ಬಹುತ್ವದಲ್ಲಿದೆ ಭಾರತದ ಅಸ್ಮಿತೆ: ಡಾ. ತೋಂಟದ ಸಿದ್ಧರಾಮ ಶ್ರೀ

KannadaprabhaNewsNetwork |  
Published : Aug 28, 2026, 02:45 AM IST
ಕಾರ್ಯಕ್ರಮದಲ್ಲಿ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ಬರೆದ ಭಾವೈಕ್ಯತೆಯ ಬೆಳಕು ಕೃತಿ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಜಗತ್ತಿನಲ್ಲಿ ಶಾಂತಿ- ನೆಮ್ಮದಿ ಪ್ರೀತಿ ಮೂಡಬೇಕಾದರೆ ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕಾಗಿದೆ. ಜಗತ್ತಿನಲ್ಲಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು, ಹೋರಾಟಗಾರರು ಜನ್ಮ ತಳೆದಿದ್ದಾರೆ.

ಗದಗ: ಭಾರತ ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿದೆ. ಪ್ರತಿಯೊಂದರಲ್ಲಿಯೂ ವೈವಿಧ್ಯತೆಯನ್ನು ಒಳಗೊಂಡಿರುವ ವಿಶ್ವದ ಏಕೈಕ ದೇಶ ಭಾರತ. ಭಾರತದ ಅಸ್ಮಿತೆ ಬಹುತ್ವದಲ್ಲಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ತಿಳಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2812ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನಾದ್ಯಂತ ಯುದ್ಧಗಳು ಹೆಚ್ಚಾಗುತ್ತಿವೆ. ಯುದ್ಧಗಳ ಪ್ರಭಾವದಿಂದ ಇಡೀ ಜಗತ್ತೆ ತಲ್ಲಣಿಸುತ್ತಿದೆ. ಭಯದ ವಾತಾವರಣದಲ್ಲಿ ಜನರು ಬದುಕುತ್ತಿದ್ದಾರೆ.

ಜಗತ್ತಿನಲ್ಲಿ ಶಾಂತಿ- ನೆಮ್ಮದಿ ಪ್ರೀತಿ ಮೂಡಬೇಕಾದರೆ ಮನುಷ್ಯ ಮನುಷ್ಯರ ಮಧ್ಯೆ ಭಾವಗಳು ಅರಳಬೇಕಾಗಿದೆ. ಜಗತ್ತಿನಲ್ಲಿ ಅನೇಕ ಪ್ರವಾದಿಗಳು, ಸಮಾಜ ಸುಧಾರಕರು, ಹೋರಾಟಗಾರರು ಜನ್ಮ ತಳೆದಿದ್ದಾರೆ. ಈ ಮಹಾತ್ಮರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ್ದಾರೆ. ಅವರಲ್ಲಿ ಮಹಮ್ಮದ್ ಪೈಗಂಬರ್, ಜಗಜ್ಯೋತಿ ಬಸವೇಶ್ವರರು, ಬುದ್ಧ, ಮಹಾವೀರ ಹೀಗೆ ಅನೇಕರಿದ್ದಾರೆ. ಇಂಥವರ ಆದರ್ಶ, ಮೌಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕು ಎಂದರು.

ವೈದ್ಯ ಡಾ. ಮಹಮ್ಮದ್ ಅಶ್ರಫ್ ದಸ್ತಗಿರಿಸಾಹೇಬ್ ಸಮುದ್ರಿ ಅವರು ಬರೆದ ಭಾವೈಕ್ಯತೆಯ ಬೆಳಕು ಕೃತಿಯ ಬಿಡುಗಡೆ ಮಾಡಲಾಯಿತು. ವಿಶ್ವ ಹಿರಿಯರ ದಿನಾಚರಣೆಯ ಪ್ರಯುಕ್ತ ಹಿರಿಯರಾದ ಮಾಜಿ ಸಚಿವ ಎಸ್.ಎಸ್. ಪಾಟೀಲ, ನಿವೃತ್ತ ಶಿಕ್ಷಕರಾದ ಚೆನ್ನಯ್ಯ ತೋಟಯ್ಯ ಹಿರೇಮಠ ಹಾಗೂ ಎಸ್.ಎಂ. ವಾಲಿ ಅವರನ್ನು ಸನ್ಮಾನಿಸಲಾಯಿತು.

ಶರಣರು ಕಂಡ ಅನಾದಿ ಬಸವಣ್ಣ ವಿಷಯದ ಕುರಿತು ಗಿರಿಜಕ್ಕ ಧರ್ಮರಡ್ಡಿ ಅವರು ಪ್ರವಚನ ಮಾಡಿದರು. ವಚನ ಸಂಗೀತ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ಸ್ಫೂರ್ತಿ ಸೈದಾಪೂರ, ವಚನ ಚಿಂತನ ಪುಷ್ಪಾವತಿ ಮನೋಹರ ಮಾಲಿಪಾಟೀಲ ನೆರವೇರಿಸಿದರು.

ದಾಸೋಹ ಸೇವೆಯನ್ನು ಚನ್ನಮ್ಮ ಚಳ್ಳಮರದ, ಲಲಿತಾ ಕಾಶಿನಾಥಗೌಡ ಪಾಟೀಲ ಹಾಗೂ ಪರಿವಾರ, ಗಿರಿಜಾದೇವಿ ಚನ್ನಬಸಯ್ಯ ಕನಕೇರಿಮಠ ಸಾ. ಬಾಗಲಕೋಟೆ ಅವರ ಸ್ಮರಣಾರ್ಥ ಅವರ ಕುಟುಂಬ ವರ್ಗ, ರೇವಣಸಿದ್ದಪ್ಪ ಚನ್ನಪ್ಪ ಬ್ಯಾಕೋಡ ಸಾ. ಹುಣಸಗಿ ಅವರ ಕುಟುಂಬ ವರ್ಗದವರು ಕೈಗೊಂಡಿದ್ದರು.

ಕೃತಿಯ ಲೇಖಕ ಎಂ.ಡಿ. ಸಮುದ್ರಿ, ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿದಂತೆ ಶ್ರೀಮಠದ ಸದ್ಭಕ್ತರು ಇದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಪೋಕ್ಲು ವ್ಯಾಪ್ತಿಯಲ್ಲಿ ಸಂಭ್ರಮದ ಈದ್ ಮಿಲಾದ್
ಟಿಟಿ ಮೇಲೆ ಲಾರಿ ಉರುಳಿ ನಾಲ್ವರಿಗೆ ಗಾಯ