ಭಾರತೀಯ ಸಂಸ್ಕೃತಿಯೇ ಶ್ರಮ ಸಂಸ್ಕೃತಿ: ಮಾಸ್ಕೇರಿ ನಾಯಕ

KannadaprabhaNewsNetwork |  
Published : Jun 02, 2026, 02:45 AM IST
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಭಾರತೀಯ ಸಂಸ್ಕೃತಿಯೇ ಶ್ರಮ ಸಂಸ್ಕೃತಿ. ಶ್ರಮ ಸಂಸ್ಕೃತಿಯಲ್ಲಿ ಆಗೋಚರ ಶಕ್ತಿಯನ್ನು ಆರಾಧಿಸುವರೆ ನಿಜ ಸನಾತನೀಯರು.

ಕನ್ನಡಪ್ರಭ ವಾರ್ತೆ ದಾಂಡೇಲಿ

ಭಾರತೀಯ ಸಂಸ್ಕೃತಿಯೇ ಶ್ರಮ ಸಂಸ್ಕೃತಿ. ಶ್ರಮ ಸಂಸ್ಕೃತಿಯಲ್ಲಿ ಆಗೋಚರ ಶಕ್ತಿಯನ್ನು ಆರಾಧಿಸುವರೆ ನಿಜ ಸನಾತನೀಯರು. ಅದೇ ಅಧ್ಯಾತ್ಮ. ಅವನು ಶಿಲ್ಪಿ ಆಗಿರಲಿ, ಮಂತ್ರಾನುಷ್ಠಾನೆಯೇ ಆಗಿರಲಿ, ತನ್ನೊಳಗೆ ಕಲ್ಪಿಸಿ ಕೊಂಡ ದೈವಕ್ಕೆ ಸುಂದರ ಸ್ವರೂಪ ಕೊಡಬಲ್ಲನು, ಮತ್ತು ಅದನ್ನು ವರ್ಣನೆ ಮಾಡಬಲ್ಲನು, ವರ್ಣನೆ ಮಾಡಲಾಗದವನು ಸತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸಲಾದ ಭಾವ ಉಳ್ಳವನು. ಆತನು ಎನ್ನನ್ನು ಸಾಧಿಸಲಾರ ಎಂದು ಹಿರಿಯ ಸಾಹಿತಿ ಮಾಸ್ಕೇರಿ ನಾಯಕ ಹೇಳಿದರು.

ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆ ಮತ್ತು ಭಾರತಿ ಪ್ರಕಾಶನ ದಾಂಡೇಲಿ ಇವುಗಳ ಸಹಯೋಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಗೀತಾಂಜಲಿ ಕವಿ ಬಂಗಾಳದ ರವೀಂದ್ರನಾಥ ಠಾಗೋ‌ರ್ ಜನುಮ ದಿನದ ಪ್ರಯುಕ್ತ ಆಚರಿಸಲಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮಗೆ ಸುಲಭವಾಗಿ ದೊರಕುವಂತ ಭಾವಾರ್ಥ ಮತ್ತು ಶಬ್ದಾರ್ಥ ಸಹಿತವಾದಂತ ಕಾವ್ಯವನ್ನು ಮನೆ ಮನೆಯಲ್ಲಿಯೂ ಆರಾಧಿಸುವಂತ ಪ್ರಕ್ರಿಯೆ ನಡೆಯಬೇಕು. ಅದಕ್ಕೆ ರಾಜಕೀಯವಾದ ಯಾವುದೇ ಲೇಪವನ್ನು ಕೊಡಬಾರದು ಎಂದರು.

ಮಾಸ್ಕೇರಿ ನಾಯಕರ ಕಿರುಕವನ ಚಂದ್ರ ಚೆಂದುಳ್ಳಿ ಕುರಿತು ವಿಶ್ಲೇಷಿದ ಮೈಸೂರಿನ ಕೆ.ಟಿ. ಶ್ರೀಮತಿ, ನಾಗರತ್ನ ಲೋಕೇಶ್ ಶಿರಸಿ, ಜಿ ವಿ. ಕೊಪ್ಪಲ ತೋಟ, ಕಲ್ಪನಾ ಹೆಗಡೆ ಶಿರಸಿ, ರೇಣುಕಾ ಭಟ್ ಬ್ಯಾಗದ್ದೆ, ದಾಂಡೇಲಿ ನಗರದ ಪ್ರವೀಣ ಸುಲಾಖೆ, ನರೇಶ ನಾಯ್ಕ, ರವೀಂದ್ರನಾಥ ಲಕ್ಷ್ಮೀಶ್ವರ ಮತ್ತು ರಾಜೇಶ್ ತಳೆಕರ್ ಅವರಿಗೆ ಫಲಕ ನೀಡಿ ಗೌರವಿಸಲಾಯಿತು.

ಬದುವಂತಗೌಡ ಪಾಟೀಲ್, ಕೃಷ್ಣ ಲಕ್ಷ್ಮೀಶ್ವರ, ರವಿಕುಮಾರ್ ಚವ್ಹಾಣ, ರಮೇಶ್ ಚಂದಾವರ್, ಶ್ರೀನಾಥ ಪಾಸಲ್ಕರ್, ತೇಜಸ್ ಎನ್. ರಾವ್‌, ಜನ್ನು ಕಾಟೇಕರ, ಅನಂತ ಪುರಾಣಿಕ, ಗಾಯಕಿ ಜಯಾ ನಾಯ್ಕ ಮತ್ತು ಲಕ್ಷ್ಮಿ ಸಿಂಗಾಡಿ ಅವರನ್ನು ಸನ್ಮಾನಿಸಲಾಯಿತು.

ಮೈಸೂರಿನ ಸಾಹಿತಿ ಕೆ.ಟಿ .ಶ್ರೀಮತಿ ಮತ್ತು ಶಿರಸಿಯ ನಾಗರತ್ನ ಲೋಕೇಶ್ ಮಾಸ್ಕೇರಿ ನಾಯಕ ಅವರ ಕುರಿತಾದ ಸ್ವರಚಿತ ಕವನ ವಾಚಿಸಿ ವಿಶ್ಲೇಷಿಸಿದರು.

ಕವಿ ರವೀಂದ್ರ ಲಕ್ಷ್ಮೇಶ್ವರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು, ಹಾಸ್ಯ ಕಲಾವಿದ ವಿಶ್ವನಾಥ ಭಾಗ್ವತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೋಷನ್ ನೇತ್ರಾವಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಶಿಕ್ಷಕಿ ನಂದಿನಿ ನಾಯ್ಕ ನಿರೂಪಿಸಿದ ಕಾರ್ಯಕ್ರಮದಲ್ಲಿ ಬದುವಂತಗೌಡ ಪಾಟೀಲ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಭಾರತಿ ಕವರಿ, ಕೃಷ್ಣ ಕುಲಕರ್ಣಿ, ನಾಗೇಂದ್ರ, ಶಿವು ಭೂಮಿಕಾ ಕೆ, ಡಿ.ಜಿ. ದೇಸಾಯಿ, ಆಕಾಶ, ಕೌಡಿಮಟ್ಟಿ, ಶಾರದಾ ಪರಶುರಾಮ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸಿ: ಟಿ.ಎಸ್.ಗೋಪಾಲ್
ಮಾನಸಿಕ ಕಾಯಿಲೆಗೆ ಓದು-ಸಂಗೀತವೇ ದಿವ್ಯೌಷಧ