ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಜಗತ್ತಿನಲ್ಲಿ ಸಜೀವ ಸಂಸ್ಕೃತಿ ಉಳಿಸಿ ಬೆಳೆಸುತ್ತಿರುವ ದೇಶ ಭಾರತ ಮಾತ್ರ ಎಂದು ಕೂಡಲಿ ಶೃಂಗೇರಿ ಶಾರದಾಂಬ ಪೀಠದ ಅಭಿನವ ಶಂಕರ ಭಾರತೀ ಸ್ವಾಮೀಜಿ ಆರ್ಶೀವಚನ ನೀಡಿದರು.ಸಮೀಪದ ಶ್ರೀಕ್ಷೇತ್ರ ಕೂಡಲಿ ಶೃಂಗೇರಿ ಶಾರದಾಂಬ ಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಅಭಿನವ ಶಂಕರ ಭಾರತೀ ಸ್ವಾಮೀಜಿ ಸನ್ಯಾಸ ದೀಕ್ಷೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ ಐತಿಹಾಸಿಕ ಲೆಕ್ಕಾಚಾರದಂತೆ ವೇದಗಳು 12,000 ಸಾವಿರ ವರ್ಷಗಳಿಗಿಂತಲೂ ಪ್ರಾಚೀನ ಎಂಬುದಕ್ಕೆ ದ್ವಾಪರದಿಂದ ಇಂದಿನವರೆಗೂ ಗಾಯತ್ರಿ ಮಂತ್ರದ ಶುದ್ಧತೆ ಹಾಗೂ ಸ್ವರೂಪ ಸೇರಿ ದೈವಿಶಕ್ತಿ ಹಾಗೇ ಇದೆ. ಐತಿಹಾಸಿಕ ಇತಿಹಾಸದಂತೆ 72 ಮತಗಳಿದ್ದವು ಎನ್ನಲಾಗುತ್ತಿದ್ದು ವೇದ ವಿರೋಧಿ ಮತಗಳ ನಿಷ್ಕ್ರಿಯಗೊಳಿಸಿ ವೈದಿಕ ಮತ ಸ್ಥಾಪನೆಯಾಯಿತು. 6 ಮತಗಳಲ್ಲಿ ಪರಸ್ಪರ ವಿದ್ವೇಷಗಳುಂಟಾಗಿ ಸಾಮಾಜಿಕ ಕಲಹಗಳಿಗೆ ಕಾರಣವಾಗಿದ್ದನ್ನು ಸಮನ್ವಯಗೊಳಿಸಿದ ಕೀರ್ತಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಪಂಚಾಯತನ ಪೂಜಾ ಪದ್ಧತಿಯ ಮೂರ್ತಿ ಪೂಜೆ ಸಕಾರೋಪಾಸನೆಯೂ ಹೌದು ನಿರಾಕಾರ ಉಪಾಸನೆಯೂ ಹೌದು. ದೇಶಕ್ಕೆ ಭೇಟಿ ನೀಡಿದ ವಿದೇಶಿ ಜಾಗತಿಕ ಇತಿಹಾಸಕಾರರು ಇವುಗಳಿಗೆ ಯಾಕೆ ಮಹತ್ವ ನೀಡಲಿಲ್ಲವೆಂದು ಯಕ್ಷ ಪ್ರಶ್ನೆಯಾಗಿಯೆ ಉಳಿದಿದೆ. ಭಾರತೀಯರೊಬ್ಬರು ಜಗತಿನ ಇತಿಹಾಸ ಬರೆದರೆ ಮೂಲದ ಮಜಲುಗಳು ವಿಶ್ವಕ್ಕೆ ಗೋಚರಿಸುತ್ತವೆ ಎಂದರು.ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಶ್ರೀಗಳು ಆಶೀರ್ವಚನ ನೀಡಿ ದ್ವಾಪರದಲ್ಲಿ ಗುರುಗಳು ಶಿಷ್ಯನ ತಲೆ ಮೇಲೆ ಕೈ ಇಟ್ಟ ಕೂಡಲೆ ಸಿದ್ದಿಯಾಗುವಂತೆ ಕಲಿಯುಗದಲ್ಲಿ ಪವಾಡಗಳು ನಡೆಯುವುದಿಲ್ಲ. ಹುಟ್ಟು ಹಾಕಿದವರಿಗೆ ರಕ್ಷಣೆ ಮಾಡುವ ರಕ್ಷಣೆ ಮಾಡಿದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗವ ದೈರ್ಯವಿದ್ದರು ಮಾತ್ರ ರಚನೆ ಮಾಡುತ್ತಾರೆ. ಧರ್ಮ ಸೇರಿದಂತೆ ವೇದಗಳಿಗೆ ಅಂತ್ಯ ಎಂಬುದ ಶಥಸಿದ್ಧ. ಜೀವನ ಕಲೆ ಕಲಿಸುವ ವೇದಗಳ ಮಹತ್ವ ಜಗತಿಗೆ ತಿಳಿಯಬೇಕು. ಮನ್ವಂತರಗಳು ಕಳೆದರು ಸನಾತನ ಧರ್ಮಕ್ಕೆ ಸಾವಿಲ್ಲ. ಭಗವಂತ ಶಕ್ತಿ ಹಾಗೂ ಸಂತರ ರೂಪದಲ್ಲಿ ಉದ್ಬವಾಗಿದ್ದಾರೆ. ದೇವರಿದ್ದಾನೆ ಎಂದವರಿಗೆ ಸಂತರ ರೂಪದಲ್ಲಿ ದರ್ಶನ ನೀಡುತ್ತಾರೆ. ಕಲಿಯುಗದ ಮುಂದಿನ ದಿನಗಳು ಅತಿ ಕಠೋರವಾಗಿದರು ಚಿಂತಿಸಬೇಕಾಗಿಲ್ಲ ಎಂದರು.
ಹೆಬ್ಬಳಿ ಚೈತ್ಯನ್ಯಾಶ್ರಮದ ದತ್ತಾವದೂತ ಶ್ರೀಗಳು, ವೇದ ಬ್ರಹ್ಮ ರಾಜೇಶ್ವರ ಶಾಸ್ತ್ರಿ, ಸುದಿಂದ್ರನಾಥ್, ನರೇಂದ್ರ, ರಾಮಕೃಷ್ಣ, ಗಣಪತಿ, ಚಂದ್ರಶೇಖರ ಐಯರ್, ಶಶಿಧರ್ ಕುಲಕರ್ಣಿ ಇತರರಿದ್ದರು.ಭಾರತಿಯ ಸಂಸ್ಕೃತಿ ದಿವ್ಯ ಪರಂಪರೆದೇಶದ ಮೂಲ ಸಂಸ್ಕೃತಿ ಮರೆಯಾಗಬಾರದು. ಆಧ್ಯಾತ್ಮದ ಅರಿವಿನ ಮಹತ್ವ ತಿಳಿಯಲು ದೇವತಾ ಉಪಾಸನೆಯು ಒಂದು ಮಾರ್ಗ. ಇಷ್ಟದೇವತೆ ಉಪಾಸನೆಯಲ್ಲಿ ಬದಲಾವಣೆ ಮಾಡಿಕೊಂಡು ಕುಲ ದೇವರ ಮಧ್ಯ ಮಾಡಿಕೊಂಡು ಪೂಜಾ ಕೈಂಕರ್ಯಗಳ ಕೈ ಗೊಳಬಹುದು. ಪರಂಪರೆಗಳ ನಿರಂತರ ಮುಂದುವರಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ. ಭಾರತಿಯ ಸಂಸ್ಕೃತಿ ದಿವ್ಯ ಪರಂಪರೆಯಲ್ಲಿ ನಾವಿದ್ದೇವೆ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಸನ್ಯಾಸಿಗಳಿಗೆ ಕರ್ಮಗಳ ಮಾಡುವ ಅಗತ್ಯವಿರುವುದಿಲ್ಲ. ಸಮಾಜಕ್ಕೆ ಒಳಿತು ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
ಅಭಿನವ ಶಂಕರ ಭಾರತೀ ಸ್ವಾಮೀಜಿ, ಕೂಡಲಿ ಶೃಂಗೇರಿ ಶಾರದಾಂಬ ಪೀಠ