ಭಾರತೀಯ ಸೇನೆಯಿಂದ ಪಾಕಿಸ್ತಾನ ಹುಟ್ಟಡಗಿಸುವ ಕಾರ್ಯ: ಹಣಮಂತ ನಿರಾಣಿ

KannadaprabhaNewsNetwork |  
Published : May 10, 2025, 01:05 AM IST
ಭಾರತೀಯ ಸೇನೆ ಅಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ  ಬೀಳಗಿ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. | Kannada Prabha

ಸಾರಾಂಶ

ಧರ್ಮವನ್ನು ಕೇಳಿ 26 ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ, ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯ ಮಾಡಿದೆ. ನಮ್ಮ ಭಾರತೀಯ ಸೇನೆಗೆ ವಿಜಯವಾಗಲಿ. ನಮ್ಮ ದೇಶದ ಸೈನಿಕರ ತಾಕತ್ತು, ಪಾಪಿ ಪಾಕಿಸ್ತಾನಕ್ಕೆ ತಿಳಿಯಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಧರ್ಮವನ್ನು ಕೇಳಿ 26 ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ, ಪಾಕಿಸ್ತಾನದ ಹುಟ್ಟಡಗಿಸುವ ಕಾರ್ಯ ಮಾಡಿದೆ. ನಮ್ಮ ಭಾರತೀಯ ಸೇನೆಗೆ ವಿಜಯವಾಗಲಿ. ನಮ್ಮ ದೇಶದ ಸೈನಿಕರ ತಾಕತ್ತು, ಪಾಪಿ ಪಾಕಿಸ್ತಾನಕ್ಕೆ ತಿಳಿಯಲಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಸ್ಥಳೀಯ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸೇನೆಗೆ ಶಕ್ತಿ ತುಂಬಲು ಸೈನಿಕರ ಪರ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಅವರು ಮಾತನಾಡಿದರು.

ಏ.22 ಭಾರತೀಯರಿಗೆ ಕರಾಳ ದಿನ. ಪಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಗೆ 26 ಮಂದಿ ಪ್ರವಾಸಿಗರು ಹತರಾದರು. ಧರ್ಮ ಕೇಳಿ ಮನುಷ್ಯರನ್ನು ಕೊಂದಿದ್ದು ಉಗ್ರರ ಮತಾಂಧತೆ ತೋರಿಸುತ್ತದೆ ಎಂದರು.

ಪ್ರವಾಸಿಗರ ಮೇಲೆ ಹೇಡಿಗಳ ರೀತಿಯಲ್ಲಿ ದಾಳಿ ಮಾಡಿದ್ದ ಉಗ್ರರ ನೆಲೆಗಳನ್ನು ಧ್ವಂಸ ಮಾಡುವ ಮೂಲಕ ಭಾರತೀಯ ಸೈನಿಕರು ತಕ್ಕ ಉತ್ತರ ನೀಡಿದ್ದಾರೆ’ ಎಂದು ಬೀಳಗಿ ಭಾಜಪ ಮಂಡಲ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಹೇಳಿದರು.

ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಪಾಕಿಸ್ತಾನಕ್ಕೆ ರಾಜತಾಂತ್ರಿಕ ನಡೆಯಿಂದಲೂ ಭಾರತ ದಿಗ್ಬಂಧನ ಹಾಕುತ್ತಿದೆ. ಸಿಂಧೂ ನದಿಯ ಹರಿವಿಗೆ ತಡೆಯೊಡ್ಡಿದೆ. ಪಾಕಿಸ್ತಾನ ಈಗಾಗಲೇ ಆರ್ಥಿಕ ಹಾಗೂ ರಾಜಕೀಯವಾಗಿ ದಿವಾಳಿ ಎದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿಗೂ ಹಾಹಾಕಾರ ಉಂಟಾದರೆ ಅಲ್ಲಿ ಆಂತರಿಕ ಕ್ಷೋಭೆ ಉಂಟಾಗಿ ಜನರು ದಂಗೆ ಏಳುವ ಸಮಯ ದೂರವಿಲ್ಲ ಎಂದು ವಿ.ಜಿ. ರೇವಡಿಗಾರ ಹೇಳಿದರು.

ಸೈನಿಕರಿಗೆ ಜೈಕಾರ ಕೂಗಿದ ಪದಾಧಿಕಾರಿಗಳು, ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.ಎಮ್.ಎಸ್. ಕೊಮಾರದೇಸಾಯಿ, ಮಲ್ಲಿಕಾರ್ಜುನ ಅಂಗಡಿ, ಎಂ.ಎಂ.ಶಂಬೊಜಿ ಮಾತನಾಡಿದರು.

ಎಸ್ .ಎಮ್.ಕಟಗೇರಿ, ರಾಮಣ್ಣ ಕಾಳಪ್ಪಗೋಳ ,ಮುತ್ತು ಬೊರ್ಜಿ,ಬಸವಂತಪ್ಪ ಸಂಕಾನಟ್ಟಿ, ಪ್ರಕಾಶ್ ಕಟಗೇರಿ, ಅಪೀಲು ಗೋಕಾಕ,ವಿಠಲ ಗಡ್ಡದ, ವಿಜಯಲಕ್ಷ್ಮಿ ಪಾಟೀಲ, ಅಕ್ಕಮಹಾದೇವಿ ಮೈಸೂರು, ವೀರಣ್ಣ ತೋಟದ, ಗಂಗಾಧರ ಕಲಬುರ್ಗಿ, ಸತೀಶ ಅಂಗಡಿ ಇದ್ದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ