ಭಾರತ ಈಗ ಭಯೋತ್ಪಾದನೆ ಮುಕ್ತ ರಾಷ್ಟ್ರ

KannadaprabhaNewsNetwork |  
Published : Apr 25, 2024, 01:04 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಭಾ ಹಾವೇರಿ ಗದಗ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಬಸುರಾಜ ಬೊಮ್ಮಾಯಿ ಅವರು ಮತಯಾಚಿಸಿದರು. ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಭಾ ಹಾವೇರಿ ಗದಗ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಬಸುರಾಜ ಬೊಮ್ಮಾಯಿ, ಕಳಕಪ್ಪ ಬಂಡಿ, ಬಂಡೆಪ್ಪ ಕಾಶಂಪುರ, ದೊಡ್ಡನಗೌಡ ಅವರ ಸಮ್ಮುಖ ಶಿವಕುಮಾರಗೌಡ ಎಸ್ ಪಾಟೀಲ್ ಕಾಂಗ್ರೆಸ್ ಪಕ್ಷ ತೋರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಲೋಕಭಾ ಹಾವೇರಿ ಗದಗ ಮತಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಬಸುರಾಜ ಬೊಮ್ಮಾಯಿ ಅವರು ಮತಯಾಚನೆ ಕಾರ್ಯಕ್ರಮದಲ್ಲಿರುವ ಪಾಲಗೊಂಡಿರುವ ಅಪಾರ ಜನಸ್ಥೋಮ. | Kannada Prabha

ಸಾರಾಂಶ

ರಾಜ್ಯದ ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣದ ರಾಜಕಾರಣಕ್ಕಾಗಿ ಮಾನವೀಯತೆ ಮರೆತಿದೆ

ಡಂಬಳ: ಭಾರತವನ್ನು ಭಯೋತ್ಪಾದನೆ ಮುಕ್ತ ರಾಷ್ಟ್ರ ಮಾಡಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಇಂದು ದೇಶದಲ್ಲಿ ದೀನದಲಿತರು, ಅಲ್ಪಸಂಖ್ಯಾತರು ಇನ್ನೂ ಬಡತನ ರೇಖೆಗಿಂತ ಕೆಳಗೆ ಇರಲು ಕಾಂಗ್ರೆಸ್‌ ಪಕ್ಷವೇ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಗದಗ-ಹಾವೇರಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಂಬಳ ಗ್ರಾಮದ ತೋಂಟದಾರ್ಯ ಕಲ್ಯಾಣ ಮಂಟಪದ ಆವರಣದಲ್ಲಿ ಮತಯಾಚಿಸಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ. ಹಾವೇರಿಯ ಅಲ್ಪಸಂಖ್ಯಾತ ಮಹಿಳೆಯ ಮೇಲೆ 6 ಜನ ಅತ್ಯಾಚಾರ ನಡೆದಿದೆ. ಹುಬ್ಬಳ್ಳಿಯಲ್ಲಿ ಹಾಡಹಗಲೇ ನೇಹಾ ಹಿರೇಮಠ ಎಂಬ ಯುವತಿಯ ಕೊಲೆ ಆಗಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ತುಷ್ಟೀಕರಣದ ರಾಜಕಾರಣಕ್ಕಾಗಿ ಮಾನವೀಯತೆ ಮರೆತಿದೆ ಎಂದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಲೋಕಸಭೆ ದೇಶದ ಭವಿಷ್ಯದ ಚುನಾವಣೆಯಾಗಿದೆ.ದೇಶ ಕಾಪಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾತ್ರ ಇದ್ದು, ಪ್ರಧಾನಿ ನರೇಂದ್ರ ಮೋದಿಯವರ 10 ವರ್ಷದ ಆಡಳಿತದಲ್ಲಿ ಅತ್ಯಂತ ಸುರಕ್ಷಿತ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದರು.

ಈ ವೇಳೆ ಧಾರವಾಡ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಎಸ್ ಪಾಟೀಲ್ ಹಾಗೂ ವಿವಿಧ ಗ್ರಾಮಗಳ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.

ಶಾಸಕ ದೊಡ್ಡನಗೌಡ್ರ ಪಾಟೀಲ್, ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶಂಪೂರ, ಕರಿಬಸಪ್ಪ ಹಂಚನಾಳ, ಎಂ.ಎಸ್. ಕರಿಗೌಡರ, ಬೀರಪ್ಪ ಬಂಡಿ, ರವಿ ಕರಿಗಾರ, ರವಿ ದಂಡಿನ, ಬಸವರಾಜ ಸಂಗನಾಳ, ಅಂದಪ್ಪ ಹಾರೂಗೇರಿ, ವೆಂಕಟೇಶ ಕುಲಕರ್ಣಿ, ಡಿ.ಪ್ರಸಾದ, ಶಿವಪ್ಪ ಅಂಕದ, ನಾಗರಾಜ ಕಾಟರಳ್ಳಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಬಸವರಾಜ ಚನ್ನಳ್ಳಿ, ಮಲ್ಲನಗೌಡ ಪಾಟೀಲ್, ಕೆ.ಡಿ.ಬಂಡಿ, ಪ್ರಕಾಶ ಕೋತಂಬ್ರಿ, ವೆಂಕನಗೌಡ ಪಾಟೀಲ್, ನಿಂಗಪ್ಪ ಮಾದರ, ಗಂಗಾದರ ಹಳ್ಳಿತಳವಾರ, ಸೋಮಶೇಖರಯ್ಯ ಹಿರೇಮಠ, ಪಂಚಾಕ್ಷರಯ್ಯ ಹರ್ಲಾಪುರಮಠ, ಲಕ್ಷ್ಮಣ ಬೂದಿಹಾಳ ಸೇರಿದಂತೆ ಹಲವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ