ಭಾರತೀಯ ಸಂವಿಧಾನ ಅಪಾಯದಲ್ಲಿದೆ: ಜಿ.ಎಸ್. ಪಾಟೀಲ

KannadaprabhaNewsNetwork |  
Published : Apr 04, 2024, 01:03 AM ISTUpdated : Apr 04, 2024, 01:04 AM IST
ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿದರು.  | Kannada Prabha

ಸಾರಾಂಶ

ಸಮಾಜಗಳಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ, ಸಮಾಜ ಅಭಿವೃದ್ಧಿಯಾಗದ ಹೊರತು ದೇಶ ಪರಿಪೂರ್ಣ ಅಭಿವೃದ್ಧಿಯಾಗದು. ಸಿಎಂ ಸಿದ್ದರಾಮಯ್ಯ ಸಾಮಾಜಿಕ ಯೋಜನೆಗಳ ಹರಿಕಾರರಾಗಿದ್ದು, ಕೇಂದ್ರ ಸರ್ಕಾರ ಸಾಮಾಜಿಕ ಯೋಜನೆ ಜಾರಿಗೆ ತರದೇ ಸಮಾಜಕ್ಕೆ ದ್ರೋಹ ಮಾಡುತ್ತಿದೆ

ನರೇಗಲ್ಲ: ದೇಶದ ಸಂವಿಧಾನ ಅಪಾಯದಲ್ಲಿದೆ. ವಿರೋಧ ಪಕ್ಷದ ನಾಯಕರನ್ನು ಉದ್ದೇಶಪೂರ್ವಕವಾಗಿ ಜೈಲಿಗೆ ಕಳುಹಿಸುವುದರ ಮೂಲಕ ಭಾರತೀಯ ಸಂವಿಧಾನ ಅವಮಾನಿಸುವ ಕಾರ್ಯ ಬಿಜೆಪಿ ಮಾಡುತ್ತಿದೆ ಎಂದು ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ನರೇಗಲ್ ಸಮೀಪದ ಅಬ್ಬಿಗೇರಿಯಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾಂಗ್ರೆಸ್‌ ಪಕ್ಷದ ಬ್ಯಾಂಕ್ ಖಾತೆಗಳನ್ನು ಮುಟ್ಟಗೋಲು ಹಾಕಿ ಕಟ್ಟಿಹಾಕಲು ಪ್ರಯತ್ನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದರು.

ಬಸವರಾಜ ಪಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜಗಳಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ, ಸಮಾಜ ಅಭಿವೃದ್ಧಿಯಾಗದ ಹೊರತು ದೇಶ ಪರಿಪೂರ್ಣ ಅಭಿವೃದ್ಧಿಯಾಗದು. ಸಿಎಂ ಸಿದ್ದರಾಮಯ್ಯ ಸಾಮಾಜಿಕ ಯೋಜನೆಗಳ ಹರಿಕಾರರಾಗಿದ್ದು, ಕೇಂದ್ರ ಸರ್ಕಾರ ಸಾಮಾಜಿಕ ಯೋಜನೆ ಜಾರಿಗೆ ತರದೇ ಸಮಾಜಕ್ಕೆ ದ್ರೋಹ ಮಾಡುತ್ತಿದೆ ಎಂದು ದೂರಿದರು.

ಈ ಸಂದರ್ಭದಲ್ಲಿ ಬಸವರಾಜ ಶ್ರೀಗಳು, ಪರಶುರಾಮ ಅಳಗವಾಡಿ, ಬಸವರಾಜ ನವಲಗುಂದ, ವಿ.ಆರ್. ಗುಡಿಸಾಗರ, ವಿ.ಬಿ. ಸೋಮನಕಟ್ಟಿ ಮಠ, ಅಕ್ಷಯ ಪಾಟೀಲ, ಎಸ್.ಎಚ್. ಸೊಂಪೂರ, ರೂಪಾ ಅಂಗಡಿ, ಆರ್.ಬಿ. ಬಸವರಡ್ಡೇರ, ಗುರಣ್ಣ ಅವರಡ್ಡಿ, ಸುರೇಶ ಬಸವರಡ್ಡೇರ, ಮಂಜು ಪಸಾರದ, ಸಕ್ರಗೌಡ್ರು ಪಾಟೀಲ, ಸಿದ್ದು ಹನುಮನಾಳ, ಮುತ್ತಪ್ಪ ಕುಕನೂರ, ಎಚ್.ಟಿ. ದ್ವಾಸಲ, ಬಸವರಾಜ ತಳವಾರ, ಮಹದೇವಪ್ಪ ಕಂಬಳಿ, ಭೀಮಶಿ ಮಲ್ಲಾಪುರ, ಸಂಗಣ್ಣ ಉಪಾಧ್ಯ, ಶಿವಪುತ್ರಪ್ಪ ಕೆಂಗಾರ, ಲಕ್ಷ್ಮಣ ಹಿರೇಮನಿ, ಅಂದಪ್ಪ ವೀರಾಪೂರ. ಸಿ.ಕೆ.ಕಾಳಗಿ, ಸುರೇಶ ಶಿರೋಳ, ರಾಮನಗೌಡ ಹಲಕುರ್ಕಿ, ಮಹಾಂತೇಶ ತಳವಾರ, ಬಾಬು ಬನ್ನಿಕೊಪ್ಪ, ಮಂಜು ಚಿತ್ತರಗಿ, ಸೋಮು ವಡವಿ, ಎ.ಕೆ. ಮಳಗಿ, ಭೀಮಣ್ಣ ಚಿಕ್ಕೇನಕೊಪ್ಪ, ಮಲ್ಲಣ್ಣ ಕಲ್ಲೇಶ್ಯಾನಿ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್