ವಿಜಯಪುರ: ಶ್ರೇಷ್ಠ ಸಂಸ್ಕೃತಿ ಒಳಗೊಂಡ ಭಾರತವು ವಿಶ್ವಕ್ಕೆ ಮಾದರಿಯಾಗಿದೆ. ಅಧ್ಯಾತ್ಮ, ಧಾರ್ಮಿಕತೆ, ವೈಜ್ಞಾನಿಕ, ಕಲೆ, ಸಾಹಿತ್ಯ, ಸಂಪ್ರದಾಯದ ಆಚರಣೆಗಳಲ್ಲಿ ದೇಶ ತನ್ನದೆಯಾದ ವಿಶಿಷ್ಟತೆಯನ್ನು ಒಳಗೊಂಡಿದೆ ಎಂದು ಚೇತನಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರಾಜಶ್ರೀ ಜುಗತಿ ಹೇಳಿದರು.
ಮುಖ್ಯೋಪಾಧ್ಯಾಯ ಎ.ಎಚ್. ಕೊಳಮಲಿ ಮಾತನಾಡಿ, ಸಾಂಪ್ರದಾಯಿಕ ದಿನಾಚರಣೆಯಿಂದ ದೇಶದ ಪರಂಪರೆ, ಸಂಸ್ಕೃತಿ ಉಳಿಯುತ್ತದೆ. ಜತೆಗೆ ಯುವಕರಿಗೆ ದೇಶದ ಪರಂಪರೆಯ ಅರಿವು ಮೂಡುತ್ತದೆ ಎಂದು ಹೇಳಿದರು.
ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ರೋಹಿತ ಜುಗತಿ, ನಿರ್ದೇಶಕ ಡಾ.ನಾಗರಾಜ ಹೇರಲಗಿ, ಸಹಾಯಕ ಆಡಳಿತಾಧಿಕಾರಿ ಪ್ರಮೋದ ಕುಲಕರ್ಣಿ, ಸಿ.ಎಸ್.ವಾಲಿ, ಸಾಗರ ಕುಲಕರ್ಣಿ, ಸಿಬ್ಬಂದಿ ಉಪಸ್ಥಿತರಿದ್ದರು. ಶ್ರೇಯಾ ಪತ್ತಾರ ಹಾಗೂ ನವ್ಯಾ ಹವಾಲ್ದಾರ ಸ್ವಾಗತಿಸಿ, ನಿರೂಪಿಸಿದರು. ವೈಷ್ಣವಿ ಗುರಮ್ಮನವರ ವಂದಿಸಿದರು.