ಜಾತಿ, ಮತ, ಪಂಥ, ಪಕ್ಷ ಯಾವ ಭಾವನೆ ಇಲ್ಲದೇ ದೇವಿಯರ ಭಕ್ತರಾಗಿ ಇಲ್ಲಿ ಸೇರಿದ್ದು ನಮ್ಮ ಪುಣ್ಯ. ಇಂದು ರಾಜ್ಯದಲ್ಲಿ ಕೆಲವೆಡೆ ಅತಿವೃಷ್ಟಿ, ಕೆಲವೆಡೆ ಅನಾವೃಷ್ಟಿ ಉಂಟಾಗಿದೆ. ಎಲ್ಲ ಕಡೆ ಮಳೆ ಬೆಳೆ ಸರಿಯಾಗಿ ಆಗಲೆಂದು ಜಾತ್ರೆಯಲ್ಲಿ ಸೇರಿದ ನಾವೆಲ್ಲ ಭಕ್ತಿಯಿಂದ ಆ ತಾಯಿಯರಲ್ಲಿ ಬೇಡಿಕೊಳ್ಳೋಣ.
ಗದಗ: ಜಗತ್ತಿನಲ್ಲಿ ಒಂದೇ ಧರ್ಮ ಒಂದೇ ದೇಶದವರು ತಮ್ಮ ತಮ್ಮಲ್ಲೇ ಬಡಿದಾಡಿ ಸಾಯುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ. ಅದಕ್ಕೆ ಕಾರಣ ದೇಶದ ಧರ್ಮ, ಸಂಸ್ಕೃತಿ, ಆಧ್ಯಾತ್ಮಿಕ ಪರಂಪರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಒಕ್ಕಲಗೇರಿ ಓಣಿಯಲ್ಲಿ 18 ವರ್ಷಗಳ ನಂತರ ನಡೆಯುತ್ತಿರುವ ಗ್ರಾಮದೇವಿಯರಾದ ದ್ಯಾಮವ್ವ, ದುರ್ಗಮ್ಮ ದೇವಿಯರ ಹರಿಜಾತ್ರೆ ಮಹೋತ್ಸವದಲ್ಲಿ ಮಾತನಾಡಿದ ಅವರು, 18 ವರ್ಷಗಳ ನಂತರ ದ್ಯಾಮವ್ವ ದುರಗಮ್ಮ ಅವರ ಆಶೀರ್ವಾದ ಪಡೆಯುವ ಅವಕಾಶ ತಂದೆ- ತಾಯಿಯರ ಪುಣ್ಯದ ಫಲವಾಗಿ ನಮ್ಮದಾಗಿದೆ ಎಂದರು.
ಜಾತಿ, ಮತ, ಪಂಥ, ಪಕ್ಷ ಯಾವ ಭಾವನೆ ಇಲ್ಲದೇ ದೇವಿಯರ ಭಕ್ತರಾಗಿ ಇಲ್ಲಿ ಸೇರಿದ್ದು ನಮ್ಮ ಪುಣ್ಯ. ಇಂದು ರಾಜ್ಯದಲ್ಲಿ ಕೆಲವೆಡೆ ಅತಿವೃಷ್ಟಿ, ಕೆಲವೆಡೆ ಅನಾವೃಷ್ಟಿ ಉಂಟಾಗಿದೆ. ಎಲ್ಲ ಕಡೆ ಮಳೆ ಬೆಳೆ ಸರಿಯಾಗಿ ಆಗಲೆಂದು ಜಾತ್ರೆಯಲ್ಲಿ ಸೇರಿದ ನಾವೆಲ್ಲ ಭಕ್ತಿಯಿಂದ ಆ ತಾಯಿಯರಲ್ಲಿ ಬೇಡಿಕೊಳ್ಳೋಣ ಎಂದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಇಂದು ದೇಶದಲ್ಲಿ ಭ್ರಷ್ಟಾಚಾರ, ಅನಾಚಾರ, ದುರಾಚಾರ ಮಿತಿ ಮೀರಿದ್ದು, ದೇವಿ ರಕ್ತಬೀಜಾಸುರನನ್ನು ಸಂಹರಿಸಿದಂತೆ ನಾವು ದುರಾಚಾರಗಳನ್ನು ಮೆಟ್ಟಬೇಕು ಎಂದರು.
ಯುವ ಮುಖಂಡ ಅನಿಲ ಮೆಣಸಿನಕಾಯಿ ಮಾತನಾಡಿ, ಸಮಾನತೆ, ಜಾತ್ಯತೀತತೆ, ಪಕ್ಷಾತೀತವಾಗಿ ನಮ್ಮ ಗ್ರಾಮದೇವಿಯರಾದ ದ್ಯಾಮವ್ವ, ದುರಗಮ್ಮರ ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಯ ಆಚರಣೆಯನ್ನು ನಮ್ಮ ಹಿರಿಯರು ಹೇಗೆ ಭಕ್ತಿಭಾವದಿಂದ ಮಾಡಿದರೆಂದು ನೋಡಿದ ನಮ್ಮ ತಲೆಮಾರಿನವರು ಮುಂಬರುವ ದಿನಗಳಲ್ಲಿ ಬರುವ ಜಾತ್ರೆಗಳಲ್ಲಿ ಅದನ್ನು ಪಾಲಿಸಬೇಕು. ಗದಗ ನಗರದಲ್ಲಿ ನಡೆದ ಜಾತ್ರೆ ಇಂದು ರಾಜ್ಯ ಮಟ್ಟದಲ್ಲಿ ಇತಿಹಾಸ ನಿರ್ಮಿಸಿದೆ ಎಂದರು.
ಅಡ್ನೂರ- ಗದಗ ಮಠದ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಆಧ್ಯಾತ್ಮಿಕ ವಿದ್ಯಾಶ್ರಮದ ಶಿವಶರಣೆ ನೀಲಮ್ಮತಾಯಿ ಅಸುಂಡಿಯವರು ಪ್ರವಚನ ನೀಡಿದರು. ಟ್ರಸ್ಟ್ ಕಮಿಟಿ ಅಧ್ಯಕ್ಷ ಕೊಟ್ರಪ್ಪ ನಿಂಗಪ್ಪ ಕಮತರ ಅಧ್ಯಕ್ಷತೆ ವಹಿಸಿದ್ದರು. ಡಾ. ಎನ್.ಎಸ್. ನಿಂಬಣ್ಣವರ, ಡಾ. ಎಸ್.ಎನ್. ಬಿರಾದಾರ, ಡಾ. ಎಂ.ಡಿ. ಗೋಜನೂರ, ವೀರಣ್ಣ ಮೇಟಿ, ಈಶ್ವರಯ್ಯ ಹಿರೇಮಠ, ಸಿದ್ದಲಿಂಗಪ್ಪ ಎಂ., ಗೋಪಾಲ ಅಗರವಾಲ, ರಾಜು ಖಾನಪ್ಪನವರ, ಈರಣ್ಣ ಕರಬಿಷ್ಠಿ, ನೀಲಪ್ಪ ಅಗರವಾಲ, ನೀಲಪ್ಪ ಕಮತರ, ಸಿದ್ಧಲಿಂಗೇಶ್ವರ ಪಾಟೀಲ, ಸತ್ಯಪ್ಪ ಗಿಡ್ಡಹನಮಣ್ಣವರ, ಸಿದ್ದಣ್ಣ ಮಾರನಬಸರಿ, ಕುಮಾರ ಮಾರನಬಸರಿ, ಉಮೇಶಗೌಡ ಪಾಟೀಲ, ಸದಾಶಿವಯ್ಯ ಮದರಿಮಠ, ಬಸವರಾಜ ಬಿಂಗಿ ಇದ್ದರು. ಬಾಹುಬಲಿ ಜೈನರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.