ಭಾರತದ ವಿರಾಟ್ ಶಕ್ತಿ ವಿಶ್ವದೆದುರು ಅನಾವರಣ: ಆನಂದ ಕಂಪು

KannadaprabhaNewsNetwork |  
Published : May 11, 2025, 11:58 PM IST
ಭಾರತೀಯ ಯೋಧರ ರಕ್ಷಣೆ ಮತ್ತು ದೇಶದ ಜಯಕ್ಕಾಗಿ ತಾಲೂಕಿನ ನಾವಲಗಿ ಉದ್ಭವಮೂರ್ತಿ ಶ್ರೀಮಾರುತೇಶ್ವರ ದೇವಾಲಯದಲ್ಲಿ ಹೋಮ ನಡೆಸಲಾಯಿತು. | Kannada Prabha

ಸಾರಾಂಶ

ಭಾರತ ಶಾಂತಿಪ್ರಿಯ ದೇಶವಾದರೂ ನೆರೆಯ ಪಾಕಿಸ್ತಾನದ ಭಯೋತ್ಪಾದನೆಯ ಸತತ ಕಿರುಕುಳದಿಂದ ರೋಸಿಹೋಗಿ ಸಿಂದೂರ ಕಾರ್ಯಾಚರಣೆ ನಡೆಸಿದೆ. ನಮ್ಮ ವೀರಯೋಧರ ಆರೋಗ್ಯ ರಕ್ಷಣೆ ಮತ್ತು ದೇಶಕ್ಕೆ ಜಯ ಸಿಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಮತ್ತು ಹೋಮ ನಡೆಸಿದ್ದೇವೆ ಎಂದು ಬಿಜೆಪಿ ಧುರೀಣ ಆನಂದ ಕಂಪು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಭಾರತ ಶಾಂತಿಪ್ರಿಯ ದೇಶವಾದರೂ ನೆರೆಯ ಪಾಕಿಸ್ತಾನದ ಭಯೋತ್ಪಾದನೆಯ ಸತತ ಕಿರುಕುಳದಿಂದ ರೋಸಿಹೋಗಿ ಸಿಂದೂರ ಕಾರ್ಯಾಚರಣೆ ನಡೆಸಿದೆ. ನಮ್ಮ ವೀರಯೋಧರ ಆರೋಗ್ಯ ರಕ್ಷಣೆ ಮತ್ತು ದೇಶಕ್ಕೆ ಜಯ ಸಿಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಮತ್ತು ಹೋಮ ನಡೆಸಿದ್ದೇವೆ. ವಿಶ್ವಕ್ಕೆ ಅಂಟಿದ ಭಯೋತ್ಪಾದನೆ ಪಿಡುಗಿನ ಮೂಲ ಬೇರು ಪಾಕಿಸ್ತಾನದಲ್ಲೇ ಇದ್ದು, ಅದು ಸಂಪೂರ್ಣ ನಾಶವಾಗುವವರೆಗೂ ಭಾರತ ತನ್ನ ಕಾರ್ಯಾಚರಣೆ ಸ್ಥಗಿತಗೊಳಿಸಬಾರದು. ಪಿಒಕೆ ಮತ್ತೆ ಭಾರತಕ್ಕೆ ಸೇರ್ಪಡೆಯಾಗಬೇಕೆಂದು ಬಿಜೆಪಿ ಧುರೀಣ ಆನಂದ ಕಂಪು ಹೇಳಿದರು.

ನಾವಲಗಿ ಉದ್ಭವ ಮೂರ್ತಿ ಶ್ರೀ ಮಾರುತೇಶ್ವರ ದೇವಾಲಯದಲ್ಲಿ ಶನಿವಾರ ವಿಶೆಷ ಪೂಜೆ ಮತ್ತು ಹೋಮ ನಡೆಸಿದ ಬಳಿಕ ಮಾತನಾಡಿ, ವಿಶ್ವದ ಸಮಸ್ತ ದೇಶಗಳು ಭಯೋತ್ಪಾದನೆ ಪಿಡುಗಿಗೆ ಬಲಿಯಾಗಿವೆ. ಎಲ್ಲ ದೇಶಗಳೂ ಭಾರತದ ಹೋರಾಟಕ್ಕೆ ಬೆಂಬಲಿಸಿ ಭಯೊತ್ಪಾದನೆ ಅಮೂಲಾಗ್ರವಾಗಿ ಕಿತ್ತೆಸೆಯಬೇಕೆಂದರು.

ಹಿರಿಯರಾದ ಎಂ.ಆರ್.ವಾಲಿ, ಗುರು ಮರಡಿಮಠ, ಹನುಮಂತ ಸವದಿ, ದಾನಪ್ಪ ಆಸಂಗಿ, ವಿಠಲ ಜನವಾಡ, ಗಂಗಪ್ಪ ಅಮ್ಮಲಜೇರಿ, ಈರಪ್ಪ ಕಡಕಬಾಂವಿ, ಸಿದ್ದು ಕಂಚು, ರಾಜು ಕದಂ, ಬಸವರಾಜ ಯಾದವಾಡ, ಬಸಪ್ಪ ಕಂಚು, ಅಶೋಕ ಆಸಂಗಿ, ಸದಾಶಿವ ಬೆಳಗಲಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ