ತರೀಕೆರೆ ಜನತೆ ಹೆಮ್ಮೆ ಮೂಡಿಸಿದ ಕಾರ್ತಿಕ್ ಸಾಧನೆ: ಶಾಸಕ ಶ್ರೀನಿವಾಸ್

KannadaprabhaNewsNetwork |  
Published : Jun 18, 2025, 12:32 AM IST
ಯು.ಪಿ.ಎಸ್.ಸಿ. ಸಿ.ಡಿ.ಎಸ್.ಪರೀಕ್ಷೆಯಲ್ಲಿ ಭಾರತ ದೇಶಕ್ಕೆ 44ನೇ ರ್ಯಾಂಕ್ ಪಡೆದ ಕಾರ್ತಿಕ್ ಟಿ.ಬಿ,.ಅವರಿಗೆ ಕಾಂತಿವೀರ ಸಂಗೊಳ್ಳಿ ರಾಯಣ್ಣ ಶ್ರೀ ಬಿರುದು ನೀಡಿ ಗೌರವಿಸಿ ಸನ್ಮಾನ | Kannada Prabha

ಸಾರಾಂಶ

ತರೀಕೆರೆಕಾರ್ತಿಕ್ ಅವರು ಯುಪಿಎಸ್ಸಿ ಸಿಡಿಎಸ್ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಗಳಿಸಿರುವುದು ತರೀಕೆರೆ ಜನತೆ ಹೆಮ್ಮೆಪಡುಂತಹ ವಿಷಯ. ಮುಂದೆ ಇನ್ನು ಅತ್ಯುನ್ನತ ಹುದ್ದೆಗೇರುವಂತಾಗಲಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಯುಪಿಎಸ್ಸಿ ಸಿಡಿಎಸ್ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಗಳಿಸಿದ್ದಕ್ಕೆ ಕಾಂತಿವೀರ ಸಂಗೊಳ್ಳಿ ರಾಯಣ್ಣ ಶ್ರೀ ಬಿರುದು ನೀಡಿ ಸನ್ಮಾನ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಾರ್ತಿಕ್ ಅವರು ಯುಪಿಎಸ್ಸಿ ಸಿಡಿಎಸ್ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್ ಗಳಿಸಿರುವುದು ತರೀಕೆರೆ ಜನತೆ ಹೆಮ್ಮೆಪಡುಂತಹ ವಿಷಯ. ಮುಂದೆ ಇನ್ನು ಅತ್ಯುನ್ನತ ಹುದ್ದೆಗೇರುವಂತಾಗಲಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಭಾನುವಾರ ತರೀಕೆರೆಯ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದಿಂದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಸಮಾರಂಭದಲ್ಲಿ ಯುಪಿಎಸ್ಸಿ ಸಿಡಿಎಸ್ ಪರೀಕ್ಷೆಯಲ್ಲಿ ದೇಶಕ್ಕೆ 44ನೇ ರ್‍ಯಾಂಕ್ ಪಡೆದ ಪಟ್ಟಣ ನಿವಾಸಿ ಟಿ.ಬಿ. ಕಾರ್ತಿಕ್‌ಗೆ ಕಾಂತಿವೀರ ಸಂಗೊಳ್ಳಿ ರಾಯಣ್ಣ ಶ್ರೀ ಬಿರುದು ನೀಡಿ ಗೌರವಿಸಿ ಮಾತನಾಡಿದರು.ರ್‍ಯಾಂಕ್‌ ಪಡೆದ ಕಾರ್ತಿಕ್ ಬಗ್ಗೆ ಹೆಮ್ಮೆ ಪಡುವಂತಾಗಿದೆ. ಮುಂದೆ ಫೀಲ್ಡ್ ಮಾರ್ಷಲ್ ಆಗಿ ಸ್ಥಾನ ಪಡೆಯುವಂತಾಗಲಿ ಎಂಬುದು ಸರ್ವರ ಆಶಯವಾಗಿದೆ ಎಂದು ನುಡಿದರು.ವಿಧಾನ ಪರಿಷತ್ತು ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ 44ನೇ ರ್‍ಯಾಂಕ್‌ ಪಡೆದು ತರೀಕೆರೆಗೆ ಹೆಮ್ಮೆ ತಂದ ಕಾರ್ತಿಕ್ ಸಾಧನೆ ಮೆಚ್ಚುವಂತಹುದು. ದೇಶ ಸೇವೆ ಮಾಡಲು ಗುಂಡಿಗೆ ಇರಬೇಕು. ದೇಶ ಸೇವೆಗೆ ಹೋಗಲು ಇವರು ಸಾಧನೆ ಮಾಡಿದ್ದಾರೆ ಇದು ನಮ್ಮ ಜಿಲ್ಲೆ ಮತ್ತು ರಾಜ್ಯವೇ ಹೆಮ್ಮ ಪಡುವಂತದ್ದು ಎಂದು ಅಭಿಪ್ರಾಯ ಪಟ್ಟರು. ಪುರಸಭಾ ಮಾಜಿ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಅತಿ ಕಠಿಣವಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಶ್ರಮ ಮತ್ತು ಬುದ್ದಿವಂತಿಕೆಯಿಂದ ಸಾಧನೆ ಮಾಡಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಬೇಕು. ಮಕ್ಕಳನ್ನು ರಾತ್ರಿ ಸಮಯದಲ್ಲಿ ಹೆಚ್ಚು ಹೊತ್ತು ಹೊರಗೆ ಹೋಗಲು ಬಿಡಬೇಡಿ ಎಂದು ಸಲಹೆ ಮಾಡಿದರು.ಪುರಸಭೆ ಸದಸ್ಯ ಟಿ.ಜಿ.ಶಶಾಂಕ್ ಮಾತನಾಡಿ ಕಾರ್ತಿಕ್ ಇತಿಹಾಸ ಸೃಷ್ಟಿಸಿದ್ದಾರೆ. ಸರಳ ಜೀವನ ಪ್ರೀತಿಸುವ ಅವರ ಸಾಧನೆ ಯುವಕರಿಗೆ ಸ್ಪೂರ್ತಿ ಎಂದು ತಿಳಿಸಿ, ಶುಭ ಕೋರಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ ಕಾರ್ತಿಕ್ ಚಿಕ್ಕ ವಯಸ್ಸಿನಲ್ಲೇ ಎಲ್ಲರೂ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಸಮಾಜ ಹಾಗೂ ಊರಿಗೂ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ ದೇಶ, ರಾಜ್ಯ ಮತ್ತು ತರೀಕೆರೆಗೆ ಕೀರ್ತಿ ತರಲಿ, ಅವರ ಸಾಧನೆ ಯುವಪೀಳಿಗೆಗೆ ಮಾದರಿ ಎಂದು ಶುಭ ಕೋರಿದರು.

ಸನ್ಮಾನ ಸ್ವೀಕರಿಸಿದ ಕಾರ್ತಿಕ್ ಟಿ.ಬಿ. ಮಾತನಾಡಿ ಇನ್ನೊಬ್ಬರನ್ನು ನೋಡಿ ಒಳ್ಳೆಯದನ್ನು ಕಲಿತು ಕೊಳ್ಳಬೇಕು, ಬೇರೆಯ ವರಿಗೆ ನಾವು ಏನು ಕೊಡುತ್ತೇವೆ ಅದು ಮುಖ್ಯ ವಾಗುತ್ತದೆ ಎಂದ ಅವರು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವಿವಿಧ ಸಂಘ ಸಂಸ್ಥೆಗಳಿಂದ ಕಾರ್ತಿಕ್ ಟಿ.ಬಿ.ಅವರನ್ನುಸನ್ಮಾನಿಸಲಾಯಿತು.ಪುರಸಭೆ ಅದ್ಯಕ್ಷ ವಸಂತ ಕುಮಾರ್‌ ಜಿಲ್ಲಾ ಕುರುಬ ಸಮಾಜದ ಜಿಲ್ಲಾಧ್ಯಕ್ಷ ಶಾಂತೇಗೌಡ, ಡಾ.ಭರತ್ ಅಂಜೆ , ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಯ್ಯ, ಟಿ.ಡಿ.ರವಿಕುಮಾರ್, ಸಮಾಜದ ಮುಖಂಡರಾದ ಗೋವಿಂದಪ್ಪ, ಕಾರ್ತಿಕ್ ಅವರ ತಾಯಿ ಸೌಭಾಗ್ಯ, ಹಿರಿಯರಾದ ಕರಿಯಣ್ಣ, ಕನಕಶ್ರೀ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮೀವಿಶ್ವನಾಥ್, ರಶ್ಮಿ ರಮೇಶ್ ಮತ್ತಿತರರು ಭಾಗವಹಿಸಿದ್ದರು.-

16ಕೆಟಿಆರ್.ಕೆ.6ಃ

ತರೀಕೆರೆಯಲ್ಲಿ , ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ತರೀಕೆರೆಯಿಂದ ನಡೆದ ಕಾರ್ಯಕ್ರಮದಲ್ಲಿ ಕಾರ್ತಿಕ್ ಟಿ.ಬಿ.ಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶ್ರೀ ಬಿರುದು ನೀಡಿ ಸನ್ಮಾನಿಸಲಾಯಿತು. ಟಿ.ಎಸ್.ರಮೇಶ್, ಪುರಸಭೆ ಅಧ್ಯಕ್ಷ ವಸಂತ ಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕುರುಬ ಸಮಾಜ ಅಧ್ಯಕ್ಷ ಶಾಂತೇಗೌಡ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌