ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಲೋಕೋಪಯೋಗಿ ಇಲಾಖೆ, ಪುರಸಭೆ ಹಾಗೂ ರಾಜಕಾರಣಿಗಳು ತಮ್ಮಗೆ ಗೊತ್ತೇ ಇಲ್ಲ ಎಂಬಂತೆ ಅನಾವಶ್ಯಕವಾದ ಜಾಗಗಳಿಗೆ ರಸ್ತೆ ಮಾಡಿ ಬಿಲ್‌ಗಳನ್ನು ಮಾಡಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರ ವಾದವಾಗಿದ್ದು, ಜಿಲ್ಲೆಯಲ್ಲೇ ಅತೀ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ತಾಲೂಕು ಚನ್ನರಾಯಪಟ್ಟಣವಾಗಿದ್ದು ನಗರದಲ್ಲೇ ಇಷ್ಟೊಂದು ಅವ್ಯವಸ್ಥೆಯ ರಸ್ತೆಗಳು ಅಧಿಕಾರಿಗಳಿಗೆ ಕಾಣುತ್ತಿಲ್ಲವೇ.
ಒಬ್ಬ ಬಡ ಸಾಮಾನ್ಯ ವ್ಯಕ್ತಿ ರಸ್ತೆ ಮುಚ್ಚಲು ಮುಂದಾಗುವ ಹಾಗೇ ರಾಜಕೀಯದವರು ಏಕೆ ಮುಂದೆ ಬರುತ್ತಿಲ್ಲ, ಇತ್ತೀಚೆಗೆ ಭೂಮಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕೂಡ ಗುಂಡಿ ಮುಚ್ಚುವ ಪ್ರತಿಭಟನೆಯನ್ನು ಹಮ್ಮಿಕೊಂಡು ಅಧಿಕಾರಿಗಳಿಗೆ ಎಚ್ಚರಿಕೆಯನ್ನು ಸಹ ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಒಟ್ಟಾರೆ ಪಟ್ಟಣದಲ್ಲಿ ಸಾವಿರಾರು ಗುಂಡಿಗಳು ಇದ್ದು ವಾಹನ ಸವಾರರು ತಮ್ಮ ಕುಟುಂಬದ ಜೊತೆ ಸವಾರಿ ಮಾಡುವ ಸಂದರ್ಭದಲ್ಲಿ ಬಿದ್ದು ಎದ್ದು ಹೋಗುವ ಘಟನೆಗಳು ಸರ್ವೆ ಸಾಮಾನ್ಯವಾಗಿದ್ದು ಇನ್ನಾದರೂ ರಸ್ತೆ ಗುಂಡಿ ಮುಚ್ಚುವ ಕೆಲಸವಾಗಬೇಕೆಂಬುದು ಸಂಘ ಸಂಸ್ಥೆಗಳ ಆಗ್ರಹವಾಗಿದೆ.
*ಹೇಳಿಕೆ1ಪಟ್ಟಣದಲ್ಲಿ ಸವಾರರು ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಹಲವಾರು ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ನಮ್ಮ ಕೈಲಾದ ಕೆಲಸವನ್ನು ನಾವೇ ಮಾಡಿ ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದೇವೆ.
-ಜೈಹಿಂದ್ ನಾಗಣ್ಣ., ವಂದೇ ಮಾತರಂ ವೃದ್ಧಾಶ್ರಮದವರು*ಹೇಳಿಕೆ2 ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನರು ಹೈರಾಣಾಗಿದ್ದು ರಸ್ತೆಯಲ್ಲಿ ಗುಂಡಿ ಮುಂದೆ ಬಿದ್ದು ಆಸ್ಪತ್ರೆ ಸೇರುತ್ತಿದ್ದಾರೆ. ಇನ್ನು ಮಳೆಗಾಲದಲ್ಲಿ ರಸ್ತೆಯ ಮೇಲೆ ಓಡಾಡಲು ಭಯಪಡುವಂತಾಗಿದೆ.
- ರುದ್ರೇಶ್ ಮಟ್ಟನವಿಲೆ, ಯೂತ್ ಕಾಂಗ್ರೆಸ್ ಮುಖಂಡ