ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಇಲ್ಲಿನ ಹೊರವಲಯದ ಮಾಚೇನಹಳ್ಳಿ ಡೈರಿ ಸಮೀಪದ ಬಸವ ನೆಲೆ ಮೈದಾನದಲ್ಲಿ ಗುರುವಾರ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಬಸವ ಕೇಂದ್ರದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾಂಸಮಯ ಶರೀರವನ್ನು ಮಂತ್ರಮಯವಾಗಿ ಮಾಡಿಕೊಂಡ ಸಂದರ್ಭ ಇದು. ನಮ್ಮೆಲ್ಲರ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾವೆಲ್ಲರೂ ಧಾರ್ಮಿಕವಾಗಿ ಬದುಕಬೇಕಾಗಿದೆ ಎಂದು ಹೇಳಿದರು.ಡಾ.ಬಸವ ಮರುಳಸಿದ್ದ ಸ್ವಾಮೀಜಿ ಪೀಠಾಧಿಪತಿಗಳಾಗಿ, ಯೋಗ ಯೋಗ ಚಿನ್ಮಯ ಮುದ್ರೆ ಪಡೆದುಕೊಂಡಿದ್ದಾರೆ. ಜವಾಬ್ದಾರಿ ಹೆಚ್ಚುವಂತಹ ಕಾರ್ಯ ಇವತ್ತಿನಿಂದ ಆರಂಭವಾಗಿದೆ. ಯೋಗದ ಮುಖಾಂತರ ಮಠಗಳನ್ನು ಪರಿವರ್ತನೆ ಮಾಡಿ ಹೆಚ್ಚು ಸದ್ಭಕ್ತರಿಗೆ ಸಹಾಯವಾಗಿ, ಆಧ್ಯಾತ್ಮಿಕ ಬದಲಾವಣೆ ಮಾಡಿಕೊಂಡು ಶಕ್ತಿ ನೀಡುತ್ತಿವೆ. ಅವರು ಹಾಕಿಕೊಟ್ಟ ಜಾಗದಲ್ಲಿ ಹೆಜ್ಜೆ ಹಾಕುವುದರ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಚಿನ್ಮಯ ಎಂದರೆ ದೈವೀಕ, ದೀಕ್ಷೆ ಎಂದರೆ ಒಳ್ಳೆಯ ಸನ್ಮಾರ್ಗದಲ್ಲಿ ಹೋಗುವಂತಹದ್ದು, ಪಂಚಭೂತಗಳಿಂದ ಆದಂತಹ ಶರೀರಕ್ಕೆ ಒಂದು ಶಕ್ತಿ ಕೊಡುವ ದೀಕ್ಷೆಯೇ ಚಿನ್ಮಯಾನುಗ್ರಹ ದೀಕ್ಷೆ. ಜಂಗಮ ದೀಕ್ಷೆ ಪಡೆದಿದ್ದ ಡಾ.ಮರುಳಸಿದ್ಧ ಸ್ವಾಮಿಗಳು ಇಂದು ಚಿನ್ಮಯಾನುಗ್ರಹ ದೀಕ್ಷೆ ಪಡೆದುಕೊಂಡಿದ್ದಾರೆ. ಗುರು ಎಂದರೆ ಅದ್ಭುತ ಶಕ್ತಿ, ಪ್ರೀತಿಯ ಆಗರ, ಅಜ್ಞಾನದ ಅಂಧಕಾರವನ್ನು ತೊಲಗಿಸಿ ಸುಜ್ಞಾನದ ಬೆಳಕು ನೀಡುವವರು ಎಂದು ವಿವರಿಸಿದರು.
ಗುರುವಾರ ಬೆಳಗ್ಗೆ 5 ಗಂಟೆಗೆ ವೆಂಕಟೇಶ ನಗರದ ಬಸವ ಕೇಂದ್ರದಲ್ಲಿ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹಲವಾರು ಲಿಂಗ ಹಸ್ತದಿಂದ ಡಾ.ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಚಿನ್ಮಯಾನುಗ್ರಹ ದೀಕ್ಷೆ ಅನುಗ್ರಹಿಸಲಾಯಿತು.
ಶಿವಮೊಗ್ಗ: ನಮ್ಮ ಪೂರ್ವಾಶ್ರಮದ ತಾಯಿಯವರು ನೀಡಿದ ಸಂಸ್ಕಾರದಿಂದ ನಾವಿಂದು ಈ ದೀಕ್ಷೆ ಪಡೆಯಲು ಸಾಧ್ಯವಾಯಿತು ಎಂದು ಚಿನ್ಮಯಾನಂದ ದೀಕ್ಷೆ ಪಡೆದ ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ನನ್ನ ಪೂರ್ವಾಶ್ರಮದ ಮಾತೃಶ್ರೀ ಹಾಗೂ ಗುರುಗಳು ಭಾಗವಹಿಸಿರುವುದು ನಮಗೆ ಅತ್ಯಂತ ಭಾವುಕ ಕ್ಷಣವಾಗಿದೆ. ವಿರಕ್ತ ಮಠದಲ್ಲಿ ತಾಯಿಯ ಸಂಬಂಧ ಕೂಡ ಇರಬಾರದು ಎಂಬ ಕಾರಣಕ್ಕೆ ಇದನ್ನು ಪೂರ್ವಾಶ್ರಮ ಎಂದು ಕರೆಯಲಾಗಿದೆ. ಆ ತಾಯಿ ನಮಗೆ ಎಲ್ಲಾ ರೀತಿಯ ಸಂಸ್ಕಾರಗಳನ್ನುನೀಡಿದ್ದಾರೆ. ಆ ಸಂಸ್ಕಾರವೇ ನಾವು ಈ ಪದವಿ ಪಡೆಯಲು ಸಾಧ್ಯವಾಗಿದೆ. ಇವರ ಜೊತೆಗೆ ಪೂರ್ವಾಶ್ರಮದಲ್ಲಿ ನಮಗೆ ವಿದ್ಯಾಭ್ಯಾಸ ನೀಡಿದ ಇಬ್ಬರು ಗುರುಗಳು ಭಾಗವಹಿಸಿರುವುದು ನಮಗೆ ಸಂತಸ ತಂದಿದೆ. ಗುರುಗಳಿಗೆ ನನ್ನ ಕೃತಜ್ಞತೆಗಳು ಎಂದರು.