ರಾಷ್ಟ್ರಕ್ಕೆ ಆಧ್ಯಾತ್ಮಿಕ ಜ್ಞಾನ ನೀಡಿದ ಭಾರತ

KannadaprabhaNewsNetwork |  
Published : Apr 05, 2025, 12:48 AM IST
3ಡಿಡಬ್ಲೂಡಿ6ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ದಾಸಿಮಯ್ಯನವರ ಆಧುನಿಕತೆ ಮತ್ತು ಪ್ರಭಾವವು ಇಂದಿನ ಸಮಾಜದಲ್ಲೂ ಪ್ರಸ್ತುತ. ಜಾತಿ-ಮತ ಭೇದ, ಅಸಹಿಷ್ಣುತೆ ಮತ್ತು ಅಸಮಾನತೆ ನಿವಾರಿಸಲು ಅವರ ಸಂದೇಶಗಳು ನಮಗೆ ಪಾಠವಾಗಬೇಕು

ಧಾರವಾಡ: ಇಡೀ ರಾಷ್ಟ್ರಕ್ಕೆ ಆಧ್ಯಾತ್ಮಿಕ ಜ್ಞಾನ ನೀಡಿದ ರಾಷ್ಟ್ರ ಭಾರತ ದೇಶ ಎಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.

ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ವಚನಕಾರ ದೇವರ ದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜ್ಞಾನ, ಅವರ ವಚನಗಳು ಪ್ರತಿಯೊಬ್ಬರ ಮನೆಮನೆಗೂ ಮುಟ್ಟುವ ವ್ಯವಸ್ಥೆ ಆಗಬೇಕು. ಈ ತರಹದ ಶರಣರನ್ನು ನಾವು ಕೇವಲ ಈ ಒಂದು ದಿನಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು ಎಂದರು.

ಜಿಲ್ಲಾ ದೇವಾಂಗ ಸಂಘ ಅಧ್ಯಕ್ಷ ಡಾ. ಕೆ.ಜಿ.ಬ್ಯಾಕೋಡಿ ಮಾತನಾಡಿ, 10ನೇ ಶತಮಾನದಲ್ಲಿ ದೇವರ ದಾಸಿಮಯ್ಯನವರ ನಂತರ ಸಾಕಷ್ಟು ಶರಣರು ಬಂದಿದ್ದಾರೆ.ಬಸವಣ್ಣವರು ಕೂಡ ಬಂದಿದ್ದಾರೆ. ಬಸವಣ್ಣನವರು ವಚನಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ. ಆದರೆ ದೇವರ ದಾಸಿಮಯ್ಯನವರ ವಚನ ಕನ್ನಡ, ಹಳಗನ್ನಡ ಬಗ್ಗೆ ಜ್ಞಾನವಿದ್ದರೆ ಮಾತ್ರ ಅದು ತಿಳಿಯುತ್ತದೆ ಎಂದರು.

ಜಗದೀಶ ಜವಳಿ ಮಾತನಾಡಿ, ದಾಸಿಮಯ್ಯನವರ ಆಧುನಿಕತೆ ಮತ್ತು ಪ್ರಭಾವವು ಇಂದಿನ ಸಮಾಜದಲ್ಲೂ ಪ್ರಸ್ತುತ. ಜಾತಿ-ಮತ ಭೇದ, ಅಸಹಿಷ್ಣುತೆ ಮತ್ತು ಅಸಮಾನತೆ ನಿವಾರಿಸಲು ಅವರ ಸಂದೇಶಗಳು ನಮಗೆ ಪಾಠವಾಗಬೇಕು. ಶ್ರಮ ಮತ್ತು ಪ್ರಾಮಾಣಿಕತೆಯಿಂದ ಬದುಕಿದರೆ ದೇವರ ಅನುಗ್ರಹ ದೊರೆಯುತ್ತದೆ ಎಂಬ ಅವರ ತತ್ವ ಸದಾ ಪ್ರೇರಣಾದಾಯಕ ಎಂದರು.

ರಾಣೆಬೆನ್ನೂರ ನಿವೃತ್ತ ಪ್ರೌಢಶಾಲಾ ಶಿಕ್ಷಕ ಎಸ್.ಕೆ. ದುರ್ಗದಸೀಮಿ ದೇವರ ದಾಸಿಮಯ್ಯರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಈರಣ್ಣ ಇಂಜಿನಗೇರಿ ನಿರೂಪಿಸಿದರು. ರವಿ ಡೊಳ್ಳಿ ವಂದಿಸಿದರು.

ಅಜಿತ್ ದೇಸಾಯಿ, ವಿನೋದ ಹುಲಿಮನಿ, ರವೀಂದ್ರ ಪಾಟೀಲ, ರವಿ ಲೋಲೆ, ಬಸವರಾಜ ಕೊಂಗಿ, ಬಸವರಾಜ ಕುಸುಬಿ ಮತ್ತಿತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ