ಭಾರತಕ್ಕೆ ಆರ್‌ಎಸ್‌ಎಸ್‌ಗಿಂತ ಕಾಂಗ್ರೆಸ್ ಸೇವಾದಳ ಅವಶ್ಯಕ: ದಿನೇಶ್ ಶೆಟ್ಟಿ

KannadaprabhaNewsNetwork |  
Published : Feb 24, 2025, 12:30 AM IST
ಕ್ಯಾಪ್ಷನ23ಕೆಡಿವಿಜಿ37 ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿನೇಶ ಕೆ.ಶೆಟ್ಟಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು. | Kannada Prabha

ಸಾರಾಂಶ

ಜಾತ್ಯತೀತ ಭಾರತ ದೇಶದಲ್ಲಿ ಜಾತಿ-ಧರ್ಮಗಳ ಮಧ್ಯ ವೈರುಧ್ಯ ಬೆಳೆಸುವ ಆರ್‌ಎಸ್‌ಎಸ್‌ನಂತಹ ಸಂಘಟನೆಗಳಿಗಿಂತ ಪ್ರತಿಯೊಂದು ಜಾತಿ- ಧರ್ಮದವರನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷದ ಸೇವಾದಳದಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದು ದೂಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದ್ದಾರೆ.

- ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಧ್ವಜವಂದನೆ ಕಾರ್ಯಕ್ರಮ - - - ದಾವಣಗೆರೆ: ಜಾತ್ಯತೀತ ಭಾರತ ದೇಶದಲ್ಲಿ ಜಾತಿ-ಧರ್ಮಗಳ ಮಧ್ಯ ವೈರುಧ್ಯ ಬೆಳೆಸುವ ಆರ್‌ಎಸ್‌ಎಸ್‌ನಂತಹ ಸಂಘಟನೆಗಳಿಗಿಂತ ಪ್ರತಿಯೊಂದು ಜಾತಿ- ಧರ್ಮದವರನ್ನು ಸಮನಾಗಿ ಕಾಣುವ ಕಾಂಗ್ರೆಸ್ ಪಕ್ಷದ ಸೇವಾದಳದಂತಹ ಸಂಘಟನೆಗಳ ಅವಶ್ಯಕತೆ ಇದೆ ಎಂದು ದೂಡಾ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಧ್ವಜವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಎಲ್ಲ ಜಾತಿ ಧರ್ಮಗಳನ್ನು ಒಳಗೊಂಡ ದೇಶವಾಗಿದೆ. ಪ್ರತಿಯೊಬ್ಬರು ಸಾಮರಸ್ಯದ ಜೀವನ ಸಾಗಿಸುತ್ತಿದ್ದಾರೆ. ಧರ್ಮಗಳ, ಜಾತಿ ಜಾತಿಗಳ ನಡುವೆ ವೈರತ್ವ ತರುವ ಸಂಘಟನೆಗಳ ಬಗ್ಗೆ ಇಂದಿನ ಯುವ ಜನರು ಎಚ್ಚರಿಕೆ ಹೊಂದಬೇಕು. ಸಾಮರಸ್ಯ ಬಯಸುವ ಕಾಂಗ್ರೆಸ್ ಪಕ್ಷದ ಸೇವಾದಳವನ್ನು ಸೇರುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಡಿ.ಶಿವಕುಮಾರ್ ಮಾತನಾಡಿ, ಇಂದು ಎಐಸಿಸಿ ಕಾಂಗ್ರೆಸ್ ಸೇವಾದಳದ ರಾಷ್ಟ್ರಾಧ್ಯಕ್ಷ ಲಾಲ್‌ಜಿ ದೇಸಾಯಿ ಆದೇಶದ ಮೇರೆಗೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ರಾಜ್ಯ ಅಧ್ಯಕ್ಷ ಎಂ.ರಾಮಚಂದ್ರಪ್ಪ ಸೂಚನೆ ಮೇರೆಗೆ ಧ್ವಜವಂದನ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.

ರಾಜ್ಯ ಉಪಾಧ್ಯಕ್ಷ ಉಮಾ ತೋಟಪ್ಪ, ರಾಜ್ಯ ಕಾರ್ಯದರ್ಶಿ ಪ್ರವೀಣ್, ದಾವಣಗೆರೆ ಉತ್ತರ ವಲಯ ಅಧ್ಯಕ್ಷ ಆವರಗೆರೆ ಚಂದ್ರಪ್ಪ, ಹರಿಹರ ಬ್ಲಾಕ್ ಅಧ್ಯಕ್ಷ ಪ್ರಕಾಶ್, ಬೇತೂರು ನಾಗೇಂದ್ರಪ್ಪ, ಬಿ.ಜಿ. ಅಶೋಕ್, ಹನುಮಮ್ಮ, ನಾಗರತ್ನ, ಕೃಷ್ಣಮ್ಮ, ಮಮ್ತಾಜ್, ರತ್ನಮ್ಮ, ರೇಣುಕಮ್ಮ, ಅಕ್ಕಮ್ಮ, ನಾಗರತ್ನಮ್ಮ ಉಪಸ್ಥಿತರಿದ್ದರು.

- - - -23ಕೆಡಿವಿಜಿ37:

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ದಿನೇಶ ಕೆ. ಶೆಟ್ಟಿ ಧ್ವಜವಂದನೆ ಕಾರ್ಯಕ್ರಮ ನಡೆಯಿತು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ