ಭಾರತ ವಿಕಸಿತ ಬಜೆಟ್: ಸಚಿವ ಭಗವಂತ ಖೂಬಾ

KannadaprabhaNewsNetwork | Published : Feb 2, 2024 1:02 AM

ಸಾರಾಂಶ

ಕೇಂದ್ರ ಸರ್ಕಾರವು ಇಂದು ಮಧ್ಯಂತರ ಮಂಡಿಸಿರುವ ಬಜೆಟ್, ಭಾರತ ವಿಕಸಿತ ಬಜೆಟ್ ಆಗಿದೆ, ಬಡವರ, ರೈತರ, ಮಹಿಳೆಯರ ಹಾಗೂ ಯುವಕರ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೀಡಿರುವ ಬಜೆಟ್ ಇದಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಚುನಾವಣೆಗಾಗಿ ಸುಳ್ಳು ಭರವಸೆಗಳು, ಘೋಷಣೆಗಳು ಮಾಡದೆ ಭಾರತವನ್ನು ವಿಶ್ವುಗುರುವಾಗಿಸುವ ಬಜೆಟ್ ಮಂಡಿಸಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಇಂದು ಮಧ್ಯಂತರ ಮಂಡಿಸಿರುವ ಬಜೆಟ್, ಭಾರತ ವಿಕಸಿತ ಬಜೆಟ್ ಆಗಿದೆ, ಬಡವರ, ರೈತರ, ಮಹಿಳೆಯರ ಹಾಗೂ ಯುವಕರ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ನೀಡಿರುವ ಬಜೆಟ್ ಇದಾಗಿದೆ. ಘೋಷಣೆಯಾದ ಹೊಸ ಯೋಜನೆಗಳಿಂದ ಎಲ್ಲಾ ವರ್ಗದವರಿಗೆ ಉತ್ತಮ ಜೀವನ ನೀಡಲು ಸಾಧ್ಯವಾಗಲಿವೆ.

ಲಕಪತಿ ದಿದಿ ಯೋಜನೆಯನ್ನು 9 ಕೋಟಿ ಮಹಿಳೆಯರಿಗೆ, ಸ್ವ-ಸಹಾಯ ಸಂಘದ ಮಹಿಳೆಯರಿಗೆ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಯೋಜನೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ ಭಾರತ ಯೋಜನೆಯ ವಿಸ್ತರಣೆ, ಹಾಗೂ ಆರೋಗ್ಯ ವಿಮೆ ಮೂಲಕ ದೇಶದ ಮಹಿಳೆಯರಿಗೆ ಒತ್ತು ನೀಡಲಾಗಿದೆ ಎಂದು ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.ವಿಕಸಿತ ಭಾರತಕ್ಕೆ ಬಜೆಟ್ ಬುನಾದಿ: ಬೆಲ್ದಾಳೆಕನ್ನಡಪ್ರಭ ವಾರ್ತೆ ಬೀದರ್‌ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ವಿಕಸಿತ ಭಾರತ ಹಾಗೂ ರಾಮರಾಜ್ಯ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕುವ ಮಹತ್ವದ ಅಂಶಗಳನ್ನು ಒಳಗೊಂಡಿವೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ನೇತ್ರತ್ವದಲ್ಲಿ ಕಳೆದ 10 ವರ್ಷಗಳಲ್ಲಿ ಭಾರತದ ಅಭಿವೃದ್ಧಿಯ ಬಾಗಿಲು ತೆರೆದಿದೆ. ಈ ಸಲದ ಬಜೆಟ್ ಭಾರತದ ಆರ್ಥಿಕ ಸದೃಢತೆ ಬಲಿಷ್ಠ ಮಾಡಲು ಬೇಕಾಗುವ ಎಲ್ಲ ದೂರದೃಷ್ಟಿತ್ವದ ಯೋಜನೆಗಳನ್ನು ಒಳಗೊಂಡಿದೆ ಎಂದು ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದ್ದಾರೆ.

ವಿಕಸಿತ ಭಾರತ ಸಂಕಲ್ಪಕ್ಕೆ ಮಧ್ಯಂತರ‌ ಬಜೆಟ್ ಪೂರಕ: ಪ್ರಭು ಚವ್ಹಾಣ್

ಕನ್ನಡಪ್ರಭ ವಾರ್ತೆ ಔರಾದ್ಕೇಂದ್ರ‌ ಸರ್ಕಾರದ ಮಧ್ಯಂತರ ಬಜೆಟ್ ಆರ್ಥಿಕ ಸ್ಥಿರತೆ, ಸಮಗ್ರ ಅಭಿವೃದ್ಧಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವುದರೊಂದಿಗೆ 2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಗೆ ಪೂರಕವಾಗಿದೆ ಎಂದು ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಬಿ.ಚವ್ಹಾಣ್‌ ತಿಳಿಸಿದ್ದಾರೆ.ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಚುನಾವಣಾ ಬಜೆಟ್ ಮಂಡಿಸುತ್ತವೆ. ಆದರೆ ಕೇಂದ್ರ ಸರ್ಕಾರ ಹಳೆಯ ಸಂಪ್ರದಾಯಗಳಿಗೆ ಜೋತು ಬೀಳದೆ ಕೇವಲ ದೇಶದ ಅಭಿವೃದ್ಧಿಯ ಹಿತದೃಷ್ಟಿಯೊಂದಿಗೆ ಬಜೆಟ್ ಮಂಡಿಸಿರುವುದು ವಿಶೇಷವಾಗಿದೆ ಎಂದಿದ್ದಾರೆ.

Share this article