ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು: ಆಶಾ ರಾಜೇಶ್

KannadaprabhaNewsNetwork |  
Published : Jul 13, 2025, 01:18 AM IST
12ಕೆಎಂಎನ್ ಡಿ12 | Kannada Prabha

ಸಾರಾಂಶ

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಶಾಲಾ ಮಕ್ಕಳಿಗೆ ಉಚಿತ ಶೂ ವಿತರಣೆ, ಪರಿಸರ ಕಾಳಜಿಯಿಂದ ಟಯೋಟೋ ಸಂಸ್ಥೆ ಪ್ರೋಗ್ರಾಂ ಲೀಡರ್‌ರಾದ ಅಣ್ಣೂರು ಚಂದ್ರೇಶ್ ಪಟೇಲ್ ಅವರ ಜೊತೆಗೂಡಿ ಸುಮಾರು 200 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸರ್ಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರದ ಜತೆಗೆ ಸಂಘ-ಸಂಸ್ಥೆಗಳ ನೆರವು ಅತ್ಯಗತ್ಯವಾಗಿದೆ ಎಂದು ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆ ಅಧ್ಯಕ್ಷೆ ಆಶಾರಾಜೇಶ್ ಹೇಳಿದರು.

ಸಮೀಪದ ಅಣ್ಣೂರು ಮತ್ತು ಮೆಣಸಗೆರೆ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆಯಿಂದ ಉಚಿತವಾಗಿ ಮಕ್ಕಳಿಗೆ ಶೂಗಳನ್ನು ವಿತರಿಸಿ ಮಾತನಾಡಿ, ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ರೋಟರಿ ಸೇವಾ ಸಂಸ್ಥೆಯೂ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕವಾಗಿ ಪ್ರಭಲ ಹೊಂದಿರುವ ದಾನಿಗಳ ಜತೆಗೂಡಿ ಸೇವೆ ನೀಡುತಿದ್ದೇವೆ ಎಂದರು.

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಶಾಲಾ ಮಕ್ಕಳಿಗೆ ಉಚಿತ ಶೂ ವಿತರಣೆ, ಪರಿಸರ ಕಾಳಜಿಯಿಂದ ಟಯೋಟೋ ಸಂಸ್ಥೆ ಪ್ರೋಗ್ರಾಂ ಲೀಡರ್‌ರಾದ ಅಣ್ಣೂರು ಚಂದ್ರೇಶ್ ಪಟೇಲ್ ಅವರ ಜೊತೆಗೂಡಿ ಸುಮಾರು 200 ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ ಎಂದರು.

ಮೊದಲನೆ ಹಂತದಲ್ಲಿ ಎರಡು ಶಾಲೆಗಳಲ್ಲಿ ಉಚಿತ ಶಾಲಾ ಮಕ್ಕಳಿಗೆ ಶೂಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಾಲಾ ಮಕ್ಕಳ ಕಲಿಕೆಗೆ ನೇರವಾಗಲು ಸಂಸ್ಥೆ ಮುಂದಾಗಿದೆ. ಇನ್ನುಳಿದ ಶಾಲಾ ಪರಿಕರಗಳನ್ನು ಮಕ್ಕಳಿಗೆ ನೀಡಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗುವುದು ಎಂದರು.

ಬೆಂಗಳೂರು ಬಸವನಗುಡಿ ರೋಟರಿ ಸಂಸ್ಥೆ ಮೆಣಸಗೆರೆ ಗ್ರಾಮದ ದಾಖ್ಲೇ ಹೊಂದಿರುವ ಎರೆಮಾಳ(ಬೋರೆ) ಗ್ರಾಮವನ್ನು ದತ್ತು ಪಡೆದು ಗ್ರಾಮಕ್ಕೆ ಅಗತ್ಯವಿರುವ ಸರ್ಕಾರಿ ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ ಇನ್ನೂಳಿದ ಸೇವಾಗಳಾದ ಆರೋಗ್ಯ, ಸ್ವಚ್ಛತೆ, ಶಿಕ್ಷಣ, ಪರಿಸರ ಸಂರಕ್ಷಣೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗುವುದು ಜತೆಗ ಗ್ರಾಮದ ಸರ್ವೋತೋಮುಖ ಅಭಿವೃದ್ಧಿಗೆ ಸ್ಥಳೀಯ ಸಂಘ ಸಂಸ್ಥಗಳು ಹಾಗೂ ಜನಪ್ರತಿನಿಧಿಗಳ ಜತೆಗೂಡಿ ಅಭಿವೃದ್ಧಿಪಡಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ರೋಟರಿ ಸಂಸ್ಥೆ ಅಸಿಸ್ಟೆಂಟ್ ಗೌರ್ನರ್ ಅಣ್ಣೂರು ಚಂದ್ರೇಶ್ ಪಟೇಲ್, ರೋಟರಿ ಕಾರ್ಯದರ್ಶಿ ರಾಜಶೇಖರ್, ಮುಖ್ಯ ಶಿಕ್ಷಕರಾದ ಸಿದ್ದೇಗೌಡ, ನಂದಿನಿ ಮೆಣಸಗೆರೆ ಗ್ರಾಪಂ ಪಿಡಿಒ ಸತೀಶ್, ಮಾಜಿ ಅಧ್ಯಕ್ಷ ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ