ಲಿಖಿತ ಸಂವಿಧಾನವಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪುಟಗಳನ್ನು ತಿರುಚುತ್ತಿರುವುದು ತುಳಿತಕ್ಕೊಳಗಾದವರ ಮೇಲೆ ತೋರುತ್ತಿರುವ ದಬ್ಬಾಳಿಕೆಯಾಗಿದೆ.
ಕನ್ನಡಪ್ರಭ ವಾರ್ತೆ ಸುರಪುರ
ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳಿಂದ ಸಂವಿಧಾನ ತಿರುಚುವ ಕೆಲಸ ಆಗಿಂದಾಗ್ಗೆ ನಡೆಯುತ್ತಿರುವುದು ಜನಸಾಮಾನ್ಯರ ಮೇಲೆ ನೆಡೆಯುತ್ತಿರುವ ದೌರ್ಜನ್ಯವಾಗಿದೆ. ಇದನ್ನು ತಡೆದು ನಮ್ಮ ಹಕ್ಕುಗಳನ್ನು ಚಲಾಯಿಸಲು ಸಂವಿಧಾನ ಜಾಗೃತಿ ಮತ್ತು ತಿಳಿವಳಿಕೆ ಅಗತ್ಯ ಎಂದು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಹೇಳಿದರು.
ನಗರದ ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮಹಿಳಾ ಬೌದ್ಧ ಪರಿಷತ್ ಹಾಗೂ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಅರಿವಿನ ಯಾನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಲಿಖಿತ ಸಂವಿಧಾನವಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಸಂವಿಧಾನದ ಪುಟಗಳನ್ನು ತಿರುಚುತ್ತಿರುವುದು ತುಳಿತಕ್ಕೊಳಗಾದವರ ಮೇಲೆ ತೋರುತ್ತಿರುವ ದಬ್ಬಾಳಿಕೆಯಾಗಿದೆ. ಯಾವುದೇ ರಾಷ್ಟ್ರದಲ್ಲಿ ಆಗದಷ್ಟು ತಿದ್ದುಪಡಿಗಳನ್ನು ನಮ್ಮ ದೇಶದಲ್ಲಿ ಮಾಡಲಾಗುತ್ತಿದೆ. ಇದನ್ನು ತಡೆಯಲು ಸಂವಿಧಾನ ಜಾಗೃತಿ ಅಗತ್ಯವಾಗಿದೆ ಎಂದರು.
ಮುಖಂಡ ರಾಹುಲ್ ಹುಲಿಮನಿ ಮಾತನಾಡಿ, ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಮಾ.10ರಂದು ಕೆಂಭಾವಿಯಲ್ಲಿ ಮಾತೆ ಸಾವಿತ್ರೀ ಭಾಯಿ ಫುಲೆಯವರ ಪುಣ್ಯಾನುರಾದ ದಿನ ನಿಮಿತ್ತ ಸಂವಿಧಾನ ಅರಿವಿನ ಯಾನ ಮಹಿಳಾ ಜಾಗೃತಿ ನಡೆಯಲಿದೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.