)
ಶ್ರೀ ಬನಶಂಕರಿದೇವಿ ಸೇವಾ ಸಮಿತಿಯಿಂದ ಬನದ ಹುಣ್ಣಿಮೆ ಪೂಜೆ
ಭಾರತ ಸನಾತನ ಸಂಸ್ಕೃತಿ ತಳಹದಿ ಮೇಲೆ ನಿಂತಿದ್ದು, ಇಲ್ಲಿ ಮುಕ್ಕೋಟಿ ಶಕ್ತಿ ದೇವತೆಗಳು ನೆಲೆಸಿವೆ. ವರ್ಷದ 12 ಅಮಾವಾಸ್ಯೆ ಹಾಗೂ 12 ಹುಣ್ಣಿಮೆಗಳೂ ಶ್ರೇಷ್ಠವಾಗಿವೆ ಎಂದು ರಂಭಾಪುರಿ ಶಾಖಾಖಾಸಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ನೆಹರು ನಗರದ ಶ್ರೀ ಬನಶಂಕರಿದೇವಿ ಸೇವಾ ಸಮಿತಿಯಿಂದ ಶನಿವಾರ ನಡೆದ ಬನದ ಹುಣ್ಣಿಮೆ ಮಹೋತ್ಸವ ಅಂಗವಾಗಿ 12ನೇ ವರ್ಷದ ಅನ್ನದಾಸೋಹದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಧನ್ವಂತರಿ, ದುರ್ಗಾದೇವಿ ಅವತಾರವಾದ ಶ್ರೀ ಬನಶಂಕರಿಯನ್ನು ಭಕ್ತಿ ಮತ್ತು ನಂಬಿಕೆಯಿಂದ ಪೂಜಿಸಿದರೆ ಕಷ್ಟಗಳು ದೂರಾಗುತ್ತವೆ. ಭಾರತೀಯ ಸಂಸ್ಕೃತಿ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಬೆಳೆದುಬಂದಿದೆ. ದೇವತಾ ಆರಾಧನೆ ನಮ್ಮ ಪದ್ಧತಿ. ನಾವು ಎಲ್ಲರಿಗೂ ಒಳಿತು ಬಯಸಿ ದುಡಿದರೆ, ಪ್ರಾರ್ಥಿಸಿದರೆ ನಮ್ಮನ್ನು ಸಲಹುತ್ತಾಳೆ. ಮತ್ತೊಬ್ಬರನ್ನು ದ್ವೇಷಿಸಿ ಕೇಡು ಬಯಸಿದರೆ ಚಾಮುಂಡಿಯಾಗಿ ಶಿಕ್ಷಿಸಲೂ ಬಲ್ಲಳು ಎಂಬುದನ್ನು ನಾವು ಅರಿಯಬೇಕು ಎಂದರು.ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮತನ ಮರೆಯುತ್ತಿದ್ದೇವೆ. ಇದರಿಂದ ಆಧುನಿಕ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಿ ಭಕ್ತಿ ದೂರವಾಗುತ್ತಿದೆ. ನಾವು ಎಚ್ಚೆತ್ತುಕೊಂಡು ನಡೆಯದಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದ ಅನ್ಯಧರ್ಮೀಯರು ನಮ್ಮ ಮೇಲೆ ಅತಿಕ್ರಮಣ ನಡೆಸುವಂತಾಗುತ್ತಿದೆ. ನಾವು ಭಾರತೀಯ ಸಂಸ್ಕೃತಿ ಉಳಿವಿಗೆ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ತಿಳಿಸಿದರು.ಬನಶಂಕರಿ ಮಹಿಳಾ ಸಂಘದವರು ಬೆಳಗ್ಗೆ ಗಂಗಾಪೂಜೆ ನೆರವೇರಿಸಿದ ಬಳಿಕ ಸದ್ಯೋಜಾತ ಶಾಸ್ತ್ರಿ ನೇತೃತ್ವದಲ್ಲಿ ಪುಣ್ಯಾಹ, ಪಂಚಾಮೃತ ಅಭಿಷೇಕ, ಲಲಿತಾ ಸಹಸ್ರನಾಮ ಪಾರಾಯಣ, ಮಹಾಮಂಗಳಾರತಿ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಅನ್ನದಾಸೋಹ ಏರ್ಪಡಿಸಲಾಗಿತ್ತು.ಸವಿತಾ ರಮೇಶ್, ಅರೆಕಲ್ ಪ್ರಕಾಶ್, ಸಮಿತಿ ಗೌರವಾಧ್ಯಕ್ಷ ಲೋಕೇಶ್, ಅಧ್ಯಕ್ಷ ಸುರೇಶ್ ಬಾಬು, ನಾಗರಾಜು, ವೆಂಕಟೇಶ್, ಎ.ತಿಪ್ಪೇಶ್, ಹರೀಶ್, ಬಿ.ಎಲ್.ಈಶ್ವರಪ್ಪ, ಮಧುಕುಮಾರ್, ಶಶಿಪ್ರಕಾಶ್, ಲೋಕೇಶ್, ಯೋಗೀಶ, ಸತೀಶ್, ಸುರೇಶ್, ರಾಜು ಇತರರಿದ್ದರು3 ಬೀರೂರು 2ಬೀರೂರಿನ ಶ್ರೀ ಬನಶಂಕರಿ ದೇಗುಲದಲ್ಲಿ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಲೋಕೇಶ್, ಸುರೇಶ್, ಅರೇಕಲ್ ಪ್ರಕಾಶ್, ತಿಪ್ಪೇಶ್, ಸುರೇಶ್ ಬಾಬು, ಈಶ್ವರಪ್ಪ, ಇತರರಿದ್ದರು