ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿನಲ್ಲೇ ಶ್ರೇಷ್ಠ: ಡಾ. ಎ. ಸೂರ್ಯಪ್ರಕಾಶ

KannadaprabhaNewsNetwork |  
Published : Jul 28, 2025, 12:32 AM IST
27ಎಚ್‌ಯುಬಿ30ಲೋಕಹಿತ ಟ್ರಸ್ಟ್ ಹಾಗೂ ವಿಶ್ವ ಸಂವಾದ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಆದ್ಯ ಪತ್ರಕರ್ತ ಮಹರ್ಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮೋಹನ ಹೆಗಡೆ ಹಾಗೂ ಆಕಾಶವಾಣಿ ನಿವೃತ್ತ ಸುದ್ದಿವಾಚಕ ನಾಗೇಶ ಶಾನಭಾಗ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯೇ ಜಗತ್ತಿನ ಬೇರೆ ದೇಶಗಳಿಗಿಂತ ಮಿಗಿಲಾದುದು. ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನ ಅಳವಡಿಸಿಕೊಂಡಿರುವ ತಮ್ಮ ದೇಶಗಳೇ ಶ್ರೇಷ್ಠ ಎಂದು ಘೋಷಿಸಿಕೊಂಡಿರುವ ಪಾಶ್ಚಿಮಾತ್ಯ ೩೦-೪೦ ದೇಶಗಳಲ್ಲಿ ರಾಜಪ್ರಭುತ್ವ, ವಂಶಪಾರಂಪರ್ಯ ಆಡಳಿತ, ಅಧಿಕಾರ ವ್ಯವಸ್ಥೆ ಇಂದಿಗೂ ಕಾಣುತ್ತೇವೆ.

ಹುಬ್ಬಳ್ಳಿ: ನಮ್ಮ ದೇಶದಲ್ಲಿ ಪ್ರಧಾನಿ ಸೇರಿದಂತೆ ಜನಪ್ರತಿನಿಧಿಗಳು ಪ್ರಜಾಸೇವಕರು. ಪ್ರಜಾಪ್ರಭುತ್ವ ಹೊಂದಿದ ಬೇರೆ ದೇಶಗಳಲ್ಲಿ ಈ ಭಾವನೆ ಇಲ್ಲ. ಹೀಗಾಗಿ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಶ್ರೇಷ್ಠವಾದುದು ಎಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಹಾಗೂ ಪ್ರಧಾನ ಮಂತ್ರಿ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ ಸದಸ್ಯ ಪದ್ಮಭೂಷಣ ಡಾ. ಎ. ಸೂರ್ಯಪ್ರಕಾಶ ಹೇಳಿದರು.

ಇಲ್ಲಿನ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಭಾನುವಾರ ಲೋಕಹಿತ ಟ್ರಸ್ಟ್ ಹಾಗೂ ವಿಶ್ವ ಸಂವಾದ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ಧ ಆದ್ಯ ಪತ್ರಕರ್ತ ಮಹರ್ಷಿ ನಾರದ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮೋಹನ ಹೆಗಡೆ ಹಾಗೂ ಆಕಾಶವಾಣಿ ನಿವೃತ್ತ ಸುದ್ದಿವಾಚಕ ನಾಗೇಶ ಶಾನಭಾಗ ಅವರನ್ನು ಸನ್ಮಾನಿಸಿ ಮಾತನಾಡಿದರು.

ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯೇ ಜಗತ್ತಿನ ಬೇರೆ ದೇಶಗಳಿಗಿಂತ ಮಿಗಿಲಾದುದು. ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನ ಅಳವಡಿಸಿಕೊಂಡಿರುವ ತಮ್ಮ ದೇಶಗಳೇ ಶ್ರೇಷ್ಠ ಎಂದು ಘೋಷಿಸಿಕೊಂಡಿರುವ ಪಾಶ್ಚಿಮಾತ್ಯ ೩೦-೪೦ ದೇಶಗಳಲ್ಲಿ ರಾಜಪ್ರಭುತ್ವ, ವಂಶಪಾರಂಪರ್ಯ ಆಡಳಿತ, ಅಧಿಕಾರ ವ್ಯವಸ್ಥೆ ಇಂದಿಗೂ ಕಾಣುತ್ತೇವೆ. ಆದರೆ, ನಮ್ಮ ದೇಶದಲ್ಲಿ ರಾಷ್ಟ್ರಪತಿ ಸಂವಿಧಾನ ಬದ್ಧ ಪರಮಾಧಿಕಾರ ಹೊಂದಿರುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರೇ ಅಧಿಕಾರ ವಹಿಸಿಕೊಂಡಾಗ ತಾವು ಪ್ರಧಾನಿಯಲ್ಲ; ಪ್ರಜಾಸೇವಕ ಎಂದು ನುಡಿದಿದ್ದರು. ಆದರೆ, ಆ ದೇಶಗಳಲ್ಲಿ ಈ ಭಾವನೆ ಇಲ್ಲ. ಹೀಗಾಗಿ, ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಶ್ರೇಷ್ಠವಾದುದು ಎಂದರು.

ಅರುಣಕುಮಾರ, ಅಮೃತ್ ಜೋಶಿ ಉಪಸ್ಥಿತರಿದ್ದರು. ಕಿರಣಕುಮಾರ ಗುಡ್ಡದಕೇರಿ ಸ್ವಾಗತಿಸಿದರು. ದಿವಾಕರ ಹೆಗಡೆ ನಿರೂಪಿಸಿದರು.

ಸವಾಲುಗಳೆಷ್ಟೇ ಇದ್ದರೂ ಮುದ್ರಣ ಮಾಧ್ಯಮ ಚಿರಾಯು: ಕೋವಿಡ್ ನಂತರ ಮುದ್ರಣ ಮಾಧ್ಯಮ ಸಾಕಷ್ಟು ಸವಾಲುಗಳನ್ನು ಎದುರಿಸಿ ಮುನ್ನಡೆಯುತ್ತಿದೆ. ಕೋವಿಡ್ ನಂತರ ದೇಶದಲ್ಲಿ ಸುಮಾರು ೩೦೦೦ಕ್ಕೂ ಹೆಚ್ಚು ಪತ್ರಿಕೆಗಳು ಮುಚ್ಚಿದವು. ಶೇ. ೬೫ರಷ್ಟು ಜಾಹೀರಾತು ಪಡೆಯುತ್ತಿದ್ದ ಮುದ್ರಣ ಮಾಧ್ಯಮಕ್ಕೆ ಈಗ ಕೇವಲ ಶೇ. ೨೫ರಷ್ಟು ಮಾತ್ರ ಜಾಹೀರಾತು ಬರುತ್ತಿದೆ. ಅಲ್ಲದೇ, ಟಿವಿ ನಂತರ ಡಿಜಿಟಲ್ ಮಾಧ್ಯಮದ ಅಬ್ಬರದ ನಡುವೆಯೂ ಮುದ್ರಣ ಮಾಧ್ಯಮ ಸುದ್ದಿ ವಿಷಯದಲ್ಲಿ ತನ್ನ ಸತ್ವ ಉಳಿಸಿಕೊಂಡು ನಡೆಯುತ್ತಿದೆ ಎಂದು ಸನ್ಮಾನಿತರಾದ ಹಿರಿಯ ಪತ್ರಕರ್ತ ಮೋಹನ ಹೆಗಡೆ ಹೇಳಿದರು.ಮೊಬೈಲ್, ಡಿಜಿಟಲ್ ಮಾಧ್ಯಮಗಳಲ್ಲಿನ ಅರೆಬರೆ ಸುದ್ದಿ ಓದಿಗಷ್ಟೇ ತೃಪ್ತರಾಗುವವರು ಶೇ. ೫೦ರಷ್ಟಿದ್ದರೆ ಇನ್ನೂ ಶೇ ೫೦ರಷ್ಟು ಓದುಗರು ಸಮಗ್ರ ಸುದ್ದಿ ಸಾರ ತಿಳಿಯಲು, ಮುದ್ರಣ ಮಾಧ್ಯಮವೇ ವಿಶ್ವಾಸಾರ್ಹ ಮಾಧ್ಯಮ ಎಂಬ ಕಾರಣಕ್ಕೆ ಮುದ್ರಣ ಮಾಧ್ಯಮ ಅಪೇಕ್ಷಿಸುತ್ತಿದ್ದಾರೆ. ಹೀಗಾಗಿ, ಇಂತಹ ಓದುಗರೇ ಪತ್ರಿಕೆಗಳಿಗೆ ಜೀವಾಳವಾಗಿದ್ದಾರೆ. ಎಷ್ಟೇ ಸವಾಲು ಎದುರಾದರೂ ಮುದ್ರಣ ಮಾಧ್ಯಮ ಚಿರಾಯುವಾಗಿರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ಪತ್ರಿಕೆ ಓದುವ ಅಭಿರುಚಿ ಬೆಳೆಸಬೇಕು. ಮುದ್ರಣ ಮಾಧ್ಯಮ ತಮ್ಮ ಜ್ಞಾನಾರ್ಜನೆಗೆ ಹೇಗೆ ಸಹಕಾರಿಯಾಯಿತು ಎಂಬುದನ್ನು ಹಿರಿಯರು ತಿಳಿಸಿ ಹೇಳಬೇಕು ಎಂದು ನುಡಿದರು.

ಆರ್‌ಎಸ್‌ಎಸ್ ಸಮಾಜಮುಖಿ ಕಾರ್ಯ ಶ್ಲಾಘನೀಯ

ನನ್ನ ವೃತ್ತಿ ಜೀವನ, ಕಾರ್ಯಗಳನ್ನು ಗುರುತಿಸಿ ಲೋಕಹಿತ ಟ್ರಸ್ಟ್ ನೀಡಿದ ಸನ್ಮಾನ ಸ್ಮರಣೀಯವಾದುದು. ನಾನು ವಿದ್ಯಾರ್ಥಿಯಾಗಿದ್ದಾಗಲೇ ಆರ್‌ಎಸ್‌ಎಸ್ ಕಾರ್ಯಚಟುವಟಿಕೆ, ಸಮಾಜಮುಖಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದೆ. ಹಲವು ದಶಕಗಳ ಕಾಲ ಅವಕಾಶ ಸಿಕ್ಕಾಗ ಕೆಲಸ ಮಾಡಿದ್ದೇನೆ ಎಂದು ಸನ್ಮಾನಿತರಾದ ಆಕಾಶವಾಣಿ ನಿವೃತ್ತ ಸುದ್ದಿವಾಚಕರಾದ ನಾಗೇಶ ಶಾನಭಾಗ ಹೇಳಿದರು.

ಆರ್‌ಎಸ್‌ಎಸ್ ಸಮಾಜಮುಖಿ ಕಾರ್ಯ ಮಾಡಿಕೊಂಡು ಹೋಗುತ್ತದೆ. ಅದು ಎಂದಿಗೂ ಪ್ರಚಾರ ಬಯಸಿಲ್ಲ ಎಂದು ನುಡಿದರು. ಲೋಕಹಿತ ಟ್ರಸ್ಟ್‌ನ ಈ ಸನ್ಮಾನ ನಾಡಿನ ಹೆಮ್ಮೆಯ ಲೋಕಶಿಕ್ಷಣ ಟ್ರಸ್ಟ್‌ಗೆ ಸಂದ ಗೌರವ ಎಂದು ಭಾವಿಸಿದ್ದೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮಾಜಮುಖಿ ಕಾರ್ಯ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂಘದ ಕಾರ್ಯಕರ್ತರ ಕಾರ್ಯ ಶ್ಲಾಘನೀಯ. ಲಾತೂರ್‌ನಲ್ಲಿ ಭೂಕಂಪ ಸಂಭವಿಸಿದ ವೇಳೆ ಸಂಘದ ಕಾರ್ಯಕರ್ತರು ಕೈಗೊಂಡ ಕಾರ್ಯ ದೇಶಕ್ಕೆ ಗೊತ್ತಿದೆ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''