ಕನ್ನಡಪ್ರಭ ವಾರ್ತೆ ಕೊರಟಗೆರೆ
ಪಟ್ಟಣದ ಪಂಚಾಯಿತಿ ಮುಂಭಾಗದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾ ರಥವು ತಾಲೂಕಿಗೆ ಬಂದಿದ್ದು, ನಾಲ್ಕು ದಿನಗಳ ಕಾಲ ತಾಲೂಕಿನಾದ್ಯಂತ ಎಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಸಂವಿಧಾನದ ಜಾಗೃತಿಯನ್ನು ಮೂಡಿಸುತ್ತದೆ. ಸಂವಿಧಾನದಲ್ಲಿ ದೇಶದ ಆಡಳಿತ, ಕಾನೂನು ಸುವ್ಯವಸ್ಥೆ ವ್ಯಕ್ತಿ ಸ್ವಾತಂತ್ರ, ಆಚರಣೆ ಸೇರಿದಂತೆ ದೇಶದಲ್ಲಿ ಜನರ ಬದುಕಿನ ಬಗ್ಗೆ ರೂಪಿಸಿಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಾಕಷ್ಟು ಶ್ರಮದ ನಂತರ 2ವರ್ಷ 11 ತಿಂಗಳು 18 ದಿನಗಳ ಕಾಲ 11 ಸಭೆಗಳನ್ನು 2475 ಪುಟಗಳ ತಿದ್ದು ಪಡಿಗಳನ್ನ ಮಾಡಿ ದೇಶದ ಹಿತ ಕಾಪಾಡಲು 1950 ಜ.26 ರಂದು ಸಂವಿಧಾನವು ಜಾರಿಗೆ ಬಂದಿತ್ತು. ಇಂತಹ ಮಹತ್ವದ ಸಂವಿಧಾನವನ್ನು ಭಾರತದ ಎಲ್ಲಾ ನಾಗರಿಕರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪ್ಮೂಲ ವ್ಯಕ್ತಿ ಶಿವಕುಮಾರ್ ಮಾತನಾಡಿ, ಸಂವಿಧಾನದಲ್ಲಿ ಮಹಿಳೆಯರ ಪ್ರಗತಿಯೂ ಕೂಡ ಆದರ್ಶಗಳ ಮಾನದಂಡದಲ್ಲಿ ಸೇರಿಕೊಂಡಿದ್ದು, ಸಂವಿಧಾನದ ಮಹತ್ವವು ರಾಷ್ಟ್ರೀಯತೆಯ ಏಕತೆಯನ್ನು ಒಳಗೊಂಡಿದೆ, ದೇಶಕ್ಕೆ 1947 ರಲ್ಲಿ ಸ್ವತಂತ್ರ ಬಂದರು ಬ್ರಿಟಿಷ್ ಕಾನೂನುಗಳು ಜಾರಿಯಲ್ಲಿದ್ದವು. ಇದರ ಪರ್ಯಾಯವಾಗಿ 1946 ರ ಡಿ.9 ರಂದು ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ತಾತ್ಕಾಲಿಕ ಕರಡು ಸಮಿತಿಯನ್ನು ರಚಿಸಲಾಯಿತು, ನಂತರ ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ನೇತೃತ್ವದಲ್ಲಿ ಪೂರ್ಣ ಪ್ರಮಾಣಾದ ಸಂವಿಧಾನವು ರಚನೆಗೊಂಡಿತು ಎಂದು ತಿಳಿಸಿದರು.ಸಂವಿಧಾನ ಜಾಗೃತಿ ಜಾಥಾದಲ್ಲಿ ಶಾಲಾ ಮಕ್ಕಳು, ವಿವಿಧ ಸಾಂಸ್ಕೃತಿ ಪ್ರದರ್ಶನದೊಂದಿಗೆ ಮೇರವಣಿಗೆಯಲ್ಲಿ ಭಾಗವಹಿಸಿದ್ದರು, ವಿವಿಧ ಸಂಘಟನೆಗಳ ಕಲಾತಂಡಗಳು ವಾದ್ಯದೊಂದಿಗೆ ಬಾಗವಹಿಸಿದ್ದವು, ಈ ಸಂದರ್ಭಧಲ್ಲಿ ವಿವಿಧ ಶಾಲೆಗಳಲ್ಲಿ ಸಂವಿಧಾನ ಜಾಗೃತಿ ಬಗ್ಗೆ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.