ಸಮರ್ಪಕ ಕುಡಿವ ನೀರು ಸರಬರಾಜಿಗೆ ಆಗ್ರಹ

KannadaprabhaNewsNetwork |  
Published : Apr 25, 2024, 01:04 AM IST
ಫೋಟೋ 24 ಎಚ್,ಎನ್,ಎಮ್, 01   ಹನುಮಸಾಗರ ಸಮೀಪದ ಕೊಡತಗೇರಿ ಗ್ರಾಮಸ್ಥರು ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಬಿಳೇಕಲ್ಲ ಗ್ರಾಪಂಗೆ ಮಂಗಳವಾರ ಮುತ್ತಿಗೆ ಹಾಕಿದರು. | Kannada Prabha

ಸಾರಾಂಶ

ಜೆಜೆಎಂನಡಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಸಮೀಪದ ಕೊಡತಗೇರಿ ಗ್ರಾಮದ ನಿವಾಸಿಗಳು ಬಿಳೇಕಲ್ಲ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದರು.

ಬಿಳೇಕಲ್ಲ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ ಕೊಡತಗೇರಿ ಗ್ರಾಮದ ನಿವಾಸಿಗಳು

ಕನ್ನಡಪ್ರಭ ವಾರ್ತೆ ಹನುಮಸಾಗರ

ಜೆಜೆಎಂನಡಿ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಸಮೀಪದ ಕೊಡತಗೇರಿ ಗ್ರಾಮದ ನಿವಾಸಿಗಳು ಬಿಳೇಕಲ್ಲ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದರು.

ಕಳೆದ ಆರು ತಿಂಗಳಿಂದ ನಮ್ಮ ಗ್ರಾಮಕ್ಕೆ ಜೆಜೆಎಂ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಕೊಡತಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜೆಜೆಎಂ ನೀರಿನ ಪೈಪ್‌ಲೈನ್ ರಂಗಾಪುರ ಗ್ರಾಮದಲ್ಲಿ ಪದೇ ಪದೇ ದುರಸ್ತಿಯಾಗುತ್ತಿದೆ. ಖಾಸಗಿ ವ್ಯಕ್ತಿಯೊಬ್ಬರು ಇಲ್ಲಿ ತಮ್ಮ ಜಮೀನಿಗೆ ಈ ನೀರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲಿ ನೀರು ಜಮೀನಿಗೆ ಬಳಕೆಯಾಗುತ್ತಿದ್ದರಿಂದ ನಮ್ಮ ಗ್ರಾಮಕ್ಕೆ ಸರಿಯಾಗಿ ಸರಬರಾಜು ಆಗುತ್ತಿಲ್ಲ. ತಮ್ಮ ಬೆಳೆಗಳಿಗೆ ನೀರು ಬಿಟ್ಟುಕೊಳ್ಳಲು ಆ ಜಮೀನಿನ ಮಾಲೀಕರು ಪೈಪ್‌ಲೈನ್ ದುರಸ್ತಿ ಮಾಡುತ್ತಿರಬಹುದೆಂದು ನಮಗೆ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಜಿಪಂ ಸಿಇಒ, ತಾಪಂ ಇಒ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಇಂದು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ್ದು, ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.ಈ ವೇಳೆ ಗ್ರಾಮಸ್ಥರಾದ ಗಂಗಪ್ಪ ನೆಲ್ಲೂರ, ಶರಣಪ್ಪ ಆಡಿನ, ಶರಣಪ್ಪ ದ್ಯಾಮಣ್ಣವರ, ದೇವೇಂದ್ರಪ್ಪ ಉಣಚಗೇರಿ, ಬರಮ್ಮಲಿಂಗಪ್ಪ ದ್ಯಾಮಣ್ಣವರ, ಮಲ್ಲಪ್ಪ ಗೌಡ್ರ, ನೀಲಪ್ಪ ಹಟ್ಟಿ, ಮಂಜುನಾಥ ಮುಶಿಗೇರಿ, ಶರಣಪ್ಪ ದ್ಯಾಮಣ್ಣವರ, ಕಲ್ಲಪ್ಪ ಪೂಜಾರ, ಪರಸಪ್ಪ ಪಿಳಬಂಟರ, ಶಿವಲೀಲಾ ಹಿರೇಮಠ, ಮುತ್ತವ್ವ ನೆಲ್ಲೂರ, ಬಸಮ್ಮ ಕುರಟ್ಟಿ, ಮುತ್ತವ್ವ ಪಿಳಬಂಟರ, ಹನಮವ್ವ ಕುರಟ್ಟಿ, ಶಾಂತವ್ವ ಪೋಲೆಷಿ, ಶಿವಬಸಮ್ಮ ಹಿರೇಮಠ, ಮಂಜುನಾಥ ದ್ಯಾಮಣ್ಣವರ, ನಿಂಗರಾಜ್ ಅಣ್ಣಿಗೇರಿ ಇತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌