ಮುಂದಿನ ದಿನಗಳಲ್ಲಿ ಭಾರತ ಅಮೇರಿಕಾವನ್ನು ಮೀರಿಸಲಿದೆ

KannadaprabhaNewsNetwork |  
Published : Aug 16, 2025, 12:00 AM IST
15 ಟಿವಿಕೆ 1 - ತುರುವೇಕೆರೆ ಪಟ್ಟಣದ ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಶಾಸಕ ಎಂ.ಟಿ.ಕೃಷ್ಣಪ್ಪ, ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಇದ್ದರು. | Kannada Prabha

ಸಾರಾಂಶ

ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಅಮೇರಿಕಾವನ್ನೂ ಮೀರಿ ಶಕ್ತಿಶಾಲಿ ಮತ್ತು ಆರ್ಥಿಕವಾಗಿ ಮುನ್ನಡೆಯುವ ರಾಷ್ಟ್ರವಾಗಿ ಬೆಳೆಯುವ ದಿನಗಳು ದೂರವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಅಮೇರಿಕಾವನ್ನೂ ಮೀರಿ ಶಕ್ತಿಶಾಲಿ ಮತ್ತು ಆರ್ಥಿಕವಾಗಿ ಮುನ್ನಡೆಯುವ ರಾಷ್ಟ್ರವಾಗಿ ಬೆಳೆಯುವ ದಿನಗಳು ದೂರವಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಆಶಾಭಾವನೆ ವ್ಯಕ್ತಪಡಿಸಿದರು.

ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಮೆರಿಕಾ, ರಷ್ಯಾ ಮತ್ತು ಚೀನಾವನ್ನೂ ಮೀರಿಸಿ ಬಾಹ್ಯಾಕಾಶ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಅಭೂತಪೂರ್ವ ಸಾಧನೆ ಮಾಡಿದೆ. ಇದು ನನ್ನ ಸ್ವತಂತ್ರ್ಯ ಭಾರತದ ಶಕ್ತಿ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು. ಎಲ್ಲ ಕ್ಷೇತ್ರದಲ್ಲೂ ಸ್ವಾವಲಂಬನೆಯನ್ನು ಸಾಧಿಸುವ ಮೂಲಕ ಇಡೀ ಜಗತ್ತಿನ ಆರ್ಥಿಕ ವಲಯದ ಜಿಡಿಪಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ಥಾನಕ್ಕೆ ತಕ್ಕ ಪಾಠ ಕಲಿಸಿದೆ. ದೇಶವನ್ನು ಕಾಯುವ ಸೈನಿಕರ ಸೇವೆಯನ್ನು ಸದಾ ಸ್ಮರಿಸಬೇಕಿದೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶವನ್ನು ಹಗಲಿರುಳು ಕಾಯುತ್ತಿದ್ದಾರೆ. ಅವರಿಗೆ ಎಷ್ಟು ಗೌರವ ನೀಡಿದರೂ ಸಾಲದು. ಭಾರತ ತನ್ನ ದೇಶದ ಏಕತೆ ವಿಚಾರಕ್ಕೆ ಬಂದರೆ ಬಗ್ಗುಬಡಿಯದೇ ಇರದು ಎಂಬುದನ್ನು ಸಾಬೀತುಪಡಿಸಿದೆ ಎಂದರು. ತಹಸೀಲ್ದಾರ್ ಎನ್.ಎ.ಕುಂಞ ಅಹಮದ್ ಪ್ರಾಸ್ತಾವಿಕ ನುಡಿಗಳನ್ನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹುತಾತ್ಮರಿಗೆ ಮತ್ತು ಮಹಾನ್ ನಾಯಕರಿಗೆ ಗೌರವ ಸಲ್ಲಿಸುವ ಸುದಿನ ಇದು ಎಂದು ಬಣ್ಣಿಸಿದರು.

ಇದೇ ವೇಳೆ ಸಾಧಕರಾದ ಚಂದ್ರಕಲಾ, ರಮೇಶ್, ಆದರ್ಶ, ಮೀಸೆ ರಾಮಣ್ಣ, ಸೋಬಾನೆ ಜಯಮ್ಮ, ಶಂಕರಣ್ಣ, ಉಮಾಶಂಕರ್, ಆನಂದ್‌ ರಾಜು, ಉಮಾ, ರಾಮಪ್ರಸಾದ್, ರಾಘವೇಂದ್ರ, ರಂಗಸ್ವಾಮಿ, ಮೇಘನಾ, ತೇಜಸ್, ಮಂಜುನಾಥ್‌, ಚಂದ್ರಕೀರ್ತಿಯವರನ್ನು ಸನ್ಮಾನಿಸಲಾಯಿತು. ಪಟ್ಟಣದ ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಸಮಾರಂಭದಲ್ಲಿ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಬಿಇಒ ಎನ್.ಸೋಮಶೇಖರ್, ಪಟ್ಟಣ ಪಂಚಾಯಿತಿ ಸದಸ್ಯರಾದ ಜಯ್ಯಮ್ಮ, ಭಾಗ್ಯಮ್ಮ, ಆಶಾ ರಾಜಶೇಖರ್, ಚಿದಾನಂದ್, ಸುರೇಶ್, ಮಧು, ಕಸಾಪ ಅಧ್ಯಕ್ಷ ಡಿ.ಪಿರಾಜು, ಪಶು ಇಲಾಖೆಯ ಡಾ.ರೇವಣ ಸಿದ್ದಯ್ಯ, ಸಿಪಿಐ ಲೋಹಿತ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂಜಾ, ಸೇರಿದಂತೆ ಅಧಿಕಾರಿಗಳು, ಜನ ಪ್ರತಿನಿಧಿಗಳು, ಶಾಲಾ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!