ಕನ್ನಡಪ್ರಭ ವಾರ್ತೆ ಹರಿಹರ
ನಗರದ ಹೊರವಲಯದಲ್ಲಿರುವ ಪಂಚಮಸಾಲಿ ವೀರಶೈವ ಲಿಂಗಾಯತ ಗುರುಪೀಠದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಣಿ ಚೆನ್ನಮ್ಮ ದೇಶಕ್ಕಾಗಿ ಮಾಡಿದ ಬಲಿದಾನ, ಪರಾಕ್ರಮವನ್ನು ಯುವ ಜನರಿಗೆ ತಿಳಿಸುವ ಉದ್ದೇಶದಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಣಿ ಚೆನ್ನಮ್ಮ ಐಕ್ಯವಾದ ಸ್ಥಳ ಬೆಳಗಾವಿ ಜಿಲ್ಲೆ ಬೈಲಹೊಂಗಲದಿಂದ ಅ.23ರಿಂದ ಆರಂಭವಾಗುವ ರಥಯಾತ್ರೆ ರಾಜ್ಯದ 16 ಜಿಲ್ಲೆಗಳಲ್ಲಿ ಒಂದು ವರ್ಷದ ಅವಧಿಯವರೆಗೆ ಸಂಚರಿಸಲಿದೆ. ಜಿಲ್ಲಾ, ತಾಲೂಕು ಕೇಂದ್ರಗಳ ಜೊತೆಗೆ ಗ್ರಾಮೀಣ ಭಾಗಕ್ಕೂ ಯಾತ್ರೆ ಸಾಗಲಿದೆ. ಯಾತ್ರೆ ಚಾಲನೆ, ಅಂತ್ಯ ಗೊಳಿಸುವುದು, ಸಮಾರೋಪ ಸಮಾರಂಭದ ಕುರಿತ ವಿಷಯಗಳ ಕುರಿತು ಶೀಘ್ರದಲ್ಲೆ ತೀರ್ಮಾನ ಕೈಗೊಳ್ಳಲಾಗುವುದು. ಈ ರಥಯಾತ್ರೆ ಮೂಲಕ ಸಮುದಾಯದ ಜನರಲ್ಲಿ ಸಂಘಟನೆ ಮೂಡಿಸುವ ಉದ್ದೇಶವೂ ಇದೆ ಎಂದರು.
ನಗರದ ನದಿ ದಡದಲ್ಲಿ ನಿರ್ಮಿಸಿರುವ ತುಂಗಾರತಿ ಲೋಕಾರ್ಪಣೆಗೆ ಆಗಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೋರಲಾಗಿದೆ. ತುಂಗಾರತಿ ಸ್ಥಳದಲ್ಲಿ ಎಂಟು ಮಂಟಪಗಳ ಮೇಲೆ ಮಹಾ ಪುರುಷರ ಮೂರ್ತಿ ಸ್ಥಾಪಿಸುವ ಉದ್ದೇಶವಿದೆ. ಲೋಕಾರ್ಪಣೆ ಸಮಾರಂಭದ ದಿನವು ಶೀಘ್ರವೆ ಅಂತಿಮಗೊಳಿಸಲಾಗುವುದೆಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಗುರುಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ, ಆಡಳಿತಾಧಿಕಾರಿ ಡಾ.ರಾಜಕುಮಾರ್, ಪ್ರಕಾಶ್ ಪಾಟೀಲ್, ಚಂದ್ರಶೇಖರ ಪೂಜಾರಿ, ಮಲ್ಲಿನಾಥ ಇದ್ದರು.