ತರೀಕೆರೆ: ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕಲ್ಲತ್ತಿಗಿರಿಯಲ್ಲಿ ಓಮಿನಿ ವಾಹನದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಚಾಲಕನಿಗೆ ಸಣ್ಣ ಪುಟ್ಟಗಾಯಗಳಾಗಿದೆ.
ತರೀಕೆರೆ: ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕಲ್ಲತ್ತಿಗಿರಿಯಲ್ಲಿ ಓಮಿನಿ ವಾಹನದ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ವಾಹನ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಚಾಲಕನಿಗೆ ಸಣ್ಣ ಪುಟ್ಟಗಾಯಗಳಾಗಿದೆ.
ಶ್ರೀ ಕ್ಷೇತ್ರ ದೇವತೆಯಾಗಿರುವ ಶ್ರೀ ಕಟ್ಟಿನ ಚೌಡೇಶ್ವರಿ ದೇವಿ ದೇಗುಲದ ಪ್ರಧಾನ ಅರ್ಚಕ ಈರಣ್ಣ ಅವರಿಗೆ ಸೇರಿದ ಈ ಕಾರನ್ನು ನಿಲ್ಲಿಸಿದ್ದಾಗ ಅದರಲ್ಲಿ ಕುಳಿತಿದ್ದ ಅರ್ಚಕ ಈರಣ್ಣ ಪವಾಡ ಸದೃಶ್ಯ ರೀತಿಯಲ್ಲಿ ಬಚಾವ್ ಅಗಿದ್ದು, ಚಾಲಕ ಮಹಂತೇಶ್ ಗೆ ಲಿಂಗದಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
ಲಿಂಗದಹಳ್ಳಿ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರಕ್ಷಕ ಠಾಣಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಎಡಬಿಡದೆ ದಿನವಿಡೀ ಸುರಿದ ಮಳೆ: ತರೀಕೆರೆ: ಸೋಮವಾರ ಮಧ್ಯಾಹ್ನದ ನಂತರ ಪಟ್ಟಣದಲ್ಲಿ ಸ್ವಲ್ಪ ಬಿಡುವು ನೀಡಿದ್ದ ಮಳೆ ಮತ್ತೆ ಮಂಗಳವಾರ ಬೆಳಗಿನಿಂದಲೇ ಆರಂಭ ವಾಗಿದ್ದು ಎಡಬಿಡದೆ ದಿನವಿಡೀ ಸುರಿಯಿತು. ಕೊಡೆಯ ಆಶ್ರಯವಿಲ್ಲದೆ ರಸ್ತೆಯಲ್ಲಿ ಸಂಚರಿಸುವಂತಿರಲಿಲ್ಲ, ದಟ್ಟ ಮಳೆ ಸುರಿಯುತ್ತಿದ್ದುದರಿಂದ ರಸ್ತೆ ಚರಂಡಿಗಳೆಲ್ಲಾ ನೀರು ತುಂಬಿ ಹರಿಯಿತು.
17ಕೆಟಿಆರ್.ಕೆ.1ಃ
ತರೀಕೆರೆ ಸಮಿಪದ ಕಲ್ಲತ್ತಿಗಿರಿಯಲ್ಲಿರುವ ಶ್ರೀ ಕಟ್ಟಿನ ಚೌಡೇಶ್ವರಿ ದೇವಸ್ಥಾನ ಬಳಿ ನಿಲ್ಲಿಸಿದ್ದ ಓಮಿನಿ ವಾಹನದ ಮೇಲೆ ಬೃಹತ್ ಮರ ಉರುಳಿ ಬಿದ್ದಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.