ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಮೂಲಕ ಗುಣಾತ್ಮಕ ಪ್ರತಿನಿಧಿ ಆಯ್ಕೆ ಆಗಬೇಕೆಂದು ಸ್ವೀಪ್ ಸಮಿತಿ ನಿರಂತರ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಬಾನಂಗಳಲ್ಲಿ ಮತದಾನ ಜಾಗೃತಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಬಲೂನ್ ಹಾರಿಸಿದರು.
ಕಡ್ಡಾಯವಾಗಿ ಮತದಾನ ಮಾಡಿ, 2024ರ ಮೇ 7ರಂದು ಮಂಗಳವಾರ ಎಂಬ ಘೋಷದಡಿ ಬಲೂನ್ ಹಾರಿಬಿಡಲಾಯಿತು. ಈ ಬಲೂನ್ 100 ಅಡಿ ಎತ್ತರದಲ್ಲಿ ಹಾರಾಡುವ ಮೂಲಕ ದಾವಣಗೆರೆ ನಾಗರಿಕರು ಸೇರಿದಂತೆ ಸಾರ್ವಜನಿಕರಿಗೆ ಪ್ರದರ್ಶನ ಆಗುವಂತೆ ಅನಾವರಣಗೊಳಿಸಿ, ಚುನಾವಣಾ ಜಾಗೃತಿ ಮೂಡಿಸಲಾಗುತ್ತಿದೆ.
ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ, ಆರೋಗ್ಯ ಇಲಾಖೆ ಕಾರ್ಯಕ್ರಮ ಅಧಿಕಾರಿಗಳಾದ ಡಾ. ಗಂಗಾಧರ್, ಡಾ.ರೇಣುಕಾರಾಧ್ಯ, ಡಾ.ಮಂಜುನಾಥ ಪಾಟೀಲ್, ಸುರೇಶ್ ಬಾರ್ಕಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.- - - -24ಕೆಡಿವಿಜಿ46ಃ:
ದಾವಣಗೆರೆಯಲ್ಲಿ ಮತದಾನ ಜಾಗೃತಿಗಾಗಿ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಬಾನಂಗಳದಲ್ಲಿ ಹೀಲಿಯಂ ಬಲೂನ್ ಹಾರಿಸಿದರು.