸಾದ್ ರೈಲ್ವೆ, ಅಶೋಕ್, ರವಿಕುಮಾರ್, ಬಸವರಾಜ್, ಪ್ರದೀಪ್, ರಂಗೇಗೌಡ, ರಘು, ನವಲಪ್ಪ, ಜಿ.ಕೆಂಚಪ್ಪ, ಎ.ಹಾಲೇಶಪ್ಪ, ಶಾಂತಾ, ಗೀತ, ರಂಗನಾಥ್, ಲಕ್ಷ್ಮೀರೆಡ್ಡಿ, ಕೇಶವಮೂರ್ತಿ, ಲಾರಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ವೈ.ಎಚ್. ನಾಗರಾಜ್, ಗೌರವಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಹೆಚ್. ಕೃಷ್ಣೇಗೌಡ, ಬಾಲಕಿಯರ ವಿದ್ಯಾರ್ಥಿನಿಲಯದ ಸಿಬ್ಬಂದಿ, ವಿದ್ಯಾರ್ಥಿಗಳು, ದುರ್ಗಿಗುಡಿ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ನರಸಿಂಹ ಗಂಧದ ಮನೆ, ಉಪಾಧ್ಯಕ್ಷ ಎಸ್.ಎಂ. ವೆಂಕಟೇಶ್, ಖಜಾಂಚಿ ವಿನ್ಸೆಂಟ್ ರೋಡ್ರಿಗಸ್, ನಿರ್ದೇಶಕರಾದ ಜಿ. ಚಂದ್ರಶೇಖರ್, ಎನ್. ಉಮಾಪತಿ, ಗೋವಿಂದಪ್ಪ, ಶಿ.ದು.ಸೋಮಶೇಖರ್, ಕೆ. ಈಶ್ವರಾಚಾರಿ, ಶ್ಯಾಮು ಡಿ., ಬಿ.ಎಸ್. ವಿನಯ್, ಡಾ. ಕವಿತಾ ಸಾಗರ್, ಎಚ್. ನವೀನ್ ಕುಮಾರ್, ಶ್ರೀಲಕ್ಷ್ಮೀ, ಮಣಿಕಂಠ, ಡಿ.ತಿಮ್ಮಪ್ಪ, ಭರತ್ ಕುಮಾರ್ ಜೆ., ಸಿಬ್ಬಂದಿ ಸ್ವಾತಂತ್ರ್ಯ ದಿನ ಆಚರಿಸಿದರು.ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ನಗರದ ಜೆಡಿಎಸ್ ಅಧ್ಯಕ್ಷ ದೀಪಕ್‍ಸಿಂಗ್ ಅವರಿಗೆ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಹಾಜರಿದ್ದರು.
ಶಿಕಾರಿಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಕಾಗಿನಲ್ಲಿ ಸಂಘದ ಅಧ್ಯಕ್ಷ ಕೆ.ಬಸವರಾಜಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರು ನಿರ್ದೇಶಕರು, ಸಿಬ್ಬಂದಿ, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಇದ್ದರು.ಕೋಣಂದೂರು ಗ್ರಾಪಂನಿಂದ ಸ್ವಾತಂತ್ರ್ಯ ದಿನಕ್ಕೆ ಹಮ್ಮಿಕೊಂಡ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಆಶಿಕ್ ಗೌಡರನ್ನು ಸನ್ಮಾನಿಸಲಾಯಿತು.