ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 36ನೇ ಅಖಿಲ ಭಾರತ ಅಂಚೆ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿನ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಬೆಂಬಲದ ಅಗತ್ಯವಿದೆ. ಎಲ್ಲಾ ವಯೋಮಾನದ ಜನರು ಪಂದ್ಯಾವಳಿಗಳಲ್ಲಿ ಒಟ್ಟುಗೂಡುವುದು ಅಪರೂಪದ ಸಂದರ್ಭಗಳಲ್ಲಿ ಒಂದಾಗಿದ್ದು, ಗೆಲುವು ಸುಲಭವಾಗಿ ಸಿಗುವುದಿಲ್ಲ. ಹಂತವಾಗಿ ಎಲ್ಲಾ ಸವಾಲನ್ನು ಎದುರಿಸಿದಾಗ ಗೆಲುವಿನ ಖುಷಿ ಸಿಗಲಿದೆ ಎಂದು ಅವರ ಸ್ವಂತ ಅನುಭವಗಳನ್ನು ಹೇಳಿ ಕ್ರೀಡಾಪಟುಗಳು ಎದುರಿಸಬೇಕಾದ ಸವಾಲುಗಳೇನು ಎಂದು ತಿಳಿಸಿದರು.
ದೇಶದ ಜನರ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ, ಭಾರತವನ್ನು ನಿಜವಾದ ಕ್ರೀಡಾ ರಾಷ್ಟ್ರವಾಗಿಸಲು ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಎಂದರು.ಕ್ರೀಡಾ ಸಮುದಾಯವನ್ನು ಸಂಪರ್ಕಿಸಲು ಮತ್ತು ಪ್ರೇರೇಪಿಸಲು ಅಂಚೆ ಮಾಧ್ಯಮವು ಸೂಕ್ತ ಸಾಧನವಾಗಿದೆ ಎಂಬುದಾಗಿ ಅವರು ಅಂಚೆ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಚೆಯು ನಿರಂತರವಾಗಿ ಜನರ ಜೊತೆಗೆ ಉತ್ತಮ ಸಂಬಂಧವನ್ನು ಹೊಂದಿದೆ. ದೇಶದ 21 ರಾಜ್ಯಗಳಿಂದ ಬಂದಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಬೆಂಗಳೂರು ಎಚ್ ಕ್ಯೂ ರಿಜನ್ ನ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡ್ಯಾಶ್, ಉತ್ತರ ಕರ್ನಾಟಕ ಅಂಚೆ ವಲಯದ ಪೋಸ್ಟರ್ ಮಾಸ್ಟರ್ ಜನರಲ್ ಕರ್ನಲ್ ಸುಶೀಲ್ ಕುಮಾರ್, ದಕ್ಷಿಣ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಚಂದ್ರಶೇಖರ್ ಕಾಕುಮನು, ದಕ್ಷಿಣ ಕರ್ನಾಟಕ ಅಂಚೆ ವಲಯದ ನಿರ್ದೇಶಕ ಸಂದೇಶ್ ಮಹದೇವಪ್ಪ ಹಾಗೂ ಮೈಸೂರು ವಿಭಾಗದ ಅಂಚೆಯ ಎಲ್ಲಾ ಸಿಬ್ಬಂದಿ ಇದ್ದರು.