- ಕೆ.ಎಲ್.ಕೆ. ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಜರುಗಿದ 79 ನೇ ಸ್ವತಂತ್ರ ದಿನಾಚರಣೆ
ಕನ್ನಡಪ್ರಭ ವಾರ್ತೆ, ಬೀರೂರುಭಾರತ ಇಂದು ಸರ್ವರೀತಿಯಲ್ಲಿ ಪ್ರಗತಿಯತ್ತ ಹೆಜ್ಜೆಯಿಡುತ್ತಿದೆ. ಇದಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟು ತಮ್ಮ ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ ಹೋರಾಟಗಾರರು ಹಾಗೂ ಯೋಧರ ಶ್ರಮ ಹಾಗೂ ಅವರ ಕನಸು ಸಾಕಾರಗೊಳ್ಳುವ ರೀತಿ ,ಸ್ವಾರ್ಥಕ್ಕಾಗಿ ಬದುಕದೆ ದೇಶದ ಪ್ರಗತಿಗಾಗಿ ಶ್ರಮಿಸೋಣ ಎಂದು ಪುರಸಭಾಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ ಹೇಳಿದರು.
ಪಟ್ಟಣದ ಸರ್ಕಾರಿ ಕೆಎಲ್.ಕೆ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ 79 ನೇ ಸ್ವತಂತ್ರ ದಿನಾಚರಣೆಯಲ್ಲಿ ಧ್ವಜಾರೋಹಣ ನೇರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಸ್ವಾರ್ಥಕ್ಕಾಗಿ ಬದುಕದೇ ದೇಶಕ್ಕಾಗಿ ಬದುಕಿದ ಗಾಂಧೀಜಿ ಕನಸಿನಂತೆ ಹಳ್ಳಿಗಳು ಅಭಿವೃದ್ಧಿ ಹೊಂದಿದರೇ, ದೇಶ ಅಭಿವೃದ್ಧಿ ಸಾಧ್ಯ. ದೇಶದ ಬಡತನ, ನಿರುದ್ಯೋಗ, ಅನಕ್ಷರತೆ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ದುಡಿಯೋಣ. ಎಲ್ಲರ ಸಹಕಾರದಿಂದ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಕಾಳಜಿವಹಿಸಿ ಕಾರ್ಯನಿರ್ವಹಿಸುವೆ ಎಂದರು.ಪುರಸಭೆ ಮಾಜಿ ಅಧ್ಯಕ್ಷೆ ವನಿತಾ ಮಧು ಮಾತನಾಡಿ, ನಮ್ಮ ನೆಮ್ಮದಿ, ಸಹಬಾಳ್ವೆಗೆ ದೇಶ ಕಾಯುತ್ತಿರುವ ಯೋಧರು ಮುಖ್ಯ ಕಾರಣಕರ್ತರು. ನಾವು ನಮ್ಮಗಳ ಸ್ವಾರ್ಥಕ್ಕಾಗಿ ಬಾಳದೆ ದೇಶ ಮತ್ತು ದೇಶದ ಪ್ರಗತಿಗೆ ಶ್ರಮವಹಿಸಿ ದುಡಿದಲ್ಲಿ ದೇಶ ಅಭಿವೃದ್ಧಿ ಸಾಧಿಸಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಸೇರುವುದರಲ್ಲಿ ಸಂಶಯವಿಲ್ಲ. ದೇಶ ಪ್ರಗತಿಪಥದತ್ತ ಸಾಗುತ್ತಿದ್ದು ಯುವಪೀಳಿಗೆ ರಾಷ್ಟ್ರಾಭಿಮಾನ ಹೊಂದಿ ಗುರಿಸಾಧನೆ ಹೆಜ್ಜೆಯಿಡಬೇಕೆಂದರು. ಪುರಸಭೆ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಡಿ ಬದುಕು ಸಾಗಿಸುತ್ತಿರುವ ನಾವು ಪ್ರಾಮಾಣಿಕ ವಾಗಿ ಎಲ್ಲರನ್ನೂ ಸಮಾನ ಅಂತರದಿಂದ ಕಾಣಬೇಕು. ಭಾರತ ದೇಶದ ಮೌಲ್ಯ ಗಮನದಲ್ಲಿಟ್ಟುಕೊಂಡು ಎಲ್ಲರು ಪ್ರೀತಿ ಮತ್ತು ವಿಶ್ವಾಸದಿಂದ ಬದುಕು ಸಾಗಿಸಬೇಕಾಗಿದೆ ಎಂದರು.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಟ್ಟಣದ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಂದ ಏರ್ಪಡಿಸಿದ್ದ ವಿಶೇಷ ನೃತ್ಯರೂಪಕ ಎಲ್ಲರ ಗಮನಸೆಳೆಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ ಗಣ್ಯರು, ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪುರಸಭೆಯಿಂದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್, ಪುರಸಭಾ ಉಪಾಧ್ಯಕ್ಷ ಬಿ.ಎನ್.ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್ ,ಪಿಎಸ್.ಐ ಡಿ.ವಿ.ತಿಪ್ಪೇಶ್ ,ಪುರಸಭಾ ಮುಖ್ಯಾಧಿಕಾರಿ ಜಿ.ಪ್ರಕಾಶ್, ಮಾಣಿಕ್ ಭಾಷ, ಎಂ.ಪಿಸುದರ್ಶನ್ , ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್ ಸದಸ್ಯರು ಹಾಗೂ ನಾಮನಿರ್ದೇಶಿತ ಸದಸ್ಯರು, ಊರಿನ ಎಲ್ಲಾ ಶಾಲಾ ಕಾಲೇಜುಗಳ ಮಕ್ಕಳು ಹೆಚ್ಚಿನ ಸಂಖ್ಯೆ ಪೋಷಕರು ಪಾಲ್ಗೊಂಡಿದ್ದರು. ಶಾಲಾಮಕ್ಕಳಿಂದ ರಾಷ್ಟ್ರಗೀತೆ ಹಾಗೂ ನಾಡಗೀತೆ ನಡೆಯಿತು.ಉಳಿದಂತೆ ಶುಕ್ರವಾರ ಬೆಳಗ್ಗೆ ಕನ್ನಡ ಸಂಘ, ಆಟೋಚಾಲಕರು ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಗೂಡ್ಸ್ ಮಾಲೀಕರ ಸಂಘ, ನಾಡ ಕಛೇರಿ, ಪೋಲಿಸ್ ಠಾಣೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಂಭ್ರಮದಿಂದ ಸ್ವತಂತ್ರ ದಿನಾಚರಣೆ ಆಚರಿಸಿದರು.15 ಬೀರೂರು 1ಬೀರೂರಿನ ಸರ್ಕಾರಿ ಕೆ.ಎಲ್.ಕೆ. ಪದವಿ ಪೂರ್ವ ಕಾಲೇಜು ಮೈದಾನ ಆವರಣದಲ್ಲಿ 79ನೇ ಸ್ವಾತಂತ್ರ ದಿನಾಚರಣೆ ಅಂಗವಾಗಿ ಪುರಸಭಾಧ್ಯಕ್ಷೆ ಭಾಗ್ಯ ಲಕ್ಷ್ಮಿ ಮೋಹನ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯಾಧಿಕಾರಿ ಜಿ.ಪ್ರಕಾಶ್, ಬಿಇಒ ಚೋಪ್ದಾರ್ ಇದ್ದರು. ಬಿಡುವು ನೀಡಿದ ಮಳೆರಾಯ:ಶುಕ್ರವಾರ ಬೆಳಗಿನಿಂದಲೇ ಜಿಟಿ ಮಳೆ ಆರಂಭವಾಗಿ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆಗೆ ಎಲ್ಲಿ ಅಡಚಣೆ ಯಾಗುವುದೇನೋ ಎಂಬ ಆತಂಕದಲ್ಲಿದ್ದ ನಾಗರಿಕರಿಗೆ ಬೆ.9 ನಂತರ ಮಳೆ ಕೊಂಚ ಬಿಡುವು ನೀಡಿ, ಬಿಸಿಲು ಬರಲಾರಂಬಿಸಿದಾಗ ಮಕ್ಕಳು ಹರ್ಷದಿಂದ ದಿನಾಚರಣೆಗೆ ತಯಾರಿ ನಡೆಸಿ ನೃತ್ಯ ನಡೆಸಿಕೊಟ್ಟರು.