ಖಾಜು ಸಿಂಗೆಗೋಳಕನ್ನಡಪ್ರಭ ವಾರ್ತೆ ಇಂಡಿ
ಇಂಡಿ ಮತಕ್ಷೇತ್ರದಲ್ಲಿ ₹ 4559 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಜು.14ಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರು, ಗಣ್ಯರ ಸ್ವಾಗತಕ್ಕೆ ಲಿಂಬೆ ನಾಡು ಸಜ್ಜಾಗಿದೆ. ಪಟ್ಟಣದ ಪ್ರಮುಖ ವೃತ್ತಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.ಇಂಡಿ ಮತ ಕ್ಷೇತ್ರದಲ್ಲಿ ಬೃಹತ್ ₹ 4559 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಯನ್ನು ಸಿಎಂ ಹಾಗೂ ಡಿಸಿಎಂ ಹಾಗೂ ಸಚಿವರು ನೆರವೇರಿಸಲಿದ್ದಾರೆ. ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಬೃಹತ್ ವೇದಿಕೆ ಸಿದ್ದಗೊಳ್ಳುತ್ತಿದೆ. ಪಟ್ಟಣದಲ್ಲಿನ ರಾಷ್ಟ್ರ ನಾಯಕರು, ಶರಣರ ವೃತ್ತಗಳನ್ನು ಸುಣ್ಣ, ಬಣ್ಣ ಬಳಿದು ಸಿದ್ದಗೊಳಿಸಲಾಗಿದೆ. ರಸ್ತೆಗಳನ್ನು ಕೂಡ ಸಿಂಗಾರಗೊಳಿಸಲಾಗಿದೆ. ಪಟ್ಟಣದ ಪ್ರವಾಸಿ ಮಂದಿರವನ್ನು ಅರಮನೆಯಂತೆ ಸಿಂಗರಿಸಲಾಗಿದೆ. ಟ್ರಾಫಿಕ್ ಸಿಗ್ನಲ್‌ಗಳು ಬೆಳಗುವ ಹಂತ ತಲುಪಿವೆ. ಸರ್ಕಾರಿ ಕಚೇರಿಗಳ ಕಟ್ಟಡಗಳು ಹೊಸ ಹೊಳಪು ನೀಡುತ್ತಿವೆ. ತಮ್ಮ ನಾಯಕರನ್ನು ಸ್ವಾಗತಿಸಲು ಕಾರ್ಯಕರ್ತರು, ಮುಖಂಡರು, ಶಾಸಕರ ಕಟೌಟ್‌ಗಳು, ಬ್ಯಾನರ್, ಬಟಿಂಗ್‌ಗಳು ರಾರಾಜಿಸುತ್ತಿವೆ.ಬಬಲಾದ ಶ್ರೀಗಳು ಹೇಳಿದಂತೆ ಇಂಡಿಯನ್ನು ಬಂಗಾರದ ಗಿಂಡಿ ಮಾಡಲು ಹೊರಟ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಿದ್ಧತೆಗಳು ಭರ್ಜರಿಯಾಗಿ ನಡೆದಿವೆ. ಇದಕ್ಕೆಲ್ಲ ಸಾಕ್ಷಿಯಾಗಲು ಜು.14 ರಂದು ಇಂಡಿ ಪಟ್ಟಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವರು ಆಗಮಿಸುತ್ತಿದ್ದಾರೆ. ಇಂಡಿ, ಚಡಚಣ ತಾಲೂಕಿನ 19 ಕರೆಗಳನ್ನು ತುಂಬಿಸುವ ಯೋಜನೆ, ಜಲಜೀವನ ಮಿಷನ್ 126 ಕಾಮಗಾರಿಗಳು, ಜ್ಞಾನಯೋಗಿ ಸಿದ್ದೇಶ್ವರ ಮಾರುಕಟ್ಟೆ ಸಂಕೀರ್ಣ, ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಪ್ರಗತಿ ಕಾಲೋನಿ ಸಿಸಿ ರಸ್ತೆ, ಹೊರ್ತಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಮೆಟ್ರಿಕ್ ಪೂರ್ವ ಬಾಲಕರ ವಸತಿಗಳಿಗೆ ಹೆಚ್ಚುವರಿ ಕೊಠಡಿಗಳು, ಮೂಲಭೂತ ಸೌಕರ್ಯ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಿರಗಿ ಗ್ರಾಮದ ಹಳ್ಳಕ್ಕೆ ಬ್ರೀಡ್ಜ್ ಕಂ ಬಾಂದಾರ ನಿರ್ಮಾಣ, ಹಿರೇ ಇಂಡಿ ಹನುಮಾನ ಗುಡಿಯಿಂದ ಜಲದಪ್ಪನ ಕೆರೆವರೆಗೆ ಹಳ್ಳದ ಅಭಿವೃದ್ದಿ, ಆಳೂರ ಗ್ರಾಮದಲ್ಲಿ ಬಾಂದಾರ, ನಿಂಬಾಳ ಕೆರೆ ಅಭಿವೃದ್ದಿ, ಹಿರೇಬೇವನೂರ ಗ್ರಾಮದ ಪಿಟಿ ಟ್ಯಾಂಕ್ ಅಭಿವೃದ್ದಿ ಕಾಮಗಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಝಳಕಿ, ಸಾತಲಗಾಂವ ಸರ್ಕಾರಿ ಪ್ರೌಢ ಶಾಲೆ ಕಟ್ಟಡ, ಅಂಗನವಾಡಿ ಕಟ್ಟಡಗಳು, ಅಗರಖೇಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮತ್ತು ಸಿಬ್ಬಂದಿ ವಸತಿ ಗೃಹ, ಝಳಕಿ ತಾಂತ್ರಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಕೊಠಡಿಗಳ ಸೇರಿ ಒಟ್ಟು ಬೃಹತ್ ₹ 4559 ಕೋಟಿ ವೆಚ್ಚದ ಕಾಮಗಾರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.
ಕೊಟ್‌ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿಯುವ ಅಭಿವೃದ್ಧಿ ಕೆಲಸಗಳು ಕ್ಷೇತ್ರದಲ್ಲಿ ಆಗಿವೆ. ಜು.14 ರಂದು ₹ 4559 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ, ನಿರ್ಮಾಣಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸಚಿವರು ಆಗಮಿಸಲಿದ್ದಾರೆ. ಕ್ಷೇತ್ರ, ಜಿಲ್ಲೆಯ ವಿವಿಧ ಕ್ಷೇತ್ರದ ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇದೆ. ಸರ್ವರಿಗೂ ಸ್ವಾಗತ ಬಯಸುತ್ತೇವೆ. ಕಾರ್ಯಕ್ರಮಕ್ಕೆ ಸಿದ್ದತೆ ನಡೆದಿದೆ.ಯಶವಂತರಾಯಗೌಡ ಪಾಟೀಲ, ಶಾಸಕರುಕೋಟ್ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಮತ ಕ್ಷೇತ್ರವನ್ನು ಸರ್ವ ವಿಧದಲ್ಲಿ ಅಭಿವೃದ್ಧಿಪಡಿಸಲು ಸಾಕಷ್ಟು ಅನುದಾನ ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಾದ ಯಶವಂತರಾಯಗೌಡ ಪಾಟೀಲರು ಕೇಳಿದಷ್ಟು ಅನುದಾನ ನೀಡಿದ್ದಾರೆ. ಪ್ರಶಾಂತ ಕಾಳೆ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು.ಕೊಟ್
ಹಿಂದೆಂದೂ ಅಭಿವೃದ್ಧಿಯಾಗದ ಇಂಡಿ ಮತಕ್ಷೇತ್ರ ಯಶವಂತರಾಯಗೌಡ ಪಾಟೀಲ ಅವರು ಶಾಸಕರಾದ ಮೇಲೆ, ಶಿಕ್ಷಣ, ನೀರಾವರಿ, ಸಹಕಾರಿ, ಕೈಗಾರಿಕೆ ಸೇರಿದಂತೆ ಸರ್ವರಂಗದಲ್ಲಿಯೂ ಅಭಿವೃದ್ದಿ ಸಾಧಿಸಿದೆ. ಯಶವಂತರಾಯಗೌಡ ಪಾಟೀಲ ಅವರು ಸರ್ವರನ್ನು ಪ್ರೀತಿಸುತ್ತ, ಸಂಕಷ್ಟವನ್ನು ಆಗಲಿಸುತ್ತ, ಕ್ಷೇತ್ರದ ಜನರಿಗೆ ಆದ ನೋವು ನನಗಾಗಿದೆ ಎಂದು ಭಾವಿಸುವ ತಾಯಿ ಹೃದಯದ ಮನುಷ್ಯ. ನಮಗೆ ಸಿಕ್ಕಿದ್ದು ಕ್ಷೇತ್ರದ ಜನತೆಯ ಪುಣ್ಯ. ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ಎಲ್ಲ ಸಮುದಾಯವರು ಅನ್ಯೋನ್ಯತೆಯಿಂದ ಬದುಕು ಸಾಗಿಸುತ್ತಿರುವುದು ಸಂತಸದ ಸಂಗತಿ.ಹುಚ್ಚಪ್ಪ ತಳವಾರ, ಬುಯ್ಯಾರ.