12 ಕೋಟಿ ಜನ ತಲುಪಿದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್: ರಮೇಶ

KannadaprabhaNewsNetwork |  
Published : Sep 04, 2025, 01:01 AM IST
ಗದಗ ಪ್ರಧಾನ ಅಂಚೇ ಕಚೇರಿಯಲ್ಲಿ ಇಂಡಿಯಾ ಪೊಸ್ಟ್ ಮೆಂಟ್ ಬ್ಯಾಂಕ್ (ಐಪಿಪಿಬಿ ) 8ನೇ ವರ್ಷದ ವಾರ್ಷಿಕೋತ್ಸವ ನಡೆಯಿತು. | Kannada Prabha

ಸಾರಾಂಶ

ಗದಗ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) 8ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

ಗದಗ: ದೇಶದ ಎಲ್ಲೆಡೆ ವಿಶ್ವಾಸಾರ್ಹ ಜತೆಗೆ ಪ್ರತಿಯೊಬ್ಬರಿಗೂ ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ ಕ್ಷೇತ್ರದಲ್ಲಿ ಹೊಸ ಭಾಷೆ ಐಪಿಪಿಬಿ (ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್) ದಾಪುಗಾಲು ಇರಿಸಿದೆ ಎಂದು ಅಂಚೆ ಅಧೀಕ್ಷಕ ರಮೇಶ ಮಡಿವಾಳರ ಹೇಳಿದರು.ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಭಾರತೀಯ ಅಂಚೆ ಇಲಾಖೆಯ ಆಶ್ರಯದಲ್ಲಿ ನಡೆದ (ಐಪಿಪಿಬಿ) ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ 8ನೇ ವರ್ಷದ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ‌‌ರು. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಅಂಚೆ ಇಲಾಖೆ ಸೇವೆ ತಲುಪಿಸುವ ಸದಾವಕಾಶ ಲಭಿಸಿದೆ. ಕೇವಲ 7 ವರ್ಷದಲ್ಲಿ ದೇಶದ 12 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದ್ದು, 7 ವರ್ಷದಲ್ಲಿ ದೇಶದ ಮುಂಚೂಣಿ ಬ್ಯಾಂಕ್‌ಗಳು ಮಾಡದೇ ಇರುವ ಕೆಲಸವನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಇದರಿಂದಾಗಿ ಐಪಿಪಿಬಿ 155 ಲಕ್ಷ ಕೌಂಟರ್ ಸೇವೆ ಜತೆಗೆ ಡಿಜಿಟಲ್ ಮತ್ತು ಕ್ಯಾಶ್‌ಲೆಸ್‌ ವ್ಯವಹಾರ ನೀಡಿದ ಸಾಧನೆ‌ ತೋರಲು ಸಾಧ್ಯವಾಗಿದೆ. ಹೀಗಾಗಿ ಜಗತ್ತಿನ ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಜಪಾನ ಚೀನಾ ದೇಶ ನಮ್ಮ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದರು.ಸಹಾಯಕ ಅಂಚೆ ಅಧೀಕ್ಷಕ ಶ್ರೀಕಾಂತ ಜಾಧವ ಮಾತನಾಡಿ, ಕೇಂದ್ರ ಸರ್ಕಾರ ಅಂಚೆ ಇಲಾಖೆಯ ಮೂಲಕ ವಿವಿಧ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಅಂಚೆ ಇಲಾಖೆಯು ಅಪಘಾತ ವಿಮೆ, ಆರೋಗ್ಯ ವಿಮೆ ಮತ್ತು ಮಕ್ಕಳ ವಿಮಾ ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಗಳು ಕಡಿಮೆ ಪ್ರೀಮಿಯಂ ದರಗಳಲ್ಲಿ ಸಾಕಷ್ಟು ಉಪಯುಕ್ತವಾಗಿವೆ. ಅವುಗಳನ್ನು ಗ್ರಾಹಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಪ್ರಧಾನ‌ ಅಂಚೆ ಪಾಲಕ ದೊಡ್ಡಪ್ಪ ಇಟಗಿ ಹಾಗೂ ಐಪಿಪಿಬಿ ಗದಗ ವಿಭಾಗದ ವ್ಯವಸ್ಥಾಪಕ ಆನಂದ ಸಾಗರ ಮಾತನಾಡಿದರು.ಸಹಾಯಕ ಅಂಚೆ ಅಧೀಕ್ಷಕ ವಿ. ಸುನೀಲಕುಮಾರ, ಡಿ.ಜಿ. ಮ್ಯಾಗೇರಿ, ಶರಣಪ್ಪ ನಾಯ್ಕರ, ನಿಂಗಪ್ಪ‌ ಹೂಗಾರ, ಶರಣಯ್ಯ ಹಿರೇಮಠ, ಸಿದ್ದಲಿಂಗೇಶ ಯಂಡಿಗೇರಿ, ವೆಂಕಟೇಶ ಆಕಳವಾಡಿ, ವೀರಣ್ಣ‌ ಅಂಗಡಿ, ರವಿ ಜಾಧವ, ಮಂಜುಳಾ ಕಡಿಯವರ, ವೆಂಕಪ್ಪ‌ ಗುಗ್ಗರಿ, ವಾಣಿ ಮಾಂಡ್ರೆ, ಸರೋಜಾ ಪಟ್ಟಣಶೆಟ್ಟಿ, ನೀಲಮ್ಮ ದಿಬ್ಬದಮನಿ, ವಿದ್ಯಾ ಗದಗ, ಜಾವೀದ ಜಿ., ಗುಳಪ್ಪ ಕುಂಬಾರ ಇದ್ದರು. ಶಿವರಾಜ ಕೆ. ವಂದಿಸಿದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ