ಗಜೇಂದ್ರಗಡ: ಅಸಂಖ್ಯಾತ ದೇಶಪ್ರೇಮಿಗಳ ಹಾಗೂ ಸಾಕಷ್ಟು ಮಹನಿಯರ ಬಲಿದಾನದಿಂದ ದೇಶದಲ್ಲಿಂದು ಸಂಭ್ರಮದಿಂದ ಸರ್ವರ ಹಬ್ಬವಾಗಿರುವ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸುತ್ತಿದ್ದು, ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ವಿಶ್ವದಲ್ಲಿ ಬಲಿಷ್ಠ ಹಾಗೂ ಸಶಕ್ತ ದೇಶವಾಗಿರುವ ಭಾರತದಲ್ಲಿ ಸರ್ವರೂ ಸಮಾನರು. ಸರ್ಕಾರದ ಪ್ರತಿ ಯೋಜನೆಯ ಲಾಭವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು ಅಧಿಕಾರಿ ವರ್ಗದ ಕರ್ತವ್ಯವಾಗಿದೆ. ದೇಶದ ನೈಜ ಪ್ರಗತಿ ಇರುವುದು ನಮ್ಮ ಒಗ್ಗಟ್ಟಿನಲ್ಲಿ. ನಾವೆಲ್ಲರೂ ಜಾತಿ, ಮತ ಎಂಬ ಭೇದಭಾವವನ್ನು ಮರೆತು ಒಂದಾಗಿ ಬಾಳಿದಾಗ ಮಾತ್ರ ಈ ಸ್ವಾತಂತ್ರ‍್ಯಕ್ಕೆ ನಿಜವಾದ ಅರ್ಥ ಸಿಗುತ್ತದೆ ಎಂದರು.
ಮುಖಂಡ ಎಚ್.ಎಸ್. ಸೋಂಪುರ ಮಾತನಾಡಿದರು. ಉಪನೋಂದಣಾಧಿಕಾರಿ ವಿರೂಪಾಕ್ಷಯ್ಯ ಚೌಕಿಮಠ, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ನರೇಗಲ್ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ, ಶಿರಸ್ತೇದಾರ ಸೇವಾಲಾಲ್ ನಾಯಕ, ಪುರಸಭೆ ಮಾಜಿ ಉಪಧ್ಯಕ್ಷೆ ಸವಿತಾ ಬಿದರಳ್ಳಿ, ಪುರಸಭೆ ಮಾಜಿ ಸದಸ್ಯರಾದ ಶಿವರಾಜ ಘೋರ್ಪಡೆ, ರಾಜು ಸಾಂಗ್ಲೀಕರ, ಮುಖಂಡರಾದ ಶ್ರೀಧರ ಬಿದರಳ್ಳಿ, ಶ್ರೀಧರ ಗಂಜಿಗೌಡರ, ಪ್ರಾಚಾರ್ಯರಾದ ಜಿ.ಬಿ. ಗುಡಿಮನಿ, ರಮೇಶ ಮರಾಠಿ, ಗಣೇಶ ಕೊಡಕೇರಿ, ಉಮೇಶ ಅರಳಿಗಿಡದ, ಹರೀಶ ಗೌರಿ, ಮಾರುತಿ ಅವಧೂತ, ಕಳಕಪ್ಪ ಸ್ವಾಮಿ ಸೇರಿ ವಿವಿಧ ಶಾಲೆ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಮುಖಂಡರು ಸೇರಿ ಸಿಬ್ಬಂದಿ ಇದ್ದರು.ತಾಪಂ ಕಚೇರಿಯಲ್ಲಿ ೮೦ನೇ ಸ್ವಾತಂತ್ರ್ಯ ದಿನಾಚರಣೆಗಜೇಂದ್ರಗಡ: ಸ್ವಾತಂತ್ರ್ಯ ಸಿಕ್ಕ ಮೇಲೆ ನಮ್ಮ ದೇಶವು ಹಲವು ರಂಗಗಳಲ್ಲಿ ಜಗತ್ತೇ ಬೆರಗಾಗುವಂತಹ ಸಾಧನೆ ಮಾಡಿದೆ ಎಂದು ತಾಪಂ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಹೇಳಿದರು.
ತಾಪಂ ಲೆಕ್ಕಾಧಿಕಾರಿ ಡಾ. ಸಿ.ಬಿ. ಮಾಳಗಿ ಮಾತನಾಡಿದರು. ಮಲ್ಲಿಕಾರ್ಜುನ ಸೊಬಗಿನ, ಮಂಜುನಾಥ ಭಜಂತ್ರಿ, ತನವೀರ ದೊಡ್ಡಮನಿ, ವಸಂತ ಅನ್ವರಿ, ಮಂಜುನಾಥ ಹಳ್ಳದ, ಹರೀಶ ಬಂಡಗಾರ, ಬಸವರಾಜ ಇಟಗಿ, ಮಲ್ಲಿಕಾರ್ಜಿನ ಸರಗಣಾಚಾರಿಮಠ, ಮುರುಗೇಶ ಕಲ್ಮಂಗಿಮಠ, ಚನ್ನಮೋಹನ ಪಮ್ಮಾರ, ಬೀರೇಶ ಡಂಬಳ, ಮಧುಮತಿ, ಗೀತಾ, ರವಿ ಹೊಂಬಳ, ಚಂದ್ರಕಾಂತ ಲಮಾಣಿ ಸೇರಿ ಇತರರು ಇದ್ದರುವಿವಿಧೆಡೆ ಆಚರಣೆ: ಪಟ್ಟಣದ ಕೆಎಸ್ಎಸ್ ಕಾಲೇಜು, ಸರ್ಕಾರಿ ಪದವಿ ಕಾಲೇಜು, ಕರ್ನಾಟಕ ಪಬ್ಲಿಕ್ ಶಾಲೆ, ಪೊಲೀಸ್ ಠಾಣೆ, ತಹಸೀಲ್ದಾರ್ ಕಾರ್ಯಾಲಯ, ಪುರಸಭೆ ಕಾರ್ಯಾಲಯ, ಪ್ರಿಯದರ್ಶಿನಿ ವಿವಿಧೋದ್ದೇಶಗಳ ಸಹಕಾರಿ ಸಂಘ, ಕಾಲಕಾಲೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಸೇರಿ ವಿವಿಧೆಡೆ ಸಂಭ್ರಮದಿಂದ ೮೦ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಿಸಲಾಯಿತು.