ಶಿಕ್ಷಣದಿಂದ ಮಾತ್ರ ಭಾರತ ಅಭಿವೃದ್ಧಿ ಸಾಧ್ಯ: ಹರೀಶ್

KannadaprabhaNewsNetwork |  
Published : Jun 18, 2025, 12:38 AM IST
17 HRR 01ಹರಿಹರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ  ಪ್ರೌಢಶಾಲೆಯಲ್ಲಿಸೆನಾಫಸಿಸ್ ಹಾಗೂ ಇಂಡಿಯಾ ಸುಧಾರ್ ಎಜುಕೇಷನಲ್ ಅಂಡ್ ಚಾರಿಟೆಬಲ್  ಟ್ರಸ್ಟ್ ಬೆಂಗಳೂರು ಇವರು ನೀಡುವ ಉಚಿತ ನೋಟ್ ಬುಕ್ ಗಳನ್ನು ಶಾಸಕ ಬಿ.ಪಿ.ಹರೀಶ್  ವಿತರಣೆ ಮಾಡಿ ಮಾತನಾಡಿದರು. | Kannada Prabha

ಸಾರಾಂಶ

ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆ ಸಂಘ, ಸಂಸ್ಥೆಗಳು ಇದನ್ನು ಅರಿತು, ರಾಜ್ಯದ ಅನೇಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲ್ಯಾಪ್ ಟಾಪ್, ಶೌಚಾಲಯ ಸೌಲಭ್ಯ, ಕ್ರೀಡಾ ಸಲಕರಣೆಗಳ ನೆರವು ಕಲ್ಪಿಸುತ್ತಿವೆ. ಆ ಮೂಲಕ ಶಿಕ್ಷಣ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ದೇಶದ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ. ಈ ಹಿನ್ನೆಲೆ ಸಂಘ, ಸಂಸ್ಥೆಗಳು ಇದನ್ನು ಅರಿತು, ರಾಜ್ಯದ ಅನೇಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಲ್ಯಾಪ್ ಟಾಪ್, ಶೌಚಾಲಯ ಸೌಲಭ್ಯ, ಕ್ರೀಡಾ ಸಲಕರಣೆಗಳ ನೆರವು ಕಲ್ಪಿಸುತ್ತಿವೆ. ಆ ಮೂಲಕ ಶಿಕ್ಷಣ ಕ್ಷೇತ್ರವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸೋಮವಾರ ಬೆಂಗಳೂರಿನ ಸೆನಾಫಸಿಸ್ ಹಾಗೂ ಇಂಡಿಯಾ ಸುಧಾರ್ ಎಜುಕೇಷನಲ್ ಅಂಡ್ ಚಾರಿಟೆಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೀಡಲಾದ ಉಚಿತ ನೋಟ್ ಬುಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಅನೇಕ ಶಾಲೆಗಳಲ್ಲಿ ಈ ಸಂಸ್ಥೆಯು ಹಲವು ವರ್ಷಗಳಿಂದ ನೋಟ್ ಬುಕ್ ಹಾಗೂ ಕ್ರೀಡಾ ಸಾಮಗ್ರಿಗಳ ಸೌಲಭ್ಯ, ಶೌಚಾಲಯಗಳನ್ನು ಉಚಿತವಾಗಿ ನಿರ್ಮಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ್ದಾರೆ ಎಂದರು.

ಟ್ರಸ್ಟ್‌ ನಿರ್ದೇಶಕ ಕಿರಣ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯಿಂದ ತಾಲೂಕಿನಲ್ಲಿ ಸರ್ಕಾರಿ ಹೈಸ್ಕೂಲ್ ಮತ್ತು ಪ್ರೈಮರಿ 40 ಶಾಲೆಯ 21 ಸಾವಿರಕ್ಕೂ ಅಧಿಕ ನೋಟ್ ಬುಕ್ ವಿತರಣೆ ಹಾಗೂ ಸುಮಾರು ಎರಡೂವರೆ ಕೋಟಿ ಅನುದಾನದಲ್ಲಿ 18 ಶೌಚಾಲಯಗಳು, ಮಹಿಳೆಯರ ವಿಶ್ರಾಂತಿ ಗೃಹಗಳು, ನೋಟ್ ಬುಕ್, ಕಂಪ್ಯೂಟರ್, ನಲಿ ಕಲಿ ಕ್ರೀಡಾ ಸಾಮಗ್ರಿಗಳ ಜೊತೆಗೆ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡುತ್ತಿದ್ದೇವೆ ಎಂದು ವಿವರಿಸಿದರು.

ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ರೇವಣನಾಯ್ಕ ಬಿ.ಬಿ., ಬಿ.ಆರ್.ಸಿ. ಕೃಷ್ಣಪ್ಪ, ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಬಿ.ಪಿ. ಉಮೇಶ್, ಮು.ಶಿ, ಪೀರು ನಾಯ್ಕ, ಆರ್.ಆರ್.ಮಠ, ರಾಘವೇಂದ್ರ, ಮಲ್ಲಿಕಾರ್ಜುನ, ಪ್ರವೀಣಕುಮಾರ ಬಿ., ಪರಶುರಾಮ, ತಿರುಮಲ, ಬಣಕಾರ ಮೃತ್ಯುಂಜಯ, ಹೊನಕೇರಪ್ಪ ಎಂ., ಗಿರಿಜಮ್ಮ ಗಿರಿಯಪ್ಪನವರ್, ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-17HRR01:

ಹರಿಹರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಬುಕ್ ವಿತರಿಸಲಾಯಿತು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ