ಪುಣ್ಯ ಪುರುಷರು ಜನ್ಮವೆತ್ತಿದ ಪವಿತ್ರ ಭೂಮಿ ಭಾರತ: ಪ್ರೊ.ಎ.ವಿ.ಸೂರ್ಯನಾರಾಯಣಸ್ವಾಮಿ

KannadaprabhaNewsNetwork |  
Published : Nov 21, 2026, 01:15 AM IST
ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ ಆವರಣದಲ್ಲಿ ಸಾಹಿತ್ಯಾತ್ಮಕ ಮತ್ತು ಚಿಂತನೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆಜಗತ್ತಿಗೆ ವೈಚಾರಿಕ ನೆಲಗಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ಜಗಜ್ಯೋತಿ ಬಸವೇಶ್ವರರು, ಶಿವಶರಣೆ ಅಕ್ಕ ನಾಗಲಾಂಬಿಕೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಡಾ. ಅಂಬೇಡ್ಕರ್ ಮುಂತಾದ ಪುಣ್ಯ ಪುರುಷರು ಜನ್ಮವೆತ್ತಿದ ಪವಿತ್ರ ಭೂಮಿ ಭಾರತ ಎಂದು ಮೈಸೂರು ಶ್ರೀ ಶಾರದ ವಿಲಾಸ ಕಾಲೇಜು ವಿಶ್ರಾಂತ ಪ್ರೊ.ಕನ್ನಡ ಉಪನ್ಯಾಸಕ, ಸಾಹಿತಿ ಎ.ವಿ.ಸೂರ್ಯನಾರಾಯಣಸ್ವಾಮಿ ಹೇಳಿದ್ದಾರೆ.

ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ ಆವರಣದಲ್ಲಿ ಸಾಹಿತ್ಯಾತ್ಮಕ ಮತ್ತು ಚಿಂತನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತರೀಕೆರೆ

ಜಗತ್ತಿಗೆ ವೈಚಾರಿಕ ನೆಲಗಟ್ಟಿನಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ಜಗಜ್ಯೋತಿ ಬಸವೇಶ್ವರರು, ಶಿವಶರಣೆ ಅಕ್ಕ ನಾಗಲಾಂಬಿಕೆ, ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದ, ಡಾ. ಅಂಬೇಡ್ಕರ್ ಮುಂತಾದ ಪುಣ್ಯ ಪುರುಷರು ಜನ್ಮವೆತ್ತಿದ ಪವಿತ್ರ ಭೂಮಿ ಭಾರತ ಎಂದು ಮೈಸೂರು ಶ್ರೀ ಶಾರದ ವಿಲಾಸ ಕಾಲೇಜು ವಿಶ್ರಾಂತ ಪ್ರೊ.ಕನ್ನಡ ಉಪನ್ಯಾಸಕ, ಸಾಹಿತಿ ಎ.ವಿ.ಸೂರ್ಯನಾರಾಯಣಸ್ವಾಮಿ ಹೇಳಿದ್ದಾರೆ.

ಶುಕ್ರವಾರ ಪಟ್ಟಣದ ಐತಿಹಾಸಿಕ ಪುಣ್ಯಸ್ಥಳ ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ ಆವರಣದಲ್ಲಿ ನಡೆದ ಸಾಹಿತ್ಯಾತ್ಮಕ ಮತ್ತು ಚಿಂತನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಸಾಹಿತ್ಯಕ್ಕೆ 2500 ವರ್ಷಗಳ ಸುದೀರ್ಘ ಇತಿಹಾಸವಿದೆ, ನಾಡಿನ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಸಾರಿ ತಿಳಿಸಿದ ಅನೇಕ ಮಹನೀಯರ ಕೊಡುಗೆ ಆಪಾರವಾಗಿದ್ದು ಶ್ರೇಷ್ಠತಮವಾಗಿದೆ, 12ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿಯ

ನಂತರ ಶರಣ ಸಾಹಿತ್ಯದೊಂದಿಗೆ ಶಿವಶರಣೆ ಅಕ್ಕನಾಗಲಾಂಬಿಕೆ ತರೀಕೆರೆಯಲ್ಲಿ ನೆಲಸಿ ಅಮೂಲ್ಯ ಸಾಹಿತ್ಯವನ್ನು ನಾಡಿಗೆ ತಲುಪಿಸಿ ಐಕ್ಯರಾದ ಪುಣ್ಯಸ್ಥಳವಾಗಿದೆ ಎಂದು ಅವರು ಹೇಳಿದರು.

ಶಿವಶರಣೆ ಅಕ್ಕನಾಗಲಾಂಬಿಕೆ ಗದ್ದುಗೆ ಆವರಣವು ಪುಣ್ಯ ಕ್ಷೇತ್ರವಾಗಿದ್ದು ಗದ್ದುಗೆ ದರ್ಶನ ಮತ್ತು ಇಲ್ಲಿ ನೆಡೆಯುತ್ತಿರುವ ಸಾಹಿತ್ಯಾತ್ಮಕ ಮತ್ತು ಚಿಂತನೆ ಕಾರ್ಯಕ್ರಮ ತಮಗೆ ಅತ್ಯಂತ ಸಂತೋಷವನ್ನು ತಂದಿದೆ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಅವರು ಮಾತನಾಡಿ ಮೈಸೂರು ಶಾರದ ವಿಲಾಸ್ ಕಾಲೇಜು ವಿಶ್ರಾಂತ ಉಪನ್ಯಾಸಕ ಪ್ರೊ.ಎ.ವಿ.ಸೂರ್ಯನಾರಾಯಣಸ್ವಾಮಿ ಅವರು ನಮ್ಮ ಊರಿನವರಾಗಿದ್ದು, ಕನ್ನಡ ಸಾರಸ್ವತ ಲೋಕದಲ್ಲಿ ಅಪಾರವಾದ ಸೇವೆ ಸಲ್ಲಿಸುತ್ತಾ, ವೈಚಾರಿಕ ನೆಲೆಗಟ್ಟಿನ ಲೇಖಕರಾಗಿದ್ದು, ಭಾಷಣ, ಲೇಖನ, ಕನ್ನಡ ನುಡಿ ಸೇವೆ, ಚಂತನ ಮಂಥನ, ಕನ್ನಡ ಸಾಹಿತ್ಯ ಲೋಕದ ಸಮಗ್ರ ಸಾಹಿತ್ಯ ಬಂಢಾರವನ್ನು ಒಳಗೊಂಡ ಕೃತಿ ಗೆಜ್ಜೆನಾದ ಎರಡು ಸಂಪುಟದಲ್ಲಿ ಪ್ರಕಾಶನಗೊಂಡು ವೈವಿದ್ಯಮಯವಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದೆ ಎಂದುಅವರು ಹೇಳಿದರು.

ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಸಾಹಿತಿ ಮನಸುಳಿ ಮೋಹನ್, ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಟಿ.ದಾದಾಪೀರ್, ಮನಸು ಪ್ರತಿಷ್ಟಾನ ಅಧ್ಯಕ್ಷರು ಟಿ.ಆರ್.ಶ್ರೀಧರ್, ಪುರಸಭೆ ಮಾಜಿ ಸದಸ್ಯರು ಮಿಲ್ಟ್ರಿ ಶ್ರೀನಿವಾಸ್, ಟಿ.ಆರ್.ಮಂಜುನಾಥ್, ಉಮಾಪ್ರಕಾಶ್, ಶಾರದ ಅಶೋಕ್ ಕುಮಾರ್, ಲತಾ ಗೋಪಾಲಕೃಷ್ಣ, ಹರ್ಷಿಣಿ ಕುಮಾರ್, ಸುನಿತಾ ಕಿರಣ್, ಗಾಯಿತ್ರಿ ರವಿ, ಲಕ್ಷ್ಮಿ ಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

-------------

ಫೋಟೋ ಇದೆ

20ಕೆಟಿಆರ್.ಕೆ.3ಃ ತರೀಕೆರೆಯಲ್ಲಿ ನೆಡೆದ ಸಾಹಿತ್ಯಾತ್ಮಕ ಮತ್ತು ಚಿಂತನೆ ಕಾರ್ಯಕ್ರಮದಲ್ಲಿ ಪ್ರೊ.ಎ.ವಿ.ಸೂರ್ಯನಾರಾಯಣಸ್ವಾಮಿ ಮತ್ತಿತರರು

ಭಾಗವಹಿಸಿದ್ದರು.

--------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಹೆದ್ದಾರಿ ದುರಸ್ತಿಗಾಗಿ ರಸ್ತೆತಡೆ
ಅನುದಾನಿತ ಶಾಲಾ ನೌಕರರಿಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ