ಪಾಕ್‌ ಪೂರ್ಣ ನಾಶವಾದ್ರೆ ಭಾರತಕ್ಕೆ ನೆಮ್ಮದಿ

KannadaprabhaNewsNetwork |  
Published : May 13, 2025, 01:32 AM IST
ವಡ್ಡರ ಸಮಾಜದ ವತಿಯಿಂದ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 15 ಅಡಿ ಎತ್ತರದ ಶ್ರೀ ಆಂಜನೇಯನ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಿತು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಪಾಕಿಸ್ತಾನವನ್ನು ಸಂಪೂರ್ಣ ನಾಶಗೊಳಿಸಿದರೆ ಮಾತ್ರ ಭಾರತಕ್ಕೆ ನೆಮ್ಮದಿಯಿದೆ. ಹೀಗಾಗಿ ಆ ದೇಶವನ್ನು ನಾಶಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಪಾಕಿಸ್ತಾನವನ್ನು ಸಂಪೂರ್ಣ ನಾಶಗೊಳಿಸಿದರೆ ಮಾತ್ರ ಭಾರತಕ್ಕೆ ನೆಮ್ಮದಿಯಿದೆ. ಹೀಗಾಗಿ ಆ ದೇಶವನ್ನು ನಾಶಗೊಳಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ವಡ್ಡರ ಸಮಾಜ ಹನುಮ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 15 ಅಡಿ ಎತ್ತರದ ಆಂಜನೇಯನ ಮೂರ್ತಿಯ ಭವ್ಯ ಶೋಭಾಯಾತ್ರೆಗೆ ಚಾಲನೆ ನೀಡಿ, ಹುತಾತ್ಮ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು. ಈ ದೇಶಕ್ಕೆ ಗಾಂಧಿ-ನೆಹರು ಅವಶ್ಯಕತೆಯಿಲ್ಲ. ಬೇಕಿರುವುದು ಡಾ.ಬಿ.ಆರ್.ಅಂಬೇಡ್ಕರ್, ನೇತಾಜಿ ಸುಭಾಷಚಂದ್ರ ಬೋಸ್, ಸರ್ದಾರ್ ವಲ್ಲಭ ಬಾಯಿ ಪಟೇಲ್, ಭಗತ್ ಸಿಂಗ್, ನರೇಂದ್ರ ಮೋದಿಯವರಂತಹ ದಿಟ್ಟ ನಾಯಕರು. 1942ರಲ್ಲೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದರು.

ಇಂದು ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ್ ಪರ ಪೋಸ್ಟ್ ಹಾಗೂ ಘೋಷಣೆ ಹಾಕುತ್ತಾರೆ. ಅಂತ ದೇಶದ್ರೋಹಿಗಳ ವಿರುದ್ಧ ಕೇಸ್ ದಾಖಲಿಸಿ, ಅವರ ಮೇಲೆ ನಿಗಾಯಿಡಿ. ಹಿಂದೂ ಮಹಾಪುರುಷರ, ದೇವರ ಜಾತ್ರೆ, ಉತ್ಸವಗಳನ್ನು ನಡೆದರೆ, ಯಾವುದೇ ಜಾತಿ ಮಾಡದೆ ಸಮಸ್ತ ಹಿಂದೂ ಬಾಂಧವರು ಒಂದಾಗಿ ಆಚರಿಸುವ ಮೂಲಕ ಒಗ್ಗಟ್ಟಾಗೋಣ. ನಾವು ಒಂದಾದರೇ ಯಾರು ಏನು ಮಾಡಲು ಆಗುವುದಿಲ್ಲ. ವಿಜಯಪುರ ನಗರದಲ್ಲಿಯೂ ಯಾರೇ ಬಂದರೂ ಏನು ಕಿತ್ತುಕೊಳ್ಳಲಾಗುವುದಿಲ್ಲ. ಯಾರು ಕೇಸರಿ ಟೋಪಿ, ಕೇಸರಿ ಶಾಲು, ಕೇಸರಿ ಪೇಟಾ ಧರಿಸುವುದಿಲ್ಲವೋ, ಅಂತವರಿಗೆ ಹಿಂದೂಗಳು ಒಂದು ವೋಟ್ ಸಹ ಹಾಕಬಾರದು ಎಂದು ಕರೆ ನೀಡಿದರು.

ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಬಿಜೆಪಿ ನಗರ ಮಂಡಲ ಮಾಜಿ ಅಧ್ಯಕ್ಷ ಶಂಕರ ಹೂಗಾರ, ಪಾಲಿಕೆ ಸದಸ್ಯರಾದ ವಿಠ್ಠಲ ಹೊಸಪೇಟ, ಎಂ.ಎಸ್.ಕರಡಿ, ಮಲ್ಲಿಕಾರ್ಜುನ ಗಡಗಿ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ರಾಹುಲ್ ಜಾಧವ, ಗಣೇಶ ಚವ್ಹಾಣ, ರಾಹುಲ್ ವಡ್ಡರ್, ಸಂತೋಷ ಗುಜ್ಜರಕರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ರದ್ದು ಮಾಡಿ, ನರೇಗಾ ಮರುಸ್ಥಾಪಿಸಿ: ಸಿದ್ದು
ಸಚಿವ ತಿಮ್ಮಾಪುರ ರಾಜೀನಾಮೆಗೆ ಅಹೋರಾತ್ರಿ ಧರಣಿ