ಯಾವ ಲೋಪವಿಲ್ಲದೆ ಸ್ವಾತಂತ್ರ್ಯ ದಿನ ಆಚರಣೆ

KannadaprabhaNewsNetwork |  
Published : Aug 12, 2026, 01:15 AM IST
ಸಸಸ | Kannada Prabha

ಸಾರಾಂಶ

ಆ.15ರಂದು ನಡೆಯುವ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪ, ಕೊರತೆ ಉಂಟಾಗಬಾರದು, ಮಳೆ ಬಂದರೆ ಮೈದಾನದಲ್ಲಿ ಕೆಸರು ಹಾಗೂ ನೀರು ನಿಲ್ಲದಂತೆ ಸಜ್ಜುಗೊಳಿಸಬೇಕು ಹಾಗೂ ಸಮಾರಂಭವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಆ.15ರಂದು ನಡೆಯುವ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಲೋಪ, ಕೊರತೆ ಉಂಟಾಗಬಾರದು, ಮಳೆ ಬಂದರೆ ಮೈದಾನದಲ್ಲಿ ಕೆಸರು ಹಾಗೂ ನೀರು ನಿಲ್ಲದಂತೆ ಸಜ್ಜುಗೊಳಿಸಬೇಕು ಹಾಗೂ ಸಮಾರಂಭವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಭನ್ವರ್‌ ಸಿಂಗ್‌ ಮೀನಾ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ನಡೆಯುವ ಚಿಕ್ಕಮಗಳೂರಿನ ನೇತಾಜಿ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನಕ್ಕೆ ಮಂಗಳವಾರ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಿ, ಸಿದ್ಧತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್‌ ಅಂದು ಬೆಳಿಗ್ಗೆ 9ಕ್ಕೆ ಸರಿಯಾಗಿ ಸ್ವಾತಂತ್ರ್ಯ ದಿನದ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಲ್ಲ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು ಬೆಳಿಗ್ಗೆ 8.50ಕ್ಕಿಂತ ಮೊದಲೇ ಆಸೀನರಾಗಬೇಕು ಎಂದರು.

ಮಳೆ ಬರುವ ವಾತಾವರಣವಿದ್ದು, ಮಳೆ ಬಂದರೂ ಮೈದಾನದಲ್ಲಿ ಕೆಸರು ಆಗದಂತೆ ಸಿದ್ಧತೆ ಮಾಡಿ. ನಗರ ಸಭೆಯಿಂದ ಮೈದಾನವನ್ನು ಸ್ವಚ್ಛಗೊಳಿಸಿ ಮತ್ತು ಸಮತಟ್ಟುಗೊಳಿಸುವಂತೆ ನಗರಸಭೆ ಆಯುಕ್ತ ಬಸವರಾಜ್‌ ಅವರಿಗೆ ನಿರ್ದೇಶಿಸಿದರು.

ವೇದಿಕೆಯನ್ನು ಅತ್ಯಂತ ಸುಂದರವಾಗಿ ಹೂವುಗಳಿಂದ ಅಲಂಕಾರ ಮಾಡಬೇಕು. ಮಹಾತ್ಮ ಗಾಂಧೀಜಿ ಹಾಗೂ ಡಾ,ಬಿ,ಆರ್‌, ಅಂಬೇಡ್ಕರ್‌ ಭಾವಚಿತ್ರವಿಟ್ಟು ಪುಷ್ಪನಮನಕ್ಕೆ ಸಜ್ಜುಗೊಳಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ಅವರಿಗೆ ಸೂಚಿಸಿದರು.

ವಿದ್ಯುದ್ದೀಪಕ್ಕೆ ಸೂಚನೆ:

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದು ದಿನ ಮೊದಲೇ ಡಿಸಿ ಕಚೇರಿ ಸೇರಿ ಪ್ರಮುಖ ಸರ್ಕಾರಿ ಕಚೇರಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಬೇಕು. ಆ.15ರ ಬೆಳಗ್ಗೆ 9ಕ್ಕೆ ಸರಿಯಾಗಿ ಧ್ವಜಾರೋಹಣ ನಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಲಿದ್ದಾರೆ ಎಂದರು. ಪರಿಶೀಲನೆ ವೇಳೆ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ತಹಸೀಲ್ದಾರ್ ರೇಷ್ಮಾಶೆಟ್ಟಿ, ನಗರ ಸಭೆ ಆಯುಕ್ತ ಬಸವರಾಜು ಮೊದಲಾದವರಿದ್ದರು.

ಜೇನು ಗೂಡು ತೆರವು:

ಮೈದಾನದ ಮರದಲ್ಲಿ ಜೇನು ಗೂಡುಗಳಿಗೆ ಬ್ಯಾಂಡ್‌ ಹಾಗೂ ಧ್ವನಿ ವರ್ಧಕದ ಶಬ್ದಕ್ಕೆ ಹಾರುವ ಸಾಧ್ಯತೆ ಇದೆ. ತೆರವುಗೊಳಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಬೇಕೆಂದು ತಹಸೀಲ್ದಾರ್‌ ರೇಷ್ಮಾ ಶೆಟ್ಟಿ ಅವರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು

ಸಾಂಸ್ಕೃತಿಕ ಕಾರ್ಯಕ್ರಮ ಏಕಿಲ್ಲ: ಸಿಇಒ

ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗುತ್ತದೆ. ಆದರೆ, ಚಿಕ್ಕಮಗಳೂರಿನಲ್ಲಿ ಆ ಕಾರ್ಯ ಏಕೆ ಮಾಡುತ್ತಿಲ್ಲ ಎಂದು ಜಿಪಂ ಸಿಇಒ ಎಚ್‌.ಎಸ್‌.ಕೀರ್ತನಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಆಗ ರಮೇಶ್‌, ಹವಾಮಾನ ಇಲಾಖೆ ಮಳೆಯ ಯೆಲ್ಲೋ ಅಲರ್ಟ್‌ ಎಚ್ಚರಿಕೆ ನೀಡಿದೆ ಎಂಬ ಕಾರಣಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಿದ್ಧತೆ ಮಾಡಿಲ್ಲ ಎಂದು ಸಬೂಬು ಹೇಳಿ ನುಣುಚಿಕೊಂಡರು.

ಪೆರೇಡ್‌ನಲ್ಲಿ ಒಟ್ಟು 31 ತಂಡ

ಡಿಆರ್‌ಆರ್‌, ಸಿವಿಲ್‌, ಮಹಿಳಾ ಪೊಲೀಸ್‌, ಅರಣ್ಯ, ಗೃಹ ರಕ್ಷಣಾ ದಳ, ನಿವೃತ್ತ ಸೈನಿಕರ ತಂಡ, ಮೂರು ಎನ್‌ಸಿಸಿ ತಂಡ, ಆರು ಸ್ಕೌಟ್‌ ಅಂಡ್‌ ಗೈಡ್ಸ್‌, ಆರು ಸೇವಾ ದಳ ಹಾಗೂ 7 ಶಾಲಾ- ಕಾಲೇಜು ತಂಡ ಇರಲಿವೆ. ಶಾಲಾ ತಂಡಗಳ ಪೈಕಿ ಆಶಾ ಕಿರಣ ಅಂದ ಮಕ್ಕಳ ಶಾಲಾ ತಂಡ ಹಾಗೂ ಸರ್ಕಾರಿ ಬಾಲಕ-ಬಾಲಕಿಯರ ಬಾಲಮಂದಿರ ವಿದ್ಯಾರ್ಥಿಗಳ ತಂಡ ಭಾಗವಹಿಸುತ್ತಿರುವುದು ವಿಶೇಷ. ಇದರೊಂದಿಗೆ ಮೂರು ಬ್ಯಾಂಡ್‌ ತಂಡಗಳು ಇರಲಿವೆ ಎಂದು ಜಿಲ್ಲಾ ಶಸಸ್ತ್ರ ಮೀಸಲುಪಡೆ ಪೊಲೀಸ್‌ ನಿರೀಕ್ಷಕ ಎಚ್‌.ಡಿ.ರುದ್ರೇಶ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದು ಕಡ್ಡಾಯ
ಕೈ ಮುಗಿತಿವಿ, ಸಾಮಾಜಿಕ ಬಹಿಷ್ಕಾರ ತೆರವುಗೊಳಿಸಿ